ಮಧ್ಯ ಪ್ರದೇಶ(ಸೆ.11): ವಯಸ್ಸ 69, ಕಾಂಗ್ರೆಸ್‌ನ ಹಿರಿಯ ನಾಯಕ, ಪ್ರತಿ ದಿನ 20 ಕಿಲೋಮೀಟರ್ ಕಾಲ್ನಡಿಗೆ ಮೂಲಕ  ಬಿಜೆಪಿ ಸರ್ಕಾರದ ಅಕ್ರಮ ಮರುಳುಗಾರಿಗೆ ವಿರುದ್ಧ ಹೋರಾಟ. ನದಿ ಬಚಾವ್ ಯಾತ್ರೆ ಮೂಲಕ ಇದೀಗ ಮಧ್ಯ ಪ್ರದೇಶದಲ್ಲಿ ಗೋವಿಂದ್ ಸಿಂಗ್ ಹೊಸ ಆಂದೋಲನ ಆರಂಭಿಸಿದ್ದಾರೆ. ಗ್ವಾಲಿಯರ್ ಹಾಗೂ ಚಂಬಲ್ ವಲಯದಲ್ಲಿ ಇದೀಗ ಕಾಂಗ್ರೆಸ್ ಹೋರಾಟ ತೀವ್ರಗೊಳ್ಳುತ್ತಿದೆ.

ತಲೆಕೆಳಗಾಗಿ ನಿಂತು ಡಿಸಿ ವಿರುದ್ಧ ಕಾಂಗ್ರೆಸ್‌ ಶಾಸಕ ಧರಣಿ!.

ಗ್ವಾಲಿಯರ್ ಹಾಗೂ ಚಂಬಲ್ ವಲಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಕ್ರಮ ಮರಳುಗಾರಿ ನಡೆಸುತ್ತಿದೆ. ಇದರಿಂದ ಇಲ್ಲಿನ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. 10 ವರ್ಷದಲ್ಲಿ ನದಿ ನೀರು ಶೇಕಡಾ 70  ರಷ್ಟು ಬತ್ತಿ ಹೋಗಿದೆ. ಮಳೆಗಾಲದಲ್ಲಿ ನದಿ ಪಾತ್ರದ ಸ್ಥಳಗಳು ಕೊಚ್ಚಿ ಹೋಗುತ್ತಿದೆ. ಇದಕ್ಕೆ ಅಕ್ರಮ ಮರುಳುಗಾರಿ ಕಾರಣ ಎಂದು ಗೋವಿಂದ್ ಸಿಂಗ್ ಹೇಳಿದ್ದಾರೆ.

ಭ್ರಷ್ಟಾಚಾರದ ಅವತಾರ, ಕೋಟ್ಯಾಂತರ ಮೌಲ್ಯದ ಸೇತುವೆ ಉದ್ಘಾಟನೆಗೂ ಮೊದಲೇ ಖಲ್ಲಾಸ್!

ಗೋವಿಂದ್ ಸಿಂಗ್ ಅವರ ನದಿ ಬಚಾವ್ ಯಾತ್ರೆ ಸೆಪ್ಟೆಂಬರ್ 5 ರಿಂದ ಆರಂಭಗೊಂಡಿದೆ. ಬಿಂದ್ ಹಾಗೂ ದಾತಿಯಾ ಜಿಲ್ಲೆಗಳಲ್ಲಿ ಈ ಆಂದೋಲನ ಆಯೋಜಿಸಲಾಗಿದೆ. ಗೋವಿಂದ್ ಸಿಂಗ್ ಅವರ ಅಭಿಯಾನದಲ್ಲಿ ರಾಜ್ಯ ಸಭಾ ಎಂಪಿ ವಿವೇಕ್ ತಂಖಾ, ಮಧ್ಯ ಪ್ರದೇಶ ಕ್ರಾಂಗ್ರೆಸ್ ಅಧ್ಯಕ್ಷ ರಾಮ್‍ನಿವಾಸ್ ರಾವತ್, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ.

ಗ್ವಾಲಿಯರ್ ಹಾಗೂ ಚಂಬಲ್ ವಲಯದಲ್ಲಿ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಚುನಾವಣ ಆಯೋಗ ದಿನಾಂಕ ಬಹಿರಂಗ ಪಡಿಸಲಿದೆ. ಹೀಗಾಗಿ ಚಂಬಲ್ ಹಾಗೂ ಗ್ವಾಲಿಯರ್ ವಲಯದಲ್ಲಿ ಅಧಿಪತ್ಯ ಸಾಧಿಸಲು ಕಾಂಗ್ರೆಸ್ ಅಕ್ರಮ ಮರಳುಗಾರಿಕೆ ದಾಳವನ್ನು ಉರುಳಿಸಿದೆ. ಈ ಮೂಲಕ ಈ ಭಾಗದ ಜನರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಭಿಯಾನದ ಮೂಲಕ ಮತಗಳಿಸಲು ಕಾಂಗ್ರೆಸ್ ಮುಂದಾಗಿದೆ. ಕೇವಲ ಮತಕ್ಕಾಗಿ ಈ ಅಭಿಯಾನ ಸೀಮಿತವಾದರೆ ಕಷ್ಟ, ಬದಲಾಗಿ ಇಲ್ಲಿನ ಭಾಗದ ಜನರ ಸಮಸ್ಯೆಗೆ ಧನಿಯಾದರೆ ಉತ್ತಮ.