ಬೋಪಾಲ್‌(ಸೆ.09): ಸ್ಥಳೀಯ ಜಿಲ್ಲಾಧಿಕಾರಿ ತಮ್ಮ ಭೇಟಿಗೆ ಅವಕಾಶ ನೀಡಲಿಲ್ಲವೆಂಬ ಕಾರಣಕ್ಕೆ ಸಿಡಿದೆದ್ದ ಶಾಸಕರೊಬ್ಬರು ತಲೆಕೆಳಗಾಗಿ ನಿಂತು ಪ್ರತಿಭಟಿಸಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಟಲ್‌ ಎಕ್ಸ್‌ಪ್ರೆಸ್‌ ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿಗೆ ಸರಿಯಾದ ಪರಿಹಾರ ಧನ ನೀಡುವಂತೆ ಕೋರುವ ಸಲುವಾಗಿ ಕಾಂಗ್ರೆಸ್‌ ಶಾಸಕ ಬಾಬು ಸಿಂಗ್‌ ಅವರು ತಮ್ಮ ಬೆಂಬಲಿಗರೊಂದಿಗೆ ಭೋಪಾಲ್‌ನಿಂದ 390 ಕಿ.ಮೀ ದೂರದ ಶೀಪುರ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ್ದರು.

ಆದರೆ, ಜಾಂಡೇಲ್‌ ಅವರ ಭೇಟಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ. ಸುದೀರ್ಘ ಕಾಲ ಕಾದು ಬೇಸತ್ತ ಶಾಸಕ ಜಾಂಡೇಲ್‌ ಕೊನೆಗೆ ಅಂಗಿ ಬಿಚ್ಚಿ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸಿದರು.