ಮಧ್ಯಪ್ರದೇಶದ ಶಾಸಕರೊಬ್ಬರು  ಮಹಿಳಾ ಡಾನ್ಸರ್‌ಗಳ ಜೊತೆ ಸೇರಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ.  ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.

ಪನ್ನಾ: ಮಧ್ಯಪ್ರದೇಶದ ಶಾಸಕರೊಬ್ಬರು ಮಹಿಳಾ ಡಾನ್ಸರ್‌ಗಳ ಜೊತೆ ಸೇರಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಶಿವದಯಾಲ್ ಬಗ್ರಿ ಅವರು ಮಹಿಳಾ ಡಾನ್ಸರ್‌ಗಳ ಜೊತೆ ಡಾನ್ಸ್‌ ಮಾಡಿದ್ದಲ್ಲದೇ ಆಕೆಗೆ ತಮ್ಮ ತುಟಿಗಳಿಂದಲೇ ಟಿಪ್ಸ್‌( ಹಣ) ನೀಡಿದ್ದಾರೆ. ಶಿವ ದಯಾಲ್ ಬಗ್ರಿ, ಗುನ್ನಾರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದರಾಗಿದ್ದು, ಇವರ ಈ ವರ್ತನೆ ಈಗ ಸಂಚಲನ ಸೃಷ್ಟಿಸಿದೆ. 

ಪನ್ನಾ ಜಿಲ್ಲೆಯಲ್ಲಿ ಪ್ರಸಿದ್ಧಿ ಹೊಂದಿರುವ ಬುಂದೇಲ್‌ಖಂಡ್ ( Bundelkhand) ಪ್ರದೇಶದ ರೈ ನೃತ್ಯವನ್ನು ಕಾಂಗ್ರೆಸ್ ಶಾಸಕ ಮಾಡಿದ್ದಾರೆ. ಇವರ ಡಾನ್ಸ್ ಈಗ ಮಧ್ಯಪ್ರದೇಶ ರಾಜ್ಯದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಶಾಸಕ ಶಿವದಯಾಲ್ (Shiva dayal) ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ಬಿಜೆಪಿ ರಾಜ್ಯ ವಕ್ತಾರ ನರೇಂದ್ರ ಸಲುಜಾ ಸಾಮಾಜಿಕ ಜಾಲತಾಣದಲ್ಲಿ (Social Media) ಟ್ವಿಟ್ ಮಾಡಿದ್ದು, ಕಾಂಗ್ರೆಸ್ ನಾಯಕರು ತಮ್ಮ ಶಾಸಕನ ವರ್ತನೆ ಸರಿಯೇ ಎಂದು ಹೇಳಬೇಕು ಅಲ್ಲದೇ ಕಾಂಗ್ರೆಸ್‌ ಈ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದೇ ಎಂದು ಅವರು ಪ್ರಶ್ನಿಸಿದ್ದಾರೆ. 

Trending Video : ಹರ್ಯಾಣಿ ಹಾಡಿಗೆ ಅಜ್ಜಿಯ ಜಬರ್ದಸ್ ಡಾನ್ಸ್! ನೆಟ್ಟಿಗರು ಕಣ್ ಕಣ್ ಬಿಟ್ಟು ನೋಡ್ತಿದ್ದಾರೆ!

ಗುನ್ನಾರ್ ವಿಧಾನಸಭಾ ಕ್ಷೇತ್ರದಲ್ಲಿ ಈ ಸಂಪ್ರದಾಯಿಕ 'ರೈ' ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿಗೆ ಗುನ್ನಾರ್ ಶಾಸಕ ಶಿವದಯಾಳ್ ಬಗ್ರಿ ಅವರನ್ನೂ ಕೂಡ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಕೆಲ ಸಮಯದ ನಂತರ ಶಾಸಕ ಕೂಡ ಅಲ್ಲಿದ್ದ ನೃತ್ಯಗಾತಿಯ ಜೊತೆಗೂಡಿ ಕುಣಿಯಲು ಶುರು ಮಾಡಿದರು. ನೃತ್ಯಗಾತಿಯ ಕೈ ಹಿಡಿದುಕೊಂಡು ಕುಣಿದ ಅವರು ನಂತರ ಅಲ್ಲಿದ್ದ ಬೆಂಬಲಿಗರ ಒತ್ತಾಯದ ಮೇಲೆಗೆ ಬಾಯಲ್ಲಿ ಹಣ ಇಟ್ಟುಕೊಂಡು ನರ್ತಕಿಗೆ ಟಿಪ್ಸ್ ನೀಡಿದ್ದಾರೆ. ಈ ನೃತ್ಯವನ್ನು ಯಾರೋ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Scroll to load tweet…

ಮೊಮ್ಮಗನ ಮದ್ವೆಲಿ 96 ವರ್ಷದ ತಾತನ ಸಖತ್ ಡಾನ್ಸ್‌: ವೈರಲ್ ವೀಡಿಯೋ