ಮಧ್ಯಪ್ರದೇಶ ಮುಖ್ಯಮಂತ್ರಿ ಮೊಹನ್ ಯಾದವ್ ಅವರು ಸುದ್ದಿಗೋಷ್ಠಿಯಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹೆಸರಿನ ಬದಲು ಒಬಾಮಾ ಎಂದು ಬಾಯ್ತಪ್ಪಿ ಹೇಳಿದ್ದಾರೆ. ಈ ಎಡವಟ್ಟಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಹಿಂದೆಯೂ ಹಲವು ನಾಯಕರು ಇಂತಹ ತಪ್ಪುಗಳನ್ನು ಮಾಡಿದ್ದಾರೆ.
ಭಯೋತ್ಪಾದಕರ ಬಗ್ಗೆ ಮಾತನಾಡುವಾಗ ಒಸಾಮಾ ಬಿನ್ ಲಾಡೆನ್ ಮಾತನಾಡುವ ಭರದಲ್ಲಿ ಒಸಾಮಾ ಎನ್ನುವ ಬದಲು ಒಬಾಮಾ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೊಹನ್ ಯಾದವ್ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭೋಪಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಮೋಹನ್ ಯಾದವ್ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿರುವಾಗ ಈ ಎಡವಟ್ಟು ಮಾಡಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲೇನಿದೆ?
ಭಯೋತ್ಪಾದನೆ ಮತ್ತು ಅಮೆರಿಕದ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮಾತನಾಡುತ್ತಿದ್ದಾರೆ. ಈ ವೇಳೆ ನಾಲಗೆ ತೊಡರಿತೋ, ಓಸಾಮಾ, ಒಬಾಮ ಗೊಂದಲಕ್ಕೀಡಾದರೋ ಒಸಾಮಾ ಬಿನ್ ಲಾಡೆನ್ ಅಂತಾ ಹೇಳಬೇಕಿದ್ದ ಸಿಎಂ ಒಬಾಮಾ ಎಂದುಬಿಟ್ಟಿದ್ದಾರೆ. ಹೇಳಿಕೆಯಲ್ಲಿ ಎಡವಟ್ಟು ಆಗಿರುವುದು ತಕ್ಷಣ ಗಮನಕ್ಕೆ ಬರುತ್ತಿದ್ದಂತೆ ಮತ್ತೆ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಎಂದು ಹೇಳಿದ್ದಾರೆ. ಆದರೆ ಅಲ್ಲಿ ಅದಾಗಲೇ ಮಾತನಾಡುತ್ತಿದ್ದಾಗಲೇ ವಿಡಿಯೋ ರೆಕಾರ್ಡ್ ಆಗಿದ್ದರಿಂದ ಅವರ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇರಿಸುಮುರುಸು ಉಂಟು ಮಾಡಿದೆ. ಅಂದಹಾಗೆ ಈ ಘಟನೆ ಅ.13 ರಂದೇ ನಡೆದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.
ನಾಲಗೆ ಎಡವಟ್ಟು ಇದೇ ಮೊದಲಲ್ಲ, ಇವರೇ ಮೊದಲಲ್ಲ!
ಅಂದಹಾಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವಾಗ ಹೀಗೆ ಬಾಯ್ತಪ್ಪಿ ಯಾರದ್ದೋ ಹೆಸರು ಹೇಳುವುದು, ಸತ್ತವರ ಹೆಸರು ಹೇಳುವುದು ಹೊಸದೇನಲ್ಲ, ಇವರು ಮೊದಲ ವ್ಯಕ್ತಿಯೇನಲ್ಲ. ಇತ್ತೀಚೆಗೆ ಮಲ್ಲಿಕಾರ್ಜುನ, ಸಿದ್ದರಾಮಯ್ಯ ಹೇಳಿಕೆ ನೀಡುವಾಗಲೂ ಈ ಎಡವಟ್ಟು ಮಾಡಿಕೊಂಡಿದ್ದರು.


