ಅರಣ್ಯ ಒತ್ತುವರಿ ತೆರವಿಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಒತ್ತುವರಿದಾರರ ಮಧ್ಯೆ ಘರ್ಷಣೆಯಾಗಿದ್ದು, ಈ ಘಟನೆಯಲ್ಲಿ 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಭೋಪಾಲ್‌: ಅರಣ್ಯ ಒತ್ತುವರಿ ತೆರವಿಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಒತ್ತುವರಿದಾರರ ಮಧ್ಯೆ ಘರ್ಷಣೆಯಾಗಿದ್ದು, ಈ ಘಟನೆಯಲ್ಲಿ 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅರಣ್ಯ ಅತಿಕ್ರಮಣ ವಿರೋಧಿ ತಂಡವನ್ನು ಹತ್ತಿರ ಬರದಂತೆ ತಡೆಯಲು ಅತಿಕ್ರಮಣಕಾರರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಲ್ಲದೇ, ಬಿಲ್ಲು ಮತ್ತು ಬಾಣಗಳನ್ನು ಕೂಡ ಬಿಟ್ಟಿದ್ದಾರೆ. ಅಲ್ಲದೇ ದೇಶಿಯ ನಿರ್ಮಿತ ಬಂದೂಕುಗಳನ್ನು ಸಿಬ್ಬಂದಿ ವಿರುದ್ಧ ಬಳಸಿದ ಆಘಾತಕಾರಿ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದೆ. ಮಧ್ಯಪ್ರದೇಶದ (Madhya Pradesh) ಬುರ್ಹಾನ್‌ಪುರ (Burhanpur) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಶನಿವಾರ ಈ ಘಟನೆ ನಡೆದಿದೆ. ಘಘ್ರಾಲಾ ಅರಣ್ಯದಲ್ಲಿ (Ghaghrala forests) ಅತಿಕ್ರಮಣ ಮತ್ತು ಅಕ್ರಮವಾಗಿ ಮರಗಳನ್ನು ಕಡಿದು ಸಾಗಣೆ ಮಾಡುತ್ತಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ತಲುಪಿದಾಗ ಅಲ್ಲಿ ಸೇರಿದ 150ಕ್ಕೂ ಹೆಚ್ಚು ಜನ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೇ ನಾಡಕೋವಿ ಹಾಗೂ ಬಿಲ್ಲು ಬಾಣಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ. 

ಶಾಸಕ ಬೋಪಯ್ಯ ಅರಣ್ಯಭೂಮಿ ಒತ್ತುವರಿ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರವಿಚಂಗಪ್ಪ 

ಗಲಭೆಯಿಂದಾಗಿ ಅರಣ್ಯ ಇಲಾಖೆ ತಂಡದ ಸದಸ್ಯರು ಮುಂದೆ ಸಾಗಲು ಹೆಣಗಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಅರಣ್ಯ ತಂಡದ ಜೊತೆಗಿದ್ದ ಕೆಲ ಗ್ರಾಮಸ್ಥರಿಗೂ ಗಂಭೀರ ಗಾಯಗಳಾಗಿವೆ. ಮೂರು ದಿನಗಳಿಂದ ಸುಮಾರು 200 ಕ್ಕೂ ಹೆಚ್ಚು ಅತಿಕ್ರಮಣದಾರರು ಇಲ್ಲಿಗೆ ಆಗಮಿಸಿದ್ದಾರೆ. ಅವರು ದೇಶೀ ನಿರ್ಮಿತ ಬಾಂಬ್‌ಗಳನ್ನು ತಂದು ಭಯಪಡಿಸಲು ತೆರೆದ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತು. ಈ ವಿಚಾರವನ್ನು ಡಿಎಫ್‌ಒ (DFO) ಅವರು ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ವಿಷಯ ತಿಳಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿ ಆರ್.ಪಿ. ರಾಯ್ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ. 

ಅರಣ್ಯ ಅತಿಕ್ರಮಣ ಕಾಯ್ದೆಯಡಿ ಅರ್ಜಿ ವಿಲೇಗೆ ಕ್ರಮ: ಕೋಟ ಶ್ರೀನಿವಾಸ ಪೂಜಾರಿ

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರೊಬ್ಬರ ಬೆನ್ನು ಮತ್ತು ಭುಜಕ್ಕೆ ಬಾಣ (arrows) ತಗುಲಿದೆ. ಗಾಯಾಳುಗಳನ್ನು ಬುರ್ಹಾನ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಅತಿಕ್ರಮಣದಾರರು ಕಾಡಿನೊಳಗೆ ಆಶ್ರಯ ಪಡೆದಿದ್ದಾರೆ ಮತ್ತು ಯಾರನ್ನೂ ಕಾಡಿಗೆ ಪ್ರವೇಶಿಸಲು ಬಿಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. 

Scroll to load tweet…