ಅರಣ್ಯ ಅತಿಕ್ರಮಣ ಕಾಯಿದೆ ಅಡಿಯಲ್ಲಿ ಮಂಜೂರಾತಿ ಹಂತದಲ್ಲಿ ಇರುವ ಸಮಿತಿಗೆ ಜಿಪಂ, ತಾಪಂ ಸದಸ್ಯರು ಸದಸ್ಯರಾಗಿರುತ್ತಾರೆ. ಆದರೆ ಈಗ ಜಿಪಂ, ತಾಪಂ ಸದಸ್ಯರು ಇಲ್ಲದ ಕಾರಣ ತೊಂದರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾರವಾರ (ನ.19) : ಅರಣ್ಯ ಅತಿಕ್ರಮಣ ಕಾಯಿದೆ ಅಡಿಯಲ್ಲಿ ಮಂಜೂರಾತಿ ಹಂತದಲ್ಲಿ ಇರುವ ಸಮಿತಿಗೆ ಜಿಪಂ, ತಾಪಂ ಸದಸ್ಯರು ಸದಸ್ಯರಾಗಿರುತ್ತಾರೆ. ಆದರೆ ಈಗ ಜಿಪಂ, ತಾಪಂ ಸದಸ್ಯರು ಇಲ್ಲದ ಕಾರಣ ತೊಂದರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರಾವಳಿಗರಿಗೆ ಸಂತಸದ ಸುದ್ದಿ ನೀಡಿದ ಸಚಿವ ಕೋಟ..!

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇತರೆ ಜನಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಮಾಡಿಕೊಂಡು ಅರ್ಜಿ ವಿಲೇವಾರಿ ಮಾಡಲು ಠರಾವು ಮಾಡಿ ಸರ್ಕಾರಕ್ಕೆ ಕಳಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಇ-ಸ್ವತ್ತು ಅಡಿಯಲ್ಲಿ ಹೊಸ ಕರ ನೀತಿ ಬಗ್ಗೆ ಪ್ರಶ್ನಿಸಿದಾಗ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಹೊಸ ಕರ ನೀತಿಯಂತೆ ಎರಡು ಪಟ್ಟು ಹಣ ಪಾವತಿಸಬೇಕಾಗುತ್ತದೆ ಎನ್ನುವುದು ನಿಜ. ಆದರೆ ಸಾರ್ವಜನಿಕರ ಹಿತಾಸಕ್ತಿಯಡಿ ಈ ನಿಯಮವನ್ನು ಬದಲಾಯಿಸಬಹುದೇ ಅಥವಾ ಸರಳೀಕರಣ ಮಾಡುಬಹುದೇ ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ 88 ಸಾವಿರ ಬಂದಿದ್ದು, 2865 ಅರ್ಜಿಗೆ ಹಕ್ಕುಪತ್ರ ನೀಡಲಾಗಿದೆ. 16 ಸಾವಿರ ಅರ್ಜಿ ತನಿಖಾ ಹಂತದಲ್ಲಿದೆ. 69 ಸಾವಿರ ಅರ್ಜಿ ಬಾಕಿ ಉಳಿದಿದೆ. ಇವರಲ್ಲಿ ಜಿಪಿಎಸ್‌ ಆದವರಿಗೆ ಮಂಜೂರಾತಿ ನೀಡಲು ಕೆಲವು ತೊಡಕುಗಳಿವೆ. ಅರಣ್ಯ ಅಧಿಕಾರಿಗಳಿಗೆ ಜಿಪಿಎಸ್‌ ಆದವರಿಗೆ ಕಿರುಕುಳ ಕೊಡಬಾರದು. ತೊಂದರೆ ನೀಡಬಾರದು ಎಂದು ತಾಕೀತು ಮಾಡಲಾಗಿದೆ ಎಂದರು.

ಅಸ್ಪೃಶ್ಯತೆ ಇನ್ನೂ ಜೀವಂತವಿರುವುದು ನೋವಿನ ಸಂಗತಿ: ಪೂಜಾರಿ

ಕುಚಲಕ್ಕಿ ನೀಡುವ ಬಗ್ಗೆ ಕೇಳಿದಾಗ, ಪಡಿತರದಲ್ಲಿ ಕುಚಲಕ್ಕಿ ನೀಡಬೇಕಾದರೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ 1 ಲಕ್ಷ ಕ್ವಿಂಟಲ್‌ ಅಕ್ಕಿ ಬೇಕಾಗುತ್ತದೆ. ರಾಜ್ಯದ ಬೇರೆ ಕಡೆ ಬೆಳೆಯುತ್ತಾರೆ. ಇದನ್ನು ಖರೀದಿ ಮಾಡುವುದರಿಂದ ಪೂರೈಕೆಗೆ ತೊಂದರೆ ಆಗುವುದಿಲ್ಲ. ಉಡುಪಿ, ದಕ್ಷಿಣ ಕನ್ನಡದಲ್ಲಿ ಈಗ ನೀಡುತ್ತಿರುವ ಸಾದಾ ಅಕ್ಕಿ ಬಳಕೆ ಮಾಡುವುದಿಲ್ಲ. ಕೆಲವರು ಅದನ್ನು ತೆಗೆದುಕೊಂಡು ಹೋಗುವುದಿಲ್ಲ. ಇನ್ನು ಕೆಲವರು ನ್ಯಾಯಬೆಲೆ ಅಂಗಡಿಯಿಂದ ಖರೀದಿಸಿ ಮಾರಾಟ ಮಾಡುತ್ತಾರೆ. ಕುಚಲಕ್ಕಿ ನೀಡಿದರೆ ಶೇ.95 ಜನರು ಅದನ್ನು ಬಳಕೆ ಮಾಡುತ್ತಾರೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಬಿಜಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್‌, ಮಾಜಿ ಅಧ್ಯಕ್ಷ ಕೆ.ಜಿ. ನಾಯ್ಕ ಮೊದಲಾದವರು ಇದ್ದರು.