ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಭಾರತ ಹಾಗೂ ಚೀನಾ ನಡುವಿನ ಸಂಬಂಧದಲ್ಲಿ ಗಲ್ವಾನ್‌ ಹಿಂಸಾತ್ಮಕ ಸಂಘರ್ಷ ಗೇಮ್‌ ಚೇಂಜರ್‌ ಆಗಿ ಪರಿಣಮಿಸಿತ್ತು. 2020ರ ಜೂನ್ 15-16 ರಂದು ಗಾಲ್ವಾನ್‌ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ನಡುವೆ ಕಾಳಗ ನಡೆದಿತ್ತು. ಹಿಂಸಾತ್ಮಕ ರೂಪ ಪಡೆದಿದ್ದ ಈ ಸಂಘರ್ಷದಲ್ಲಿ ಊಭಯ ರಾಷ್ಟ್ರಗಳ ಸೈನಿಕರು ಗಾಯಗೊಂಡಿದ್ದರು. ಈ ಸಂಘರ್ಷ ನಡೆದ ಒಂದು ವರ್ಷದಲ್ಲಿ ಚೀನಾ ಹಾಗೂ ಭಾರತದ ನಡುವೆ ನಡೆದ ಚಟುವಟಿಕೆಗಳು ಕೇವಲ ಉಭಯ ರಾಷ್ಟ್ರಗಳ ನಡುವಿನ ಕಾರ್ಯಾಚರಣೆ ಮತ್ತು ಕಾರ್ಯತಂತ್ರದಲ್ಲಿ ವ್ಯತ್ಯಾಸವನ್ನುಂಟು ಮಾಡಿದ್ದು ಮಾತ್ರವಲ್ಲದೇ, ಆದರೆ ಇಡೀ ಪ್ರಪಂಚದ ಭೌಗೋಳಿಕ ರಾಜಕೀಯ ಪರಿಸರದ ಮೇಲೂ ಪರಿಣಾಮ ಬೀರಿತು.

ಉಭಯ ದೇಶಗಳ ಉನ್ನತ ನಾಯಕರ ನಡುವೆ ಸ್ನೇಹಯುತ ಮಾತು ನಡೆಯುತ್ತಿದ್ದ ನಡುಯುತ್ತಿತ್ತು. ಹೀಗಿದ್ದರೂ ಭಾರತ ಕೊರೋನಾ ಮೊದಲ ಅಲೆಯ ಹೊಡೆತಕ್ಕೆ ಸಿಲುಕಿಕೊಂಡಾಗಲೇ 2020ರ ಏಪ್ರಿಲ್‌ನಿಂದ ಮೇ ತಿಂಗಳ ನಡುವಿನ ಅಂತರದಲ್ಲಿ ಚೀನಾ ಆತಂಕ ಸೃಷ್ಟಿಸುವ ಯತ್ನ ನಡೆಸಿತು. ಇದಕ್ಕೆ ಸಂಪೂರ್ಣ ಯೋಜನೆ ರೂಪಿಸಿದ್ದ ಚೀನಾ ಮೊದಲು ಎಲ್ಎಸಿ ಬಳಿ ತರಬೇತಿ ಪಡೆದಿದ್ದ ಸೈನಿಕರನ್ನು ನಿಯೋಜಿಸಿತು, ನಂತರ ಭಾರತೀಯ ಸೈನ್ಯವನ್ನು ಬೆದರಿಸಲು ಕೆಲವು ಹುನ್ನಾರ ಹೂಡಿ ಭೂಭಾಗ ವಶಪಡಿಸಿಕೊಂಡಿತು. ಯಾವುದೇ ಸಾಂಪ್ರದಾಯಿಕ ಪ್ರಚಾರ ಶೈಲಿಗೆ ಚೀನಾದ ಮಿಲಿಟರಿಯ ಮಟ್ಟವು ಅಸಮರ್ಪಕವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಚೀನಾವು ಎಲ್‌ಎಸಿ ಬಳಿ ಇಂತಹ ಗೊಂದಲಗಳನ್ನು ಸೃಷ್ಟಿಸಲಾರಂಭಿಸಿತು.

ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಿಟ್ಟಾತನಿಗೆ 8 ತಿಂಗಳು ಜೈಲು!

ಉಭಯ ದೇಶಗಳ ನಡುವೆ ಮೊದಲ ಮಿಲಿಟರಿ ಮಟ್ಟದ ಉನ್ನತ ಮಟ್ಟದ ಸಭೆ ಜೂನ್ 6 ರಂದು ನಡೆಯಿತು, ಇದರಲ್ಲಿ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು. ಇದರಂತೆ ಗಾಲ್ವಾನ್ ಕಣಿವೆಯಲ್ಲಿ ಇಂಗೇಜ್ಮೆಂಟ್‌ ಪ್ರಕ್ರಿಯೆ ನಡೆಯುತ್ತಿತ್ತು. ಇದನ್ನು ನೋಡಿಕೊಳ್ಳುವ ಹೊಣೆ ಕರ್ನಲ್ ಸಂತೋಷ್ ಬಾಭು ಅವರಿಗೆ ವಹಿಸಲಾಗಿತ್ತು. ಕರ್ನಲ್ ಸಂತೋಷ್ ಬಾಬು ಅವರಿಗೆ ಗಾಲ್ವಾನ್ ಕಣಿವೆಯಲ್ಲಿ ‘ಆಪರೇಷನ್ ಸ್ನೋ ಲೆಪಾರ್ಡ್’ ಮುನ್ನಡೆಸುವ ಹೊಣೆ ವಹಿಸಲಾಗಿತ್ತು. ಕರ್ನಲ್ ಬಾಬು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ, ಚೀನಾ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಮಾರಕ ದಾಳಿ ಮಾಡಿದರು. ಕಲ್ಲೆಸೆತದ ಸಂಘರ್ಷಕ್ಕೂ ಮುಂದಾದರು. ದಾಳಿಗೆ ಕುಗ್ಗದ ಭಾರತೀಯ ಸೇನೆ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವ ಶತಪ್ರಯತ್ನ ಮಾಡಿತು.

ಈ ಸಂದರ್ಭದಲ್ಲಿ ತೀವ್ರ ಮಟ್ಟದ ಘರ್ಷಣೆ ಏರ್ಪಟ್ಟು ಅಪಾರ ಸಾವುನೋವು ಕಂಡಿತು. 1962ರ ಚೀನಾ-ಭಾರತ ಯುದ್ಧದಲ್ಲಿ ಸಹ ಇದೇ ರೀತಿಯಲ್ಲಿ ಘರ್ಷಣೆ ಉಂಟಾಗಿತ್ತು. ಚೀನಾದ ಸೈನಿಕರು ಮಧ್ಯಕಾಲೀನ ಶೈಲಿಯ ಶಸ್ತ್ರಾಸ್ತ್ರಗಳನ್ನು ಮೊನಚಾದ ಆಯುಧಗಳ ಮೂಲಕ ಯುದ್ಧಕ್ಕಿಳಿದಿದ್ದರು, ಪರಸ್ಪರ ಗುಂಡಿನ ಚಕಮಕಿ ಏರ್ಪಟ್ಟಿರಲಿಲ್ಲ. ಈ ಘರ್ಷಣೆ ನಂತರ ಭಾರತದ ಹಲವು ಸೈನಿಕರನ್ನು ಚೀನಾ ಸೆರೆಹಿಡಿದು ನಂತರದ ದಿನಗಳಲ್ಲಿ ಬಿಡುಗಡೆ ಮಾಡಿತು. ಈ ಸಂಘರ್ಷ ಚೀನಾ ಮಿಲಿಟರಿ ಎಲ್ಲಾಆ ರೀತಿಯಲ್ಲಿ ಸನ್ನದ್ಧವಾಗಿದೆ ಎಂಬ ಪರೋಕ್ಷ ಸಂದೇಶವನ್ನು ನೀಡಲು ಹೂಡಿದ್ದ ತಂತ್ರವಾಗಿತ್ತು. 

ಈ ಹಿಂಸಾತ್ಮಕ ಸಂಘರ್ಷದ ಬಳಿಕ ಉಭಯ ದೇಶಗಳು ಎಲ್‌ಎಸಿ ಬಳಿ ಭಾರೀ ಪ್ರಮಾಣದ ಸೇನಾ ತುಕಡಿ ನಿಯೋಜಿಸಿದವು. ಅಲ್ಲದೇ ಚೀನಾ ಹಾಗೂ ಭಾರತದ ನಡುವೆ ಬರೋಬ್ಬರಿ ಹನ್ನೊಂದು ಸುತ್ತಿನ ಮಾತುಕತೆಯೂ ನಡೆಯಿತು. ಹೀಗಿರುವಾಗಲೇ 2020ರ ಆಗಸ್ಟ್  29-30ರಂದು ಮತ್ತೊಮ್ಮೆ ಚೀನಾ ಸೇನೆ ದಾಲಿ ನಡೆಸುವ ಯತ್ನ ಮಾಡಿತು. ಆದರೆ ಈ ಸಂದರ್ಭದಲ್ಲಿ ಭಾರತೀಯ ಸೇನೆ, ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದ್ದಷ್ಟೇ ಅಲ್ಲದೇ ಕೆಲ ಪ್ರಮುಖ ಶಿಖರಗಳನ್ನು ವಶಪಡಿಸಸಿಕೊಂಡಿತು. 

ಈ ಯಶಸ್ಸು ಭಾರತೀಯ ಸೇನೆಗೆ ಚೀನಾ ವಶಪಡಿಸಿಕೊಂಡಿದ್ದ ಫಿಂಗರ್ಸ್‌ ಖಾಲಿ ಮಾಡಿಸುವಂತೆ ಮಾತುಕತೆ ನಡೆಸುವ ಅವಕಾಶ ಕಲ್ಪಿಸಿತು. ಹೀಗಿದ್ದರೂ ಅಂದು ಅತ್ತ ಯುದ್ಧವೂ ಅಲ್ಲದ, ಶಾಂತಿಯೂ ಇಲ್ಲದ ಅಸಹಜ ವಾತಾವರಣ ನಿರ್ಮಾಣವಾಗಿತ್ತು. ದೇಶಕ್ಕೆ ದಾಲಿ ಇಟ್ಟ ಕೊರೋನಾ ಸೋಂಕು ಇಲ್ಲಿನ ಸ್ಥಿತಿಗತಿಯ ಮಾಹಿತಿ ಕಡಿಮೆಗೊಳಿಸಿತಾದರೂ ಇದು ಕೊನೆಯಾಗಿಲ್ಲ. ಇಲ್ಲಿನ ಕೆಲ ಅಂಶಗಳನ್ನು ತಿಳಿದುಕೊಳ್ಳಲೇಬೇಕಿದೆ.

ಚೀನಾ ಗಡಿಯಲ್ಲಿ ಭಾರತೀಯ ಯೋಧರ ಸಖತ್ ಡ್ಯಾನ್ಸ್; ವಿಡಿಯೋ ವೈರಲ್!

ಚೀನಾ 2020ರ ಮೇ ತಿಂಗಳು ಹಾಗೂ ಬಳಿಕ ನಡೆಸಿದ್ದನ್ನು ಯಾಕೆ ಮಾಡಿತು ಎಂದು ತಿಳಿದುಕೊಳ್ಳುವ ಯತ್ನ ನಾವು ನಡೆಸಿದೆವು. ಆದರೆ 1962ರಲ್ಲಿ ಮಾಡಿದ್ದನ್ನೇ ಮತ್ತೆ ಯಾಕೆ ಪುನರಾವರ್ತಿಸಿತು ಎಂಬುವುದು ಈವರೆಗೂ ತಿಳಿದು ಬಂದಿಲ್ಲ. ಗಡಿಯಲ್ಲಿ ಯುದ್ಧದಂತಹ ವಾತಾವರಣ ನಿರ್ಮಿಸಿ, ಶಿಖರಗಳನ್ನು ವಶಪಡಿಸಿ ಬಳಿಕ ತಾನೇ ಅದನ್ನು ಖಾಲಿ ಮಾಡುವುದು ತರ್ಕಬದ್ಧವಾದ ಸೇನಾ ನಡವಳಿಕೆಯಲ್ಲ. ಆದರೆ ಚೀನಾದ ಇಂತಹ ನಡೆ  ಹಿಂದೆ ಒಂದು ರಾಜಕೀಯ ಪ್ರೇರಿತ ಕಾರಣವಿತ್ತು. 

ಚೀನಾಗೆ ತನ್ನ ಗುಪ್ತಚರರಿಂದ ಹಾಗೂ ರಾಜಕೀಯ ವಿಶ್ಲೇಷಕರಿಂದ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುತ್ತಾರೆ, ಅಫ್ಘಾನಿಸ್ತಾನ ಮತ್ತು ಮಧ್ಯಪ್ರಾಚ್ಯವನ್ನು ಸಮಾಧಾನಗೊಳಿಸುವ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಚೀನಾ ವಿರೋಧಿ ನಿಲುವು ಹುಟ್ಟಿಸುವ ಅಮೆರಿಕದ ಉದ್ದೇಶ ಶೀಘ್ರದಲ್ಲೇ ವಾಸ್ತವವಾಗಬಹುದು ಎಂಬ ಮಾಹಿತಿ ಲಭಿಸಿತ್ತು. ಈ ವಿಚಾಋದಲ್ಲಿ ಭಾರತ ಅಮೆರಿಕಾ ಜೊತೆ ಕೈಜೋಡಿಸಬಹುದೆಂಬ ಅನುಮಾನವಿತ್ತು. ಹೀಗಿರುವಾಗ ಭಾರತ ಚೀನಾಗೆ ಅನಾನುಕೂಲವಾಗುವಂತಹ ಹೆಜ್ಜೆ ಇರಿಸಬಹುದೆಂಬ ಅನುಮಾನವಿತ್ತು.

ಬಹುಶಃ ಚಿನಾಗೆ ಸಮುದ್ರ ಮಾರ್ಗದಿಂದ ಹೆಚ್ಚು ಅಪಾಯವಿತ್ತು. ಪೆಸಿಫಿಕ್‌ ಸಾಗರದಲ್ಲಿ ಅಮೆರಿಕ ನೌಕಾಪಡೆ ನಿಯೋಜನೆ ಇದಕ್ಕೆ ಕಾರಣವಾಗಿತ್ತು. ಹೀಗಿರುಉವಾಗ ಭಾರತ ಅಮೆರಿಕ ಜೊತೆ ಕೈ ಜೋಡಿಸದಂತೆ ತಡೆಯಲು, ಭಾರತದ ಗಮನ ಬೇರೆ ದಿಕ್ಕಿನತ್ತ ಹರಿಸಲು ಚೀನಾ ಇಂತಹುದೊಂದು ದಾಳ ಉರುಳಿಸಿತ್ತೆನ್ನಲಾಗಿದೆ. ಆಧರೆ ಇದು ಫಲ ಕೊಡಲಿಲ್ಲ. ಬದಲಾಗಿ ಭಾರತವೇ ಚೀನಾ ಸೇನೆಗೆ ತಕ್ಕ ಪಾಠ ಕಲಿಸಿತು. 

ಶತ್ರು ರಾಷ್ಟ್ರದ ಬೆದರಿಕೆ ಎದುರಿಸಲು ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕು: ರಾವತ್!

ಉತ್ತರ ಗಡಿಗಳಲ್ಲಿ ಸ್ಥಗಿತದ ಆಟವನ್ನು ಆಡುವಾಗ ಚೀನಾ ಬಹುತ್ವ ಮತ್ತು ನಮ್ಯತೆಯ ತತ್ವಗಳನ್ನು ಅನುಸರಿಸಿದೆ. ಚೀನಾ ತನ್ನ ನೆರೆ ರಾಷ್ಟ್ರಗಳಿಂದ ತೊಂದರೆಯಲ್ಲಿ ಸಿಲುಕಬಹುದು ಎಂದು ಬುದ್ಧಿವಂತಿಕೆಯಿಂದ ಹೆಜ್ಜೆ ಇರಿಸಿದೆ. ವಿಶೇಷವಾಗಿ ಭಾರತದ ಆರ್ಥಿಕತೆಯ ದುರ್ಬಲಗೊಳಿಸಲು ಯತ್ನಿಸಿದೆ. 

ಮಾತುಕತೆ ಮೂಲಕ ಗಡಿ ಬಳಿ ಗಸ್ತು ತಿರುಗುವ ಪ್ರಕ್ರಿಯೆ ನಿಲ್ಲಿಸಿರಬಹುದು ಆದರೆ ನೆರೆ ರಾಷ್ಟ್ರದ ಮೇಲಿದ್ದ ವಿಶ್ವಾಸ ಉಳಿದುಕೊಂಡಿಲ್ಲ. ಈ ಇಡೀ ಸಮಸ್ಯೆ ಬಗೆ ಹರಿಯುವವರೆಗೆ ಇದು ನಮ್ಮ ಸಾಧನೆ ಎಂದು ಭಾವಿಸಲೇಬಾರದು. ವಿವಿಧ ಹಾಟ್‌ಸ್ಪಾಟ್‌ಗಳಲ್ಲಿ ಗಸ್ತು ತಿರುಗದಂತೆ ತಡೆಯುವುದು, ಬಫರ್ ವಲಯಗಳ ರಚನೆ ನಿಜವಾಗಿಯೂ ಸಂಘರ್ಷಕ್ಕೆ ಪರಿಹಾರವಲ್ಲ.

ಇವೆಲ್ಲದರ ಪರಿಣಾಮ ಎಂಬಂತೆ ಎಲ್‌ಎಸಿಯ ಉದ್ದಕ್ಕೂ ಸುಮಾರು 60,000 ಸೈನಿಕರನ್ನು ನಿಯೋಜಿಸಬೇಕಾಯ್ತು, ಇದರ ಪರಿಣಾಮವಾಗಿ ಅನಿಶ್ಚಿತತೆ ಉಂಟಾಯಿತು. ಅಲ್ಲದೇ, ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಿರುವಾಗ ಈ ಎಲ್ಲಾ ವಿಚಾರವನ್ನು ಗಣನೆಗೆ ತೆಗೆದುಕೊಂಡು ಚೀನಾ ಕಾಯುವ ಮತ್ತು ನೋಡುವ ಕಾರ್ಯವನ್ನು ಅನುಸರಿಸುತ್ತಿದೆ ಎಂಬುವುದರಲ್ಲಿ ಅನುಮಾನವಿಲ್ಲ.

ಇಂತಹ ಬದಲಾವಣೆಗಳು ರಾತ್ರೋರಾತ್ರಿ ಆಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಚೀನಾ ಕಳೆದುಕೊಳ್ಳಲು ಏನೂ ಇಲ್ಲ. ಆದರೆ ಭಾರತ ತಲೆಬಾಗಿದರೆ, ಖಂಡಿತವಾಗಿಯೂ ಚೀನಾಗೆ ಹೆಚ್ಚಿನ ಲಾಭ ಸಿಗುತ್ತದೆ. ಭಾರತ ಸ್ಪಷ್ಟವಾಗಿ ಬಗ್ಗಿಲ್ಲ, ಆದರೆ ಸಾಮರ್ಥ್ಯದ ವಿಷಯದಲ್ಲಿ ವಿಶ್ವಾಸವನ್ನು ಮೂಡಿಸಲು ನಾವು ಸಾಕಷ್ಟು ಮಾಡಬೇಕಾಗಿದೆ.

ಗಲ್ವಾನ್ ಕಣಿವೆಯಲ್ಲಾದ ಸಂಘರ್ಷದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದ ವರ್ಷ ಅದರಲ್ಲೂ ಚಳಿಗಾಲದ ಸಮಯದಲ್ಲಿ ನಮ್ಮ ಲಾಜಿಸ್ಟಿಕ್ಸ್ ಪ್ರಯತ್ನ ಅದ್ಭುತವಾಗಿತ್ತು. ಆದರೆ ಇಷ್ಟಕ್ಕೇ ಸುಮ್ಮನಾಗಬಾರದು. ಪೂರ್ವ ಲಡಾಖ್ ಬಹುಶಃ ಉದ್ದೇಶಪೂರ್ವಕ ಸಂಘರ್ಷಕ್ಕೆ ಇನ್ನೂ ಸಿದ್ಧವಾಗಿಲ್ಲ. ಚೀನಾದ ಮಿಲಿಟರಿ ಮಾವೋ ಕಾಲದ ಯುದ್ಧ ತಂತ್ರಗಳನ್ನು ಬಳಸುವುದಿಲ್ಲ, ಬದಲಾಗಿ ನಮ್ಮ ರಕ್ಷಣಾ ಕ್ಷೇತ್ರದ ಮೇಲೆ ಆಕ್ರಮಣ ಮಾಡುವ ತಂತ್ರ ಮಾಡುತ್ತದೆ. ಅದಕ್ಕಾಗಿ ನಾವು ಆಧುನಿಕ ರಕ್ಷಣಾತ್ಮಕ ಮೂಲಸೌಕರ್ಯ ಮತ್ತು ರಸ್ತೆ ನಿರ್ಮಾಣ ಕಾರ್ಯದ ಸಹಾಯದಿಂದ ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ.

ಕಳೆದ ವರ್ಷ, ನಾವು ವಸತಿ, ರಸ್ತೆಗಳು ಮತ್ತು ವಸ್ತು ಶೇಖರಣೆ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಯಾಕೆಂದರೆ ಅದು ಅಂದಿನ ಆದ್ಯತೆಯಾಗಿತ್ತು. ಟಿಬೆಟ್‌ನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಚೀನಾದ ಚಟುವಟಿಕೆಗಳ ಹಿನ್ನೆಲೆಯಲ್ಲಿ, ನಾವು ಈಗ ಆಳವಾಗಿ ಸಿದ್ಧತೆ ನಡೆಸಬೇಕಿದೆ. ಹೀಗಿರುವಾಗ ಕೊರೋನಾ ಸೋಂಕು ದಾಳಿ ಇಟ್ಟ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಕಂಡು ಆನಂದ ಪಡುವ ಹಾಗೂ ಎಲ್ಲಾ ರೀತಿಯಲ್ಲಿ ತುಳಿಯಲು ಯತ್ನಿಸುತ್ತಿರುವ ರಾಷ್ಟ್ರದ ಮೇಲೆ ನಂಬಿಕೆ ಇಡಬೇಕಾ ಎಂದು ಭಾರತ ಯೋಚಿಸುವ ಅಗತ್ಯವಿದೆ. 

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: A year since Galwan clash: China is in wait-and-watch mode, we now need to prepare