ಶತ್ರು ರಾಷ್ಟ್ರದ ಬೆದರಿಕೆ ಎದುರಿಸಲು ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕು: ರಾವತ್!
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚು ಮಿಲಿಟರಿ ಸವಾಲು ಎದುರಿಸುವ ದೇಶ ಭಾರತ. ಚೀನಾ, ಪಾಕಿಸ್ತಾನದ ಬೆದರಿಕೆ ಎದುರಿಸಲು ಭಾರತ ತನ್ನ ಮಿಲಿಟರಿ ಶಕ್ತಿಯಲ್ಲಿ ಕೆಲ ರೂಪಾಂತರಗನ್ನು ಅಧ್ಯಯನ ಮಾಡಬೇಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ರಾವತ್ ಮಾತಿನ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮಾ.04): ಭಾರತ ಅತ್ಯಂತ ಬಲಿಷ್ಠ ಮಿಲಿಟರಿ ಶಕ್ತಿಯಾಗಿ ಬೆಳೆದು ನಿಂತಿದೆ. ಆದರೆ ಭವಿಷ್ಯದ ಸವಾಲು ಹಾಗೂ ಬೆದರಿಕೆಗಳಿಗೆ ನಮ್ಮ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA!
ಸ್ವಾತಂತ್ರ್ಯ ಬಳಿಕ ಸಣ್ಣ ಭಾರತದ ಮಿಲಿಟರಿ ಶಕ್ತಿ ಹೊಂದಿದ್ದ ಭಾರತ ಇದೀಗ ವಿಶ್ವದ ಅತ್ಯಂತ ಪ್ರಬಲ, ಅತೀ ದೊಡ್ಡ ಹಾಗೂ ಅತ್ಯಾಧುನಿಕ ಶಕ್ತಿಯಾಗಿ ಮಾರ್ಪಟ್ಟಿದೆ. ಆದರೆ ಭಾರತದ ಮಿಲಿಟರಿ ಶಕ್ತಿಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕಾಗಿದೆ. ಹೀಗಾಗಿ ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.
ಭಾರತವು ಸಂಕೀರ್ಣ ಭದ್ರತೆ ಮತ್ತು ಸವಾಲಿನ ವಾತಾವರಣವನ್ನು ಎದುರಿಸುತ್ತಿದೆ. ಹೀಗಾಗಿ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ, ಉನ್ನತ ರಕ್ಷಣಾ ಕಾರ್ಯತಂತ್ರದ ಮಾರ್ಗದರ್ಶನ ಮತ್ತು ಉನ್ನತ ರಕ್ಷಣಾ ಮತ್ತು ಕಾರ್ಯಾಚರಣಾ ಸಂಸ್ಥೆಗಳಲ್ಲಿ ರಚನಾತ್ಮಕ ಸುಧಾರಣೆಗಳ ಅಗತ್ಯತೆಯನ್ನು ಬಿಪಿನ್ ರಾವತ್ ಒತ್ತಿ ಹೇಳಿದ್ದಾರೆ.
ಸ್ವದೇಶಿ ನಿರ್ಮಿತ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆ ಯಶಸ್ವಿ
ಪ್ರಸ್ತುತ ಯುದ್ಧದ ಸ್ವರೂಪ ಬದಲಾಗಿದೆ. ಅದರಲ್ಲೂ 20ನೇ ಶತಮಾನದಲ್ಲಿ ಮುಂದುವರಿದ ದೇಶಗಳು ಮಿಲಿಟರಿ ಶಕ್ತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ವೇಗವಾಗಿ ಸಂಪರ್ಕ ಸಾಧಿಸಲು ಹೊಸ ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತವೂ ಮುಂದುವರಿಯಬೇಕು ಎಂದು ರಾವತ್ ಹೇಳಿದ್ದಾರೆ.