2024 ರ ಒಲಿಂಪಿಕ್ಸ್‌ನಲ್ಲಿ ಸೋತ ನಂತರ, ಗುರುದೇವ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿಯಾದ ನಂತರ ನಿಜವಾದ ಯಶಸ್ಸಿನ ಅರ್ಥವನ್ನು ಕಂಡುಕೊಂಡ ಬಗ್ಗೆ ಲವ್ಲಿನಾ ಬೊರ್ಗೊಹೈನ್ ಭಾವನಾತ್ಮಕವಾಗಿ ಹಂಚಿಕೊಂಡರು. 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಯಶಸ್ಸು ಮತ್ತು ಆತ್ಮಾನ್ವೇಷಣೆಯ ಪಯಣವನ್ನು ವಿವರಿಸಿದರು.
ನಾನು 2024 ರ ಒಲಿಂಪಿಕ್ಸ್‌ನಲ್ಲಿ ಸೋತಾಗ ನಾನು ಕಳೆದು ಹೋಗಿದ್ದೆನು. ಆದರೆ, ಗುರುದೇವರನ್ನು ಕಂಡುಕೊಂಡ ನಂತರ ನಿಜವಾದ ಗೆಲುವಿನ ಅರ್ಥ ತಿಳಿಯಿತು ಎಂದು ಒಲಿಂಪಿಕ್ ಚಾಂಪಿಯನ್ ಲವ್ಲಿನಾ ಬೊರ್ಗೋಹೈನ್ ಭಾವನಾತ್ಮಕವಾಗಿ ಹೇಳಿದರು.
10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಒಲಿಂಪಿಕ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಲವ್ಲಿನಾ ಬೊರ್ಗೋಹೈನ್ ತಮ್ಮ ಯಶಸ್ಸು ಮತ್ತು ಆತ್ಮಾನ್ವೇಷಣೆಯ ಭಾವನಾತ್ಮಕ ಪಯಣವನ್ನು ಹಂಚಿಕೊಂಡರು. 'ಮೊದಲು, ಯಶಸ್ಸು ಎಂದರೆ ನನ್ನ ಪೋಷಕರ ಸಂಕಟಗಳನ್ನು ದೂರಮಾಡುವುದು ಎಂದು ನಂಬಿದ್ದೆ. ನಂತರ, ಪದಕಗಳನ್ನು ಗೆಲ್ಲುವುದೇ ನಿಜವಾದ ಯಶಸ್ಸು ಎಂದು ಭಾವಿಸಿದ್ದೆ. 2024 ರ ಒಲಿಂಪಿಕ್ಸ್‌ನಲ್ಲಿ ಸೋತ ನಂತರ ನಾನು ಸಂಪೂರ್ಣ ಕಳೆದು ಹೋಗಿದ್ದೆ, ಆದರೆ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿಯಾದ ನಂತರ ಮಾತ್ರ ನಿಜವಾದ ಯಶಸ್ಸು ಎಂದರೇನು ಎಂಬುದು ಅರ್ಥವಾಯಿತು ಎಂದರು.
ಕ್ರೀಡೆ ಬೆಳೆಸಲು ಬಯಸುವ ಮಕ್ಕಳಿಗೆ ನಾನು ಸ್ಪೂರ್ತಿಯಾಗಬಲ್ಲೆ ಎಂಬುದನ್ನು ಮನಗಂಡಾಗ ನಾನು ದೊಡ್ಡ ಸಂತೋಷ ಕಂಡುಕೊಂಡೆ. ಈ ಬಾಕ್ಸಿಂಗ್ ತಾರೆಯು ಗ್ರಾಮೀಣ ಮತ್ತು ನಗರಗಳ ಅಂತರವನ್ನು ಕಡಿಮೆ ಮಾಡುತ್ತಿರುವ IWC ಸಮಾವೇಶದ ಮಹತ್ವವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದರು. ಅತ್ಯಂತ ಹಿಂದುಳಿದ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಮಕ್ಕಳಿಗೆ ಈ ಸಮಾವೇಶವು ಹೊಸ ಆಶಾಕಿರಣವನ್ನು ತರುತ್ತಿದೆ ಎಂದು ತಿಳಿಸಿದರು.
ಸಮಾವೇಶದ ಎರಡನೇ ದಿನವು ಪ್ರಭಾವಶಾಲಿ ಸಂವಾದಗಳು ಮತ್ತು ವೈವಿಧ್ಯಮಯ ಸಾಧಕರ ಪ್ಯಾನೆಲ್‌ನೊಂದಿಗೆ ಪ್ರಾರಂಭವಾಯಿತು —ಚಿತ್ರನಿರ್ಮಾಪಕಿ ಮತ್ತು ಲೇಖಕಿ ಅಶ್ವಿನಿ ಅಯ್ಯರ್ ತಿವಾರಿ, ಎಡಲ್‌ವೈಸ್ ಮ್ಯೂಚುಯಲ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ರಾಧಿಕಾ ಗುಪ್ತಾ, ಮತ್ತು ಹಸುಗೆಛ್ಚಿ ರುಚಿರಾ ಕಂಬೋಜ. ಇವರು ತಮ್ಮ ಜೀವನ ಪಥದಲ್ಲಿ ಸಾಮಾಜಿಕ ಸಂಕೋಲೆಗಳನ್ನು ಮುರಿದು ಸ್ವತಂತ್ರ ಜೀವನವನ್ನು ಹೇಗೆ ರೂಪಿಸಿಕೊಂಡರು ಎಂಬುದರ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!
ಅಶ್ವಿನಿ ಅಯ್ಯರ್ ತಿವಾರಿಯವರು ತಮ್ಮ ಅನುಭವ ಹಂಚಿಕೊಳ್ಳುತ್ತಾ 'ನಾನು ಕಾರ್ಪೊರೇಟ್ ಕೆಲಸವನ್ನು ಬಿಟ್ಟು, ಕತೆ ಹೇಳುವ ನನ್ನ ಗುರಿಯನ್ನು ಹಿಂಬಾಲಿಸಲು ನಿರ್ಧರಿಸಿದ್ದೆ. ಜೀವನದಲ್ಲಿ ಯಾವಾಗಲೂ ಹೊಸ ಬಾಗಿಲು ತೆರೆಯಲು ಪ್ರಯತ್ನಿಸಿ, ಏಕೆಂದರೆ ಸಹಾಯವು ಅಪ್ರತೀಕ್ಷಿತ ರೀತಿಯಲ್ಲಿ ಬರುತ್ತದೆ ಹೇಳಿದರು.
ರುಚಿರಾ ಕಂಬೋಜ ಅವರು, 'ನೀವು ನಿಮಗೆ ಬಂಧನವುಂಟಾಗುವ ಕಾರಣವನ್ನು ಮನಗಂಡಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಪ್ರಾರಂಭವಾಗುತ್ತದೆ. ಅದನ್ನು ನಿಮ್ಮ ಪ್ರಕಾರ ಪುನರ್ ವ್ಯಾಖ್ಯಾನಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಣದ ಉದ್ದೇಶ ಮತ್ತು ಮಹಿಳಾ ಸಬಲೀಕರಣದ ಕುರಿತು ಐಶ್ವರ್ಯ ಡಿ.ಕೆ.ಎಸ್ ಹೆಗಡೆ ಅವರು ಮಾತನಾಡಿ, ಶಿಕ್ಷಣವು ಜ್ಞಾನವನ್ನು ಪ್ರಜ್ಞೆಗೆ ಪರಿವರ್ತಿಸುವ ಪ್ರಕ್ರಿಯೆ. ಶಿಕ್ಷಣ ಎಂದರೆ ಧೈರ್ಯ, ಆತ್ಮವಿಶ್ವಾಸ ಮತ್ತು ಬದ್ಧತೆ. ಇದು ಶಕ್ತಿಯುತ ಮಹಿಳೆಯರನ್ನೂ ಜವಾಬ್ದಾರಿಯುತ ಪುರುಷರನ್ನೂ ಬೆಳೆಸುವ ಕಲೆಯಾಗಿದೆ ಎಂದು ತಿಳಿಸಿದರು.
ಪ್ರಸಿದ್ಧ ನಟಿ ಹೇಮಾಮಾಲಿನಿ ಮತ್ತು ಅವರ ಪುತ್ರಿ ಈಶಾ ದಿಯೋಲ್ ‘Circle of Wisdom’ ವಿಶೇಷ ಸತ್ರದಲ್ಲಿ ಪಾಲ್ಗೊಂಡರು. ಮಾಮಾಲಿನಿಯವರು ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನದ ಸಮತೋಲನದ ಬಗ್ಗೆ ಮಾತನಾಡುತ್ತಾ, ಶಿಸ್ತಿನ ಜೀವನ ಶೈಲಿಯ ಮಹತ್ವವನ್ನು ವಿವರಿಸಿದರು.
ಇದನ್ನೂ ಓದಿ: ವಿವಾಹ ವದಂತಿ ನಡುವೆ ಒಟ್ಟಿಗೆ ರವಿಶಂಕರ ಗುರೂಜಿ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ, ಗಾಯಕಿ ಶಿವಶ್ರೀ
ಈಶಾ ದಿಯೋಲ್ ಸೋಷಿಯಲ್ ಮೀಡಿಯಾದಿಂದ ಉಂಟಾಗುವ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಉಲ್ಲೇಖಿಸುತ್ತಾ 'ನಾವು ಪ್ರಸ್ತುತ ಕ್ಷಣವನ್ನು ಅನುಭವಿಸದೆ, ಸಾಮಾಜಿಕ ಮಾಧ್ಯಮದ ಹಿಡಿತದಲ್ಲಿ ಬದುಕುತ್ತಿದ್ದೇವೆ. ಇದರ ಅತಿಯಾಗಿ ಬಳಕೆಯು ಉದಾಸೀನತೆಗೆ ಕಾರಣವಾಗುತ್ತಿದೆ ಮತ್ತು ಜನರು ತಮ್ಮನ್ನು ತಾವೇ ಅಸಹ್ಯಪಡಿಸುವಂತೆ ಮಾಡುತ್ತಿದೆ. ಆದರೆ ಇಲ್ಲಿ (ಆಶ್ರಮದಲ್ಲಿ) ಇರಲು ಬಹಳ ಚೆನ್ನಾಗಿದೆ—ಇದು ಆತ್ಮನೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸ್ವತಃ ನಮ್ಮನ್ನು ಪ್ರೀತಿಸಲು ಅವಕಾಶ ಒದಗಿಸುವ ಸ್ಥಳ' ಎಂದು ತಿಳಿಸಿದರು.
ಭಾನುಮತಿ ನರಸಿಂಹನ್: ಕಳೆದ ಇಪ್ಪತ್ತು ವರ್ಷಗಳಲ್ಲಿ 115 ದೇಶಗಳ 6,000 ಪ್ರತಿನಿಧಿಗಳನ್ನು ಮತ್ತು 463 ಗಣ್ಯ ವಕ್ತಾರರನ್ನು ಒಗ್ಗೂಡಿಸಿರುವ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದ ಪ್ರಯತ್ನದ ಹಿಂದೆ ಇರುವ ಮುಖ್ಯ ಪ್ರೇರಕ ಶಕ್ತಿ ಭಾನುಮತಿ ನರಸಿಂಹನ್ ಅವರದು. ಇವರೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದ ಶಕ್ತಿಯ ಹಿಂದಿರುವ ಮಹಿಳೆ ಆಗಿದ್ದಾರೆ. ಗುರುದೇವ ಶ್ರೀ ಶ್ರೀ ರವಿಶಂಕರ್ ಸಹೋದರಿ ಹಾಗೂ IWC ಅಧ್ಯಕ್ಷರಾಗಿರುವ ಅವರು ಕಳೆದ 40 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣ, ಜೀವನೋಪಾಯದ ಅವಕಾಶಗಳು ಮತ್ತು ಯೋಗ, ಧ್ಯಾನ, ಶ್ವಾಸದ ಪ್ರಕ್ರಿಯೆ (ಬ್ರೀತ್‌ವರ್ಕ್)ಗಳ ಸಂಯೋಜನೆಯ ಮೂಲಕ ಅವರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ.
