* ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್* ಅಜಾನ್ ಧ್ವನಿವರ್ಧಕ ನಿಷೇಧ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ* ಗಾಂಧಿನಗರ ವೈದ್ಯರು ಪಿಐಎಲ್ ಸಲ್ಲಿಸಿದ್ದರು

ಅಲಹಾಬಾದ್(ಫೆ. 16) ಗುಜರಾತ್(Gujarat) ಹೈ ಕೋರ್ಟ್ ಅಲ್ಲಿನ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಧ್ವನಿವರ್ಧಕದಲ್ಲಿ(Loudspeakers) ಅಜಾನ್ (azaan) ನಿಷೇಧ ಮಾಡಲು ಕೋರಿ ಗಾಂಧಿನಗರದ (Gandhinagar) ವೈದ್ಯರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ. ಅಜಾನ್ ಶಬ್ದ ಮಾಲಿನ್ಯ ( noise pollution) ಮಾಡುತ್ತಿದ್ದು ನಾಗರಿಕರ ಮೂಲಭೂತ ಹಕ್ಕುಗಳಿಗೆ ಭಂಗ ತರುತ್ತಿದೆ ಎಂದು ಆರೋಪಿಸಿದ್ದರು.

ವೈದ್ಯ ಧರ್ಮೇಂದ್ರ ಪ್ರಜಾಪತಿ ಗಾಂಧಿನಗರದ ನಿವಾಸಿಯಾಗಿದ್ದು ಅರ್ಜಿ ಸಲ್ಲಿಸಿದ್ದರು. ಮಸೀದಿ ಹತ್ತಿರದ ನಿವಾಸಿಗಳಿಗೆ ಅಜಾನ್ ನಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದರು.

ಅರವಿಂದ್ ಕುಮಾರ್ ಮತ್ತು ಅಶುತೋಶ್ ಶಾಸ್ತ್ರಿ ಅವರದಿದ್ದ ನ್ಯಾಯಪೀಠ ಅರ್ಜಿ ಸಲ್ಲಿಸಿದ ವೈದ್ಯರ ಪರ ವಕೀಲರನ್ನು ಪ್ರಶ್ನೆ ಮಾಡಿತ್ತು. ಅಜಾನ್ ನಿಂದ ಎಷ್ಟು ಪ್ರಮಾಣದ (ಡೆಸಿಬಲ್) ಶಬ್ದ ಹೊರಗೆ ಬರುತ್ತಿದೆ? ಎಂದು ಕೇಳಿತ್ತು. 80 ಡೆಸಿಬಲ್ ಶಬ್ದಕ್ಕೆ ಪರವಾನಗಿ ಇದೆ. ಆದರೆ ಇಲ್ಲಿ 200 ಡೆಸಿಬಲ್ ಶಬ್ದ ಬರುತ್ತಿದೆ ಎಂದು ಮಾಹಿತಿ ನೀಡಿದ್ದರು.

'ಅಜಾನ್‌ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್

ಹಾಗಾದರೆ ಮದುವೆ ಮತ್ತು ಇತರೆ ಸಮಾರಂಭದ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಆಘುವುದಿಲ್ಲವೇ ಎಂದು ನ್ಯಾಯಾಲಯ ಕೇಳಿತ್ತು. ಮದುವೆ ಎನ್ನುವುದು ವ್ಯಕ್ತಿಯ ಜೀವನದಲ್ಲಕಿ ಸಾಮಾನ್ಯವಾಗಿ ಒಂದು ಆರಿ ಆಗುವುದು.. ಅಲ್ಲಿ ಬಿತ್ತರ ಮಾಡುವ ಸಂಗೀತ ಜನರಿಗೆ ಅರ್ಥವಾಗುವಂತೆ ಇರುತ್ತದೆ. ಯಾರು ಇಸ್ಲಾಂನ್ನು ನಂಬುವುದಿಲ್ಲವೋ ಅವರಿಗೆ ಪ್ರತಿದಿನ ಐದು ಸಾರಿ ಕೇಳುವ ಅಜಾನ್ ಶಬ್ದ ಮಾಲಿನ್ಯವೇ ಸರಿ ಎಂದು ವಾದ ಮಂಡಿಸಿದ್ದರು.

ಲಾಕ್ ಡೌನ್ ಸಂಣದರ್ಭದಲ್ಲಿಯೂ ಜನರಿಗೆ ತೊಂದರೆ ಆಗಿದೆ. ಮಾನಸಿಕವಾಗಿ ವ್ಯಕ್ತಿಗಳನ್ನು ಕುಗ್ಗಿಸುವ ಸಾಧ್ಯತೆಯೂ ಇದೆ. ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.

ಸ್ಥಳೀಯ ಆಡಳಿತದ ಅನಿಮತಿ ಇಲ್ಲದೇ ಬಳಕೆ ಮಾಡುತ್ತಿರುವ ಧ್ವನಿ ವರ್ಧಕಗಳು ಕಾನೂನು ಬಾಹಿರ. ಲೌಡ್ ಸ್ಪೀಕರ್ ಬಳಕೆ ಮಾಡುವ ಸಂಬಂಧ ಯಾವುದೇ ಲಿಖಿತ ಅನುಮತಿ ಇಲ್ಲ. ಧಾರ್ಮಿಕ ಪ್ರಾರ್ಥನೆ ಬೇರೆಯವರಿಗೆ ತೊಂದರೆ ಕೊಡುವಂತೆ ಇರಬಾರದು ಎಂದು ಸುಪ್ರೀಂ ಕೋರ್ಟ್ ಸಹ ಉಲ್ಲೇಖ ಮಾಡಿದೆ ಎನ್ನುವುದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಮೂದಿಸಲಾಗಿತ್ತು.

ಧ್ವನಿ ವರ್ಧಕ ಇಸ್ಲಾಂನ ಅವಿಭಾಜ್ಯ ಸಂಗತಿ ಏನೂ ಅಲ್ಲ. ಧ್ವನಿವರ್ಧಕ ಕಂಡು ಹಿಡಿಯುವುದಕ್ಕೂ ಮುನ್ನ ಅಜಾನ್ ಮತ್ತು ನಮಾಜ್ ನ್ನು ಮಸೀದಿ ಒಳಗೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಸಂಗತಿಯನ್ನು ಅರ್ಜಿಯಲ್ಲಿ ಹೇಳಲಾಗಿದೆ. ಈ ಎಲ್ಲ ವಿಚಾರಗಳಿಗೆ ವಿವರಣೆ ಕೇಳಿ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ಇದೇ ಮೊದಲ ಪ್ರಕರಣ ಏನಲ್ಲ: ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಸುತ್ತೋಲೆ ಹೊರಡಿಸಿತ್ತು. ಇದರ ಜತೆಗೆ ಅಜಾನ್ ಗೆ ನಿರ್ಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಇದಾದ ಮೇಲೆ ಉತ್ತರ ಪ್ರದೇಶದಿಂದ ಘಟನೆಯೊಂದು ವರದಿಯಾಗಿತ್ತು.

ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಸಂಗಿತಾ ಶ್ರೀವಾಸ್ತವ ಅವರು ಮಸೀದಿಯಲ್ಲಿ 'ಅಜಾನ್' ಗಾಗಿ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಲು ಕೋರಿ ಮನವಿ ಸಲ್ಲಿಸಿದ್ದರು. ಪ್ರಯಾಗ್ ರಾಜ್ ಐಜಿಪಿ ಜಿಲ್ಲಾಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ನೀಡಿದ್ದು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧ ಮಾಡಿರುವುದನ್ನು ಖಚಿತ ಮಾಡಬೇಕು ಎಂದು ತಿಳಿಸಿತ್ತು.

ಬೆಳಗ್ಗಿನ 5.30 ರ ನಿದ್ರೆಗೆ ಭಂಗ ಬರುತ್ತಿದೆ ಎಂದು ಶ್ರೀವಾಸ್ತವ ಅವರು ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿಗೆ ಪತ್ರ ಬರೆದಿದಿದ್ದರು. ನಿದ್ರೆ ಭಂಗವಾಗುವ ಕಾರಣ ಪ್ರತಿದಿನ ತಲೆನೋವಿನಿಂದ ಪರಿತಪಿಸಬೇಕಾದ ಪರಿಸ್ಥಿತಿ ಬಂದಿದೆ ಎಂದಿದ್ದರು .