'ಅಜಾನ್‌ನಿಂದ ದಿನಾ ನಿದ್ರೆ ಭಂಗ, ತಲೆನೋವು' ಧ್ವನಿವರ್ಧಕ ಬ್ಯಾನ್
ಅಜಾನ್ ನಿಂದ ನಿದ್ರೆ ಭಂಗ/ ಪ್ರತಿ ದಿನ ತಲೆನೋವಿನಿಂದ ಬಳಲುವಂತೆ ಆಗಿದೆ/ ಧ್ವನಿವರ್ಧಕ ನಿಷೇಧ ಮಾಡಲು ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಸಂಗಿತಾ ಶ್ರೀವಾಸ್ತವ ಮನವಿ/ ಧ್ವನಿವಚರ್ಧಕ ನಿಷೇಧಕ್ಕೆ ಐಜಿ ಸೂಚನೆ
ಲಕ್ನೋ(ಮಾ. 19) ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡದಂತೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸುತ್ತೋಲೆ ಹೊರಡಿಸಿತ್ತು. ಇದರ ಜತೆಗೆ ಅಜಾನ್ ಗೆ ನಿರ್ಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.
ಇದೇ ರೀತಿಯ ಸುದ್ದಿ ಇದೀಗ ಉತ್ತರ ಪ್ರದೇಶದಿಂದ ವರದಿಯಾಗಿದೆ. ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಸಂಗಿತಾ ಶ್ರೀವಾಸ್ತವ ಅವರು ಮಸೀದಿಯಲ್ಲಿ 'ಅಜಾನ್' ಗಾಗಿ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಷೇಧಿಸಲು ಕೋರಿ ಮನವಿ ಸಲ್ಲಿಸಿದ್ದರು.
ಕರ್ನಾಟಕದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿಷೇಧ..ಮಹತ್ವದ ಸುತ್ತೋಲೆ
ಈ ಮನವಿ ಪರಿಶೀಲನೆ ನಡೆಸಿದ ಪ್ರಯಾಗ್ ರಾಜ್ ಐಜಿಪಿ ಜಿಲ್ಲಾಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ನೀಡಿದ್ದು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧ ಮಾಡಿರುವುದನ್ನು ಖಚಿತ ಮಾಡಬೇಕು ಎಂದು ತಿಳಿಸಿದ್ದಾರೆ.
ಬೆಳಗ್ಗಿನ 5.30 ರ ನಿದ್ರೆಗೆ ಭಂಗ ಬರುತ್ತಿದೆ ಎಂದು ಶ್ರೀವಾಸ್ತವ ಅವರು ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿಗೆ ಪತ್ರ ಬರೆದಿದಿದ್ದರು. ನಿದ್ರೆ ಭಂಗವಾಗುವ ಕಾರಣ ಪ್ರತಿದಿನ ತಲೆನೋವಿನಿಂದ ಪರಿತಪಿಸಬೇಕಾಗಿದೆ ಎಂದು ಹೇಳಿದ್ದರು.
ಈ ಪತ್ರದ ನಂತರ ಮಸೀದಿಯಲ್ಲಿನ ಧ್ವನಿವರ್ಧಕ ದಿಕ್ಕನ್ನು ಬದಲಾಯಿಸಲಾಗಿತ್ತು. ಕೊಂಚ ಕೆಳಕ್ಕೆ ಇಳಿಸಲಾಗಿತ್ತು. ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿ ಅನ್ವಯ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.