ಬೆಂಗಳೂರಿನಲ್ಲಿ ಈ ವರ್ಷ ಮತ್ತೆ ಕೇಳಿಸಿದ ನಿಗೂಢ ಶಬ್ದ 5 ಸೆಕೆಂಡ್‌ಗಳ ಕಾಲ ಕೇಳಿಸಿತ್ತು ಭಯಾನಕ ಶಬ್ದ ಕಿಟಕಿ, ಬಾಗಿಲು ಸೇರಿದಂತೆ ಮನೆ ವಸ್ತುಗಳು ಅಲುಗಾಡಿದ ಅನುಭವ

ಬೆಂಗಳೂರು(ಜು.02): ಕೊರೋನಾ ವೈರಸ್ ಮಾರ್ಗಸೂಚಿ, ವರ್ಕ್ ಫ್ರಮ್ ಹೋಮ್ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರಿನಲ್ಲಿ ಈ ಹಿಂದಿನ ಟ್ರಾಫಿಕ್, ವಾಹನಗಳ ಶಬ್ದ ಕೊಂಚ ಮಟ್ಟಿಗೆ ಕಡಿಮೆ. ಶಾಂತವಾಗಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ನಿಗೂಢ ಶಬ್ದವೊಂದು ಕೇಳಿಸಿದೆ. ಸುಮಾರು 5 ಸೆಕೆಂಡ್‌ಗಳ ಕಾಲ ಕೇಳಿಸಿದ ಈ ಭಾರಿ ಶಬ್ದಕ್ಕೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

"

ರನ್​ವೇನಲ್ಲಿ ಸುಖೋಯ್​ ಟೇಕಾಫ್: ನಿಗೂಢ ಶಬ್ದದ ಭಯಕ್ಕೆ ತೆರೆ ಎಳೆದ HAL!

ಮಧ್ಯಾಹ್ನ 13.30ರ ಹೊತ್ತಿಗೆ ಈ ಶಬ್ದ ಕೇಳಿಸಿದೆ. ದಕ್ಷಿಣ ಬೆಂಗಳೂರಿನ ಹಲವು ಭಾಗಗಳಲ್ಲಿ ಈ ಶಬ್ದ ಕೇಳಿಸಿದೆ. ಈ ಶಬ್ದ ಕೇಳಿಸಿದ ಬೆನ್ನಲ್ಲೇ ಹಲವರು ಮನೆಯಿಂದ ಹೊರಬಂದಿದ್ದಾರೆ. ಅಪಾರ್ಟ್‌ಮೆಂಟ್ ಕಿಟಕಿ, ಮನೆಯಲ್ಲಿನ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಆದರೆ ಈ ಶಬ್ದ ಭೂಕಂಪನವಲ್ಲ, ಸ್ಫೋಟದಿಂದ ಸಂಬವಿಸಿದ ಶಬ್ದವಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟಪಡಿಸಿದೆ. ಹಾಗಾದರೆ ಈ ಶಬ್ದದ ಮೂಲ ಯಾವುದು ಅನ್ನೋ ಚರ್ಚೆ ಹಾಗೂ ಅತಂಕ ಹೆಚ್ಚಾಗಿದೆ.

Scroll to load tweet…
Scroll to load tweet…

ಕಳೆದ ವರ್ಷ ಈ ರೀತಿ ಶಬ್ದ ಕೇಳಿಸಿದ ಬೆನ್ನಲ್ಲೇ ರಕ್ಷಣಾ ಇಲಾಖೆ ಪ್ರತಿಕ್ರಿಯೆ ನೀಡಿತ್ತು. ಸೂಪರ್ ಸಾನಿಕ್ ವಿಮಾನ ಪರೀಕ್ಷೆ ವೇಳೆ ಈ ರೀತಿ ಶಬ್ದಗಳು ಸಂಭವಿಸಲಿದೆ ಎಂದಿತ್ತು. ಆದರೆ ಈ ಬಾರಿ HAL ಶಬ್ದಕ್ಕೆ ಸಾನಿಕ್ ಬೂಮ್ ಕಾರಣ ಎಂದಿಲ್ಲ. ಇಷ್ಟೇ ಅಲ್ಲ ಶಬ್ದದ ಮೂಲ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. HAL ಏರ್‌ಪೋರ್ಟ್‌ನಲ್ಲಿ ಎಂದಿನಂತ ಪೈಲೆಟ್ ತರಬೇತಿ, ಯುದ್ಧ ವಿಮಾನಗಳ ತರಬೇತಿಗಳು ನಡೆಯುತ್ತಿದೆ. ಆದರೆ ಸದ್ಯ ಕೇಳಿಸಿರುವ ಶಬ್ದದ ಮೂಲಕ್ಕೆ ವಿಮಾನ ತರಬೇತಿ ಕಾರಣ ಎಂದು ಹೇಳಲು ಯಾವುದೇ ಆಧಾರಗಳಿಲ್ಲ ಎಂದು HAL ವಕ್ತಾರ ಗೋಪಾಲ್ ಸುತಾರ್ ಹೇಳಿದ್ದಾರೆ.

ಬೆಂಗಳೂರಿನ ನಂತರ ತಮಿಳು ನಾಡಲ್ಲೂ ವಿಚಿತ್ರ ಭಯಂಕರ ಶಬ್ದ

ವಿಪತ್ತು ನಿರ್ವಹಣಾ ಕೇಂದ್ರ, HAL ಪ್ರತಿಕ್ರಿಯೆ ಬಳಿಕ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಶಬ್ದದ ಮೂಲ ಯಾವುದು? ಕಾಶ್ಮೀರದಲ್ಲಿ ಈಗಾಗಲೇ ಡ್ರೋನ್ ದಾಳಿ ಯತ್ನಗಳು ನಡೆಯುತ್ತಿದೆ. ಈ ಘಟನೆಗಳ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ಕೇಳಿಸಿರುವ ನಿಗೂಢ ಶಬ್ದ ಯಾವುದು ಅನ್ನೋ ಆತಂಕ ಜನರಲ್ಲಿ ಮನೆ ಮಾಡಿದೆ.

2020ರ ಮೇ ತಿಂಗಳಲ್ಲಿ ಇದೇ ರೀತಿ ಬೆಂಗಳೂರಿನಲ್ಲಿ ಭಾರಿ ಶಬ್ದವೊಂದು ಕೇಳಿಸಿತ್ತು. ಈ ಶಬ್ದ ಹೆಚ್ಚು ಚರ್ಚೆ ಹಾಗೂ ಆತಂಕ ಹುಟ್ಟುಹಾಕಿದ ಬೆನ್ನಲ್ಲೇ ರಕ್ಷಣಾ ಇಲಾಖೆ, ಇದು ಸೂಪರ್ ಸಾನಿಕ್ ವಿಮಾನ ಪರೀಕ್ಷೆ ವೇಳೆ ಸಂಭವಿಸಿದ ಶಬ್ದ ಎಂದು ಸ್ಪಷ್ಟಪಡಿಸಿತ್ತು. 

Scroll to load tweet…