ಬೆಂಗಳೂರಿನ ನಂತರ ತಮಿಳುನಾಡಿನಲ್ಲಿಯೂ ಭಯಂಕರ ಶಬ್ದ/ ಬೆಚ್ಚಿ ಬಿದ್ದ ನಾಘರಿಕರು/ ವಿಮಾನದ ಸದ್ದು ಎಂದು ಪ್ರಾಥಮಿಕ ವರದಿ/ ಭೂಕಂಪನದ ಯಾವುದೇ ರಿಪೋರ್ಟ್ ಇಲ್ಲ

ಚೆನ್ನೈ(ಮೇ 29) ಕಳೆದ ವಾರ ಬೆಂಗಳೂರಿನಲ್ಲಿ ಕೇಳಿದ್ದ ನಿಗೂಢ ಶಬ್ದ ಆತಂಕಕ್ಕೆ ಕಾರಣವಾಗಿತ್ತು. ಬೆಂಗಳೂರಿನ ನಂತರ ಕೋಲಾರ ಮತ್ತು ಮಂಡ್ಯದಲ್ಲಿಯೂ ಶಬ್ದ ಕೇಳಿದ್ದ ವರದಿಯಾಗಿತ್ತು. ಇದೀಗ ತಮಿಳುನಾಡಿನಲ್ಲಿಯೂ ನಿಗೂಢ ಶಬ್ದ ಕೇಳಿ ಬಂದಿದೆ.

Add Asianetnews Kannada as a Preferred SourcegooglePreferred

ತಮಿಳುನಾಡಿನ ತಿರುಪ್ಪುರದಲ್ಲಿ ನಿಗೂಢ ಶಬ್ದ ಕೇಳಿಸಿದೆ. ಜನರು ಆತಂಕದಿಂದ ಮನೆಯೊಳಗಿಂದ ಓಡಿ ಬಂದಿದ್ದಾರೆ. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಶಬ್ದ ಕೇಳಿಸಿದೆ. ತಿರುಪ್ಪುರದ ಧಾರಾಪುರಂ, ಪಲ್ಲಾಡಂ ಪ್ರದೇಶದಲ್ಲಿ ಆಕಾಶದಿಂದ ಭಾರಿ ಶಬ್ದ ಕೇಳಿಬಂದಿದ್ದು ವರದಿಯಾಗಿದೆ.

ಬೆಂಗಳೂರಿನ ನಿಗೂಢ ಶಬ್ದದ ಹಿಂದಿನ ಸತ್ಯ ಬಹಿರಂಗ

ಸೂಪರ್‌ಸೋನಿಕ್ ಏರ್‌ಕ್ರಾಫ್ಟ್ ಶಬ್ದ ಇದಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಡೈಯಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಶಬ್ದ ಕೇಳಿದಾಗ ಬಾಯ್ಲರ್ ಸ್ಫೋಟಗೊಂಡಿದೆ ಎಂದು ತಿಳಿದು ಆತಂಕದಿಂದ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಪನಿಯಲ್ಲಿ ಎಲ್ಲವೂ ಸರಿಯಾಗಿತ್ತು. ಮೇ 20 ರಂದು ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರಿನಲ್ಲೂ ಶಬ್ದ ಕೇಳಿತ್ತು.