ರನ್‌ವೇನಲ್ಲಿ ಸುಖೋಯ್ ಟೇಕಾಫ್: ನಿಗೂಢ ಶಬ್ದದ ಭಯಕ್ಕೆ ತೆರೆ ಎಳೆದ HAL!
ಬೆಂಗಳೂರು ಜನತೆ ನಿದ್ದೆಗೆಡಿಸಿದ್ದ ಶಬ್ಧಕ್ಕೆ ಸಿಕ್ತು ಸ್ಪಷ್ಟಣೆ| ಭೂಕಂಪವಲ್ಲ, ಹವಾಮಾನ ಕಾರಣದಿಂದಲೂ ಕೇಳಿ ಬಂದ ಸದ್ದಲ್ಲ| ಎಚ್‌ಎಎಲ್ ರನ್‌ವೇನಲ್ಲಿ ಟೇಕ್ ಆಫ್ ಆದ ಸುಖೋಯ್ ಯುದ್ಧ ವಿಮಾನದಿಂದ ಉಂಟಾದ ಸದ್ದು
ಬೆಂಗಳೂರು(ಮೇ.20) ಬೆಂಗಳೂರಿಗರನ್ನು ಮಟ ಮಟ ಮಧ್ಯಾಹ್ನ ಬೆಚ್ಚಿ ಬೀಳಿಸಿದ್ದ ಶಬ್ಧಕ್ಕೇನು ಕಾರಣ ಎಂಬುವುದು ಕೊನೆಗೂ ಬಯಲಾಗಿದ್ದು, ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತಾಗಿದೆ.
"
ಹೌದು ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಸ್ಪೋಟದಂತಹ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್ ಹಳ್ಳಿ, ಇಂಧಿರಾನಗರ, ಹೆಬ್ಬಾಳ, ಜೆ. ಪಿ. ನಗರ, ಕೆ. ಆರ್ ಪುರಂ ಸೇರಿದಂತೆ ಅನೇಕ ಕಡೆ ಈ ಸದ್ದು ಜನರ ನಿದ್ದೆಗೆಡಿಸಿತ್ತು. ಭೂಕಂಪವಾಗಿರಬುದೆಂಬ ಚರ್ಚೆ ಹುಟ್ಟು ಹಾಕಿತ್ತು. ಅಷ್ಟರಲ್ಲೇ KSNDMC ಅಧಿಕಾರಿಗಳು ಇದು ಭೂಕಂಪ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು.. ಹೀಗಿರುವಾಗ ಶಬ್ಧ ಹೇಗೆ ಬಂದಿದ್ದು ಎಂಬ ಪ್ರಶ್ನೆ ಜನರ ಮನದಲ್ಲಿ ಹಾಗೇ ಉಳಿದಿತ್ತು. ಸದ್ಯ ಈ ಪ್ರಶ್ನೆಗೆ HAL ಸ್ಪಷ್ಟನೆ ನೀಡಿದೆ.
ಬೆಂಗಳೂರಿನಲ್ಲಿ ಭಯಾನಕ ಸದ್ದು, ಭೂಕಂಪವಲ್ಲ, ಹೆದರೋ ಅಗತ್ಯವಿಲ್ಲ...!
"
HAL ಸ್ಪಷ್ಟನೆ
ಈ ಸಂಭಂದ ಪ್ರತಿಕ್ರಿಯಿಸಿರುವ HAL 'ಸುಖೋಯ್ 30 ಯುದ್ಧ ವಿಮಾನನಿಂದಲೇ ಶಬ್ದ ಕೇಳಿ ಬಂದಿತ್ತು. ಯುದ್ಧ ವಿಮಾನ ಟೇಕಾಫ್ ವೇಳೆ ಉಂಟಾದ ಶಬ್ದ ಇದಾಗಿದೆ. HAL ರನ್‌ವೇನಲ್ಲಿ ಸುಖೋಯ್ 90 ಡಿಗ್ರಿ ಟೇಕ್ ಆಫ್ ಮಾಡಿದಾಗ ಶಬ್ದ ಸೃಷ್ಟಿಯಾಗಿದೆ. 90 ಡಿಗ್ರಿ ಟೇಕಾಫ್ ಮಾಡಿದಾಗ 10 ಕಿಮೀ ವರೆಗೂ ಶಬ್ದ ಕೇಳಿಸುತ್ತದೆ' ಎಂದು ಸ್ಪಷ್ಟನೆ ನೀಡಿದೆ.
ಟ್ವಿಟರ್‌ನಲ್ಲೂ ಈ ಬಗ್ಗೆ ತೀವ್ರ ಚರ್ಚೆಯಾಗಿದ್ದು, ಅಲ್ಲರೂ ಈ ಬಗ್ಗೆ ತಮಗೆ ತೋರಿದ ಸ್ಪಷ್ಟನೆ ನೀಡಲಾರಂಭಿಸಿದ್ದರು.