ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕಿಸ್ತಾನಕ್ಕೆ ಭೇಟಿ ನೀಡಿ ಲಾಹೋರ್‌ನಲ್ಲಿರುವ ಲವ ಸಮಾಧಿಗೆ ಭೇಟಿ ನೀಡಿದ್ದಾರೆ. ಲವನಿಂದಲೇ ಲಾಹೋರ್ ಹೆಸರು ಬಂದಿದೆ ಎಂದು ಹೇಳಲಾಗಿದ್ದು, ಪಾಕ್ ಸರ್ಕಾರವೂ ಇದನ್ನು ಒಪ್ಪಿಕೊಂಡಿದೆ ಎಂದು ಶುಕ್ಲಾ ಹೇಳಿದ್ದಾರೆ.
ನವದೆಹಲಿ (ಮಾ.7): ಬಿಸಿಸಿಐ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ರಾಜ್ಯಸಭಾ ಸಂಸದ ಗುರುವಾರ ಎಕ್ಸ್‌ನಲ್ಲಿ ಹಂಚಿಕೊಂಡ ಫೋಟೋದ ಕಾರಣದಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜೀವ್ ಶುಕ್ಲಾ, ಲಾಹೋರ್‌ನಲ್ಲಿರುವ ಭಗವಾನ್ ರಾಮನ ಪುತ್ರ ಲವ ಸಮಾಧಿಗೂ ಭೇಟಿ ನೀಡಿದ್ದಾರೆ. ಈ ವೇಳೆ ಅವರೊಂದಿಗೆ ಪಾಕಿಸ್ತಾನದ ಗೃಹ ಸಚಿವ ಮೊಹ್ಶಿನ್ ನಕ್ವಿ ಕೂಡ ಜೊತೆಯಲ್ಲಿದ್ದರು. ಲವನ ಕಾರಣದಾಗಿಯೇ ಪಾಕಿಸ್ತಾನದ ನಗರಕ್ಕೆ ಲಾಹೋರ್ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಎಕ್ಸ್‌ನಲ್ಲಿ ತಮ್ಮ ಭೇಟಿಯ ಬಗ್ಗೆ ಬರೆದುಕೊಂಡಿರುವ ರಾಜೀವ್ ಶುಕ್ಲಾ, ತಮ್ಮ ಭೇಟಿ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. 'ಲಾಹೋರ್‌ನ ಪಾಲಿಕೆಯಲ್ಲಿರುವ ದಾಖಲೆಯ ಪ್ರಕಾರವೇ ಹೇಳುವುದಾದರೆ, ಭಗವಾನ್ ರಾಮನ ಪುತ್ರ ಲವನ ಕಾರಣಕ್ಕಾಗಿಯೇ ಲಾಹೋರ್ ಎನ್ನುವ ಹೆಸರುವ ಪಡೆದುಕೊಂಡಿದ್ದರೆ, ಕಸೂರ್ ನಗರ ರಾಮನ ಮತ್ತೊಬ್ಬ ಪುತ್ರ ಕುಶನಿಂದಾಗಿ ಈ ಹೆಸರು ಪಡೆದುಕೊಂಡಿತ್ತು. ಪಾಕಿಸ್ತಾನ ಸರ್ಕಾರ ಕೂಡ ಸತ್ಯವನ್ನು ಒಪ್ಪಿಕೊಂಡಿದೆ' ಎಂದು ಟ್ವೀಟ್ ಮಾಡಿದ್ದಾರೆ.
"ಲಾಹೋರ್‌ನ ಪ್ರಾಚೀನ ಕೋಟೆಯಲ್ಲಿ ಶ್ರೀರಾಮನ ಮಗ ಲವನ ಪ್ರಾಚೀನ ಸಮಾಧಿ ಇದೆ. ಲಾಹೋರ್ ಲವನಿಂದಾಗಿ ಈ ಹೆಸರು ಬಂದಿದೆ. ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತು. ಈ ಸಮಾಧಿಯನ್ನು ನವೀಕರಿಸುತ್ತಿರುವ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ನನ್ನ ಜೊತೆಗಿದ್ದರು. ಮೊಹ್ಸಿನ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೆಲಸವನ್ನು ಪ್ರಾರಂಭಿಸಿದ್ದರು" ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಆಹ್ವಾನದ ಮೇರೆಗೆ ರಾಜೀವ್ ಶುಕ್ಲಾ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನವು 2025 ರ ಚಾಂಪಿಯನ್ಸ್ ಟ್ರೋಫಿಯ ಆತಿಥೇಯ ರಾಷ್ಟ್ರವಾಗಿದ್ದು, ಭಾರತ ತಂಡ ಪ್ರಯಾಣಿಸಲು ನಿರಾಕರಿಸಿದ ಕಾರಣ ಟೂರ್ನಮೆಂಟ್ ಅನ್ನು ಹೈಬ್ರಿಡ್ ಸ್ವರೂಪದಲ್ಲಿ ನಡೆಸಲಾಗುತ್ತಿದ್ದು, ಮಾರ್ಚ್ 9 ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ವರ, ಕಿವೀಸ್‌ಗೆ ಶಾಪವಾದ ಹೈಬ್ರಿಡ್ ಮಾದರಿ ಟೂರ್ನಿ!
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿದೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಮೆನ್ ಇನ್ ಬ್ಲೂ ತಂಡವು ಇಲ್ಲಿಯವರೆಗೆ ಆಡಿದ ಪ್ರತಿ ಪಂದ್ಯದಲ್ಲೂ ಗೆಲುವು ಕಂಡು ನಾಕೌಟ್‌ಗೇರಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆದಿತ್ತು.ಮತ್ತೊಂದು ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿ ಫೈನಲ್‌ಗೇರಿತ್ತು. ಮಾರ್ಚ್ 9 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು ಎದುರಿಸಲಿದೆ.
ಪಾಕಿಸ್ತಾನ-ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಮ್ಯಾಚ್ ವೇಳೆ, ಗ್ರೌಂಡ್‌ನಲ್ಲಿ ಕಾಣಿಸಿಕೊಂಡ ಕರಿಬೆಕ್ಕು!
