ಶ್ರೀರಾಮ ಹಿಂದುಗಳಿಗೆ ಮಾತ್ರವಲ್ಲ, ವಿಶ್ವಕ್ಕೆ ದೇವರು: ಫಾರೂಖ್ ಅಬ್ದುಲ್ಲಾ
ಶ್ರೀರಾಮ ವಿಶ್ವದ ಪ್ರತಿ ವ್ಯಕ್ತಿಗೂ ಸೇರಿದವನು. ಆತ ಜಾತಿ ಧರ್ಮದಿಂದಾಚೆಗೆ ಮಾನವೀಯತೆ ಅಂಶವನ್ನು ವಿಶ್ವಕ್ಕೆ ನೀಡಿದ ವ್ಯಕ್ತಿ. ದೀನ ದುರ್ಬಲರನ್ನು ಮೇಲೆತ್ತುವ ಕೆಲಸವನ್ನು ಶ್ರೀರಾಮ ಮಾಡಿದ್ದ. ಭ್ರಾತೃತ್ವದ ಪರಿಕಲ್ಪನೆಯ ಮೂಲಕ ಶಾಂತಿ ಪಸರಿಸಿದವನು ರಾಮ. ಆದರೆ ಈಗ ದೇಶದಲ್ಲಿ ಭ್ರಾತೃತ್ವ ಅಳಿಯುತ್ತಿದೆ ಎಂದು ಫಾರೂಖ್ ಹೇಳಿದರು.
ಪೂಂಛ್ (ಡಿಸೆಂಬರ್ 31, 2023): ಶ್ರೀರಾಮಚಂದ್ರ ಹಿಂದುಗಳಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೇ ಭಗವಂತ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ‘ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಮಂದಿರ ಸ್ಥಾಪನೆಗೆ ಶ್ರಮಿಸಿದವರಿಗೆಲ್ಲ ಅಭಿನಂದನೆಗಳು. ಶ್ರೀರಾಮ ವಿಶ್ವದ ಪ್ರತಿ ವ್ಯಕ್ತಿಗೂ ಸೇರಿದವನು. ಆತ ಜಾತಿ ಧರ್ಮದಿಂದಾಚೆಗೆ ಮಾನವೀಯತೆ ಅಂಶವನ್ನು ವಿಶ್ವಕ್ಕೆ ನೀಡಿದ ವ್ಯಕ್ತಿ. ದೀನ ದುರ್ಬಲರನ್ನು ಮೇಲೆತ್ತುವ ಕೆಲಸವನ್ನು ಶ್ರೀರಾಮ ಮಾಡಿದ್ದ. ಭ್ರಾತೃತ್ವದ ಪರಿಕಲ್ಪನೆಯ ಮೂಲಕ ಶಾಂತಿ ಪಸರಿಸಿದವನು ರಾಮ. ಆದರೆ ಈಗ ದೇಶದಲ್ಲಿ ಭ್ರಾತೃತ್ವ ಅಳಿಯುತ್ತಿದೆ ಎಂದು ಫಾರೂಖ್ ಹೇಳಿದರು.
ಇದನ್ನು ಓದಿ: ರಾಮ ಮಂದಿರ ಉದ್ಘಾಟನೆ: ಅಡ್ವಾಣಿ, ಜೋಶಿ ಅಯೋಧ್ಯೆಗೆ ಕರೆತರಲು ವಿಶೇಷ ವಿಮಾನ?
ಮೋದಿ ಮೇಲೆ ಬಾಬ್ರಿ ಮಸೀದಿ ದಾವೆದಾರ ಅನ್ಸಾರಿ ಪುಷ್ಪವೃಷ್ಟಿ!
ಅಯೋಧ್ಯೆ: ರಾಮಜನ್ಮಭೂಮಿ ಭೂವಿವಾದ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿ ರೋಡ್ ಶೋ ನಡೆಸುವಾಗ, ಪುಷ್ಪವೃಷ್ಟಿ ಮಾಡಿ ಗಮನ ಸೆಳೆದಿದ್ದಾರೆ. ಜೊತೆಗೆ ಮೋದಿ ಅವರಿಂದಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪವಿತ್ರ ನಗರಕ್ಕೆ ಬಂದಿಳಿದ ಮೋದಿಯವರಿಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಹರ್ಷೋದ್ಗಾರ, ಬೀಸುವ ಮತ್ತುಪುಷ್ಪವೃಷ್ಟಿ ಮಾಡುವ ಮೂಲಕ ಭವ್ಯ ಸ್ವಾಗತ ನೀಡಿದರು. ಈ ವೇಳೆ ಇಕ್ಬಾಲ್ ಅನ್ಸಾರಿ ಕೂಡ ಮೋದಿ ರೋಡ್ ಶೋ ಸಾಗುವ ಮಾರ್ಗಮಧ್ಯೆ ಕೈಯಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ಹಿಡಿದು ನಿಂತು ಮೋದಿ ಅವರ ಮೇಲೆ ವೃಷ್ಟಿಗರೆದರು.
‘ಮೋದಿ ನಮ್ಮ ಊರ ಅತಿಥಿ. ನಮ್ಮ ಪ್ರಧಾನಿ. ಹೀಗಾಗಿ ನಮ್ಮ ಮನೆ ಮುಂದೆ ಅವರು ಬಂದಾಗ ಹೂಮಳೆ ಸುರಿಸಿದೆ. ಇದಕ್ಕೆ ನನ್ನ ಕುಟುಂಬಸ್ಥರೂ ಸಾಥ್ ನೀಡಿದರು’ ಎಂದು ನುಡಿದರು.
ಈ ಹಿಂದೆ ಅನ್ಸಾರಿ ಅವರು, ರಾಮಮಂದಿರ ಶಂಕುಸ್ಥಾಪನೆಗೆಂದು ಮೋದಿ ಅಯೋಧ್ಯೆಗೆ ಬಂದಾಗ ಮಾತನಾಡಿ, ‘ಮೋದಿಯವರು ಅಯೋಧ್ಯೆಗೆ ಭೇಟಿ ನೀಡುತ್ತಿರುವುದು ಅದೃಷ್ಟ. ಮೋದಿ ಅವರ ಅಮೃತ ಹಸ್ತದಿಂದಲೇ ರಾಮನ ‘ಪ್ರಾಣ ಪ್ರತಿಷ್ಠಾ’ ನೆರವೇರಬೇಕು’ ಎಂದು ಆಗ್ರಹಿಸಿದ್ದರು.
ಅಯೋಧ್ಯೇಲಿ ಅಭಿವೃದ್ಧಿ ಪರ್ವ: 15700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ