ಅಯೋಧ್ಯೇಲಿ ಅಭಿವೃದ್ಧಿ ಪರ್ವ: 15700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ

ಏರ್‌ಪೋರ್ಟ್‌ಗೆ ವಾಪಸಾಗುವ ಮಾರ್ಗ ಮಧ್ಯೆ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಚೌಕ್‌ಗೆ ಭೇಟಿ ನೀಡಿದರು. ಚೌಕ್‌ನಲ್ಲಿ ಲತಾ ಅವರ ಸ್ಮರಣಾರ್ಥ ಬೃಹತ್ ಗಾತ್ರದ ವೀಣೆಯನ್ನು ಅಳವಡಿಸಲಾಗಿದೆ. ಮೋದಿ ಭೇಟಿಯ ವೇಳೆ ಲತಾ ಮಂಗೇಶ್ಕರ್ ಹಾಡಿದ ಭಕ್ತಿಗೀತೆಯನ್ನು ನುಡಿಸಲಾಯಿತು.

pm modi launches rs 15700 crore projects in ayodhya ash

ಅಯೋಧ್ಯೆ (ಡಿಸೆಂಬರ್ 31, 2023): ಜನವರಿ 22ರ ರಾಮಮಂದಿರ ಉದ್ಘಾಟನೆ ಹಾಗೂ ರಾಮದೇವರ ಮೂರ್ತಿ ಪ್ರತಿಷ್ಠಾಪನೆಗೆ ಪೂರ್ವಭಾವಿಗಾಗಿ ಶನಿವಾರ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವವೇ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಮತ್ತು ಮರು ಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಅಲ್ಲಿಂದಲೇ ಅವರು ದೇಶದ ವಿವಿಧ ಸ್ಥಳ ಸಂಪರ್ಕಿಸುವ 2 ಅಮೃತ್ ಭಾರತ್ ಮತ್ತು 6 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಅಲ್ಲದೆ, ಅಯೋಧ್ಯೆ ಹಾಗೂ ಉತ್ತರ ಪ್ರದೇಶದ ಸುಮಾರು 15,700 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮೋದಿ ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್‌ಶೋ ನಡೆಸಿದರು. ಈ ವೇಳೆ ಮಾರ್ಗದುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಜನರು, ಮೋದಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಬಿಜೆಪಿ ಧ್ವಜಗಳನ್ನು ಬೀಸಿ ಮೋದಿಗೆ ಜೈಕಾರ ಹಾಕಿದರು. ಪ್ರಧಾನಿಯವರು ಮಾರ್ಗದುದ್ದಕ್ಕೂ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳನ್ನು ವೀಕ್ಷಿಸಿದರು.

ಶ್ರೀರಾಮ ಭಕ್ತರಿಗೆ ಅಯೋಧ್ಯೆಯಿಂದ ಪ್ರಧಾನಿ ಮೋದಿ ವಿಶೇಷ ಮನವಿ!

ರೋಡ್‌ ಶೋ ಮೂಲಕ ರೈಲು ನಿಲ್ದಾಣಕ್ಕೆ ಆಗಿಸಿದ ಮೋದಿ, ಮರು ಅಭಿವೃದ್ಧಿಗೊಂಡ ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಉದ್ಘಾಟಿಸಿದರು. ಅಲ್ಲಿಂದಲೇ ದರ್ಭಾಂಗ - ಅಯೋಧ್ಯೆ - ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.

ಇದೇ ವೇಳೆ, ಅವರು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಅವು: ಶ್ರೀ ಮಾತಾ ವೈಷ್ಣೋದೇವಿ ಕತ್ರಾ - ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಅಮೃತಸರ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಕೊಯಮತ್ತೂರು - ಬೆಂಗಳೂರು ದಂಡು ವಂದೇ ಭಾರತ್ ಎಕ್ಸ್‌ಪ್ರೆಸ್, ಮಂಗಳೂರು - ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್, ಜಾಲ್ನಾ - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಯೋಧ್ಯೆ - ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್‌ಪ್ರೆಸ್.

ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟಿಸಿದ ಮೋದಿ: ರಾಜ್ಯಕ್ಕೂ 3 ರೈಲುಗಳ ಗಿಫ್ಟ್‌ ನೀಡಿದ ಪ್ರಧಾನಿ

ಈ ವೇಳೆ ಅಯೋಧ್ಯೆ ನಿಲ್ದಾಣದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ವೀಕ್ಷಿಸಿದರು. ಮೋದಿ ಜತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಇದ್ದರು.

ನಂತರ ಏರ್‌ಪೋರ್ಟ್‌ಗೆ ವಾಪಸಾಗುವ ಮಾರ್ಗ ಮಧ್ಯೆ ಪ್ರಧಾನಿ ಮೋದಿ ಲತಾ ಮಂಗೇಶ್ಕರ್ ಚೌಕ್‌ಗೆ ಭೇಟಿ ನೀಡಿದರು. ಚೌಕ್‌ನಲ್ಲಿ ಲತಾ ಅವರ ಸ್ಮರಣಾರ್ಥ ಬೃಹತ್ ಗಾತ್ರದ ವೀಣೆಯನ್ನು ಅಳವಡಿಸಲಾಗಿದೆ. ಮೋದಿ ಭೇಟಿಯ ವೇಳೆ ಲತಾ ಮಂಗೇಶ್ಕರ್ ಹಾಡಿದ ಭಕ್ತಿಗೀತೆಯನ್ನು ನುಡಿಸಲಾಯಿತು.

ರಾಮಮಂದಿರ ಉದ್ಘಾಟನೆ: 50,000 ಕೋಟಿ ರೂ. ಬಿಸಿನೆಸ್; ರಾಮಮಂದಿರ ಪ್ರತಿಕೃತಿಗೆ ಹೆಚ್ಚು ಬೇಡಿಕೆ

ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜ। (ನಿವೃತ್ತ) ವಿ.ಕೆ.ಸಿಂಗ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ನಾಯಕರು ಮೋದಿ ಜತೆಗಿದ್ದರು.
ಬಳಿಕ ಮೋದಿ ಅವರು ಸಮೀಪದಲ್ಲೇ ಆಯೋಜನೆಗೊಂಡಿದ್ದ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗಿಯಾಗಿ ಭಾಷಣ ಮಾಡಿ, ದಿಲ್ಲಿಗೆ ನಿರ್ಗಮಿಸಿದರು.

Latest Videos
Follow Us:
Download App:
  • android
  • ios