ರಾಮ ಮಂದಿರ ಉದ್ಘಾಟನೆ: ಅಡ್ವಾಣಿ, ಜೋಶಿ ಅಯೋಧ್ಯೆಗೆ ಕರೆತರಲು ವಿಶೇಷ ವಿಮಾನ?

ಒಂದು ವೇಳೆ ಉಭಯ ನಾಯಕರು ದೇಗುಲಕ್ಕೆ ಆಗಮಿಸಲು ಬಯಸಿದರೆ ಅವರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

special flight arrangement for lk advani murli manohar joshi to attend ayodhya ram mandir inauguration ash

ನವದೆಹಲಿ (ಡಿಸೆಂಬರ್ 31, 2023): ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ವರಿಷ್ಠರಾದ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್‌ ಜೋಶಿ ಅವರು ಆಗಮಿಸಲು ಬಯಸಿದರೆ ಅವರನ್ನು ಕರೆತಲು ವಿಶ್ವಹಿಂದೂ ಪರಿಷತ್‌ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಹಿರಿಯ ನಾಯಕರಿಗೆ ದೇಗುಲ ನಿರ್ಮಾಣ ಟ್ರಸ್ಟ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿತ್ತಾದರೂ, ಅಂದು ಭಾರೀ ಜನಜಂಗುಳಿ ಇರುವ ಕಾರಣ ಅಂದು ಬರದೇ ಇರುವುದು ಸೂಕ್ತ ಎಂದು ಸಲಹೆ ನೀಡಿತ್ತು. 

ಇದಕ್ಕೆ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಒಂದು ವೇಳೆ ಉಭಯ ನಾಯಕರು ದೇಗುಲಕ್ಕೆ ಆಗಮಿಸಲು ಬಯಸಿದರೆ ಅವರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಅಯೋಧ್ಯೇಲಿ ಅಭಿವೃದ್ಧಿ ಪರ್ವ: 15700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ

ಅಯೋಧ್ಯೆ ವಿಮಾನದಲ್ಲಿ ಹನುಮಾನ್‌ ಚಾಲೀಸಾ ಪಠಿಸಿ ಭಕ್ತರ ಸಂಭ್ರಮ!
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಶನಿವಾರ ಉದ್ಘಾಟನೆಗೊಂಡ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನದಲ್ಲಿ ಭಕ್ತರು ಹನುಮಾನ್‌ ಚಾಲೀಸಾ ಪಠಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೇ ವಿಮಾನ ಇಳಿಯುವ ಸಮಯದಲ್ಲಿ ‘ಜೈ ಶ್ರೀರಾಮ್‌’ ಘೋಷಣೆಯನ್ನು ಕೂಗಿದ್ದಾರೆ. ಈ ನಡುವೆ ಮೊದಲ ವಿಮಾನದ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ಕೇಕ್‌ ವಿತರಿಸಲಾಯಿತು.

ಶ್ರೀರಾಮ ಭಕ್ತರಿಗೆ ಅಯೋಧ್ಯೆಯಿಂದ ಪ್ರಧಾನಿ ಮೋದಿ ವಿಶೇಷ ಮನವಿ!

Latest Videos
Follow Us:
Download App:
  • android
  • ios