Asianet Suvarna News Asianet Suvarna News

ಟ್ವಿಟರ್ MDಗೆ ಬಿಗ್ ರಿಲೀಫ್; UP ಪೊಲೀಸ್ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ!

  • ಉತ್ತರ ಪ್ರದೇಶ ಪೊಲೀಸರ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ
  • ಲೋನಿ ಹಲ್ಲೆ ಪ್ರಕರಣ ಕುರಿತು ವಿಚಾರಣೆ ಹಾಜರಾಗಲು ನೀಡಿದ್ದ ನೊಟೀಸ್
  • ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿಗೆ ನೀಡಿದ್ದ ನೋಟಿಸ್‌ಗೆ
Loni case Karnataka High Court grant interim relief to Twitter MD not to take any coercive steps ckm
Author
Bengaluru, First Published Jun 24, 2021, 6:14 PM IST

ಬೆಂಗಳೂರು(ಜೂ.24): ಲೋನಿ ಹಲ್ಲೆ ಪ್ರಕರಣ ಸಂಬಂಧ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಬೇಕಿದ್ದ ಭಾರತದ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ವಿಚಾರಣೆ ಹಾಜರಾಗುವಂತೆ ಉತ್ತರ ಪ್ರದೇಶ ಪೊಲೀಸರು ನೀಡಿದ್ದ ನೋಟಿಸ್‌ಗೆ, ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇಷ್ಟೇ ಅಲ್ಲ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶ ನೀಡಿದೆ.

ವಿಡಿಯೋ ಕಾಲ್ ಆಗಲ್ಲ, ಠಾಣೆಯಲ್ಲೇ ವಿಚಾರಣೆ; ಟ್ವಿಟರ್ MDಗೆ ಯುಪಿ ಪೊಲೀಸ್ ಸಮನ್ಸ್!..

ಮುಸ್ಲಿ ವ್ಯಕ್ತಿಗೆ ಥಳಿಸಿದ ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಲು ಹೇಳಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೋಮು ಸಂಘರ್ಷ ಸೃಷ್ಟಿಸಲು ಪ್ರಚೋದನೆ ನೀಡಿದ ಸಂಬಂಧ ಗಾಝಿಯಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಲೋನಿ ಪ್ರಕರಣದಲ್ಲಿ CRPC ಸೆಕ್ಷನ್ 41 A ಅಡಿಯಲ್ಲಿ ಗಾಜಿಯಾಬಾದ್ ಪೊಲೀಸರು ನೀಡಿದ ನೋಟಿಸ್ ವಿರುದ್ಧ ಮಹೇಶ್ವರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಪೊಲಿಸರು ನಿಗದಿಪಡಿಸಿದ ಸಮಯಕ್ಕೆ ವಿಚಾರಣೆ ಹಾಜರಾಗಜ ಮನೀಶ್ ಮಹೇಶ್ವರಿ, ತಾನು ವಿಡಿಯೋ ಕಾಲ್‌ನಲ್ಲಿ ಲಭ್ಯವಿರುವುದಾಗಿ ಹೇಳಿದ್ದರು. ಆದರೆ ಗಾಝಿಯಾಬಾದ್ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ನೊಟೀಸ್ ನೀಡಲಾಗಿತ್ತು. ಇದೀಗ ಕೋರ್ಟ್ ವಿಚಾರಣೆಯನ್ನು ವರ್ಚುವಲ್ ಮೂಲಕವೂ ನಡೆಸಬಹುದು ಎಂದು ನಿರ್ದೇಶಿಸಿದೆ.

ಕಾನೂನು ಶ್ರೇಷ್ಠ, ನಿಮ್ಮ ನೀತಿಗಳಲ್ಲ: ಟ್ವೀಟರ್‌ಗೆ ಚಾಟಿ!.

ಲೋನಿ ಹಲ್ಲೆ ಪ್ರಕರಣದಲ್ಲಿ ಟ್ವಿಟರ್ ಎಂಡಿ ಅವರ ಪಾತ್ರವಿಲ್ಲ. ಟ್ವಿಟರ್ ವೇದಿಕೆಯಲ್ಲಿ ಹರಿದಾಡಿದ ವಿಡಿಯೋಗೂ ಮನೀಶ್ ಮಹೇಶ್ವರಿಗೆ ಸಂಬಂಧವಿಲ್ಲ. ಆದರೆ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮನೀಶ್ ಮಹೇಶ್ವರಿ ಪರ ವಕೀಲರು ವಿಚಾರಣೆ ವೇಳೆ ಹೇಳಿದ್ದಾರೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ಗಾಝಿಯಾಬಾದ್ ಪೊಲೀಸರು ಖುದ್ದು ಠಾಣೆಗೆ ಹಾಜರಾಗಬೇಕು ಎಂಬ ನೋಟಿಸ್ ಸುಪ್ರೀಂ ಕೋರ್ಟ್ ನಿರ್ದೇಶವನ್ನು ನೀರಿದೆ. ಟ್ಟಿಟರ್ ಎಂಡಿ ಬೆಂಗಳೂರು ನಿವಾಸಿಯಾಗಿದ್ದು, ವಿಡಿಯೋ ಕಾಲ್ ಮೂಲಕ ವಿಚಾರಣೆಗೆ ಲಭ್ಯರಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ವರ್ಚುವಲ್ ಮೂಲಕ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದಿದೆ. ಹೀಗಾಗಿ ಟ್ವಿಟರ್ ಎಂಡಿ ಬೆಂಗಳೂರಿನಿಂದ ವರ್ಚುವಲ್ ಮೂಲಕ ಹೇಳಿಕೆ ನೀಡಲು ಅನುಮಾಡಿಕೊಡಬೇಕು ಎಂದು ವಕೀಲು ಕರ್ನಾಟಕ ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ್ದರು.

Follow Us:
Download App:
  • android
  • ios