ಬಳಕೆಯಲ್ಲಿ ಇಲ್ಲದ 76 ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಗೆ ಗುರುವಾರ ಲೋಕಸಭೆ ತನ್ನ ಸಮ್ಮತಿ ನೀಡಿದೆ. ಇವು ಬ್ರಿಟಿಷ್‌ ಸರ್ಕಾರದ ಕಾನೂನುಗಳಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ಇರಲಿಲ್ಲ.

ನವದೆಹಲಿ: ಬಳಕೆಯಲ್ಲಿ ಇಲ್ಲದ 76 ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಗೆ ಗುರುವಾರ ಲೋಕಸಭೆ ತನ್ನ ಸಮ್ಮತಿ ನೀಡಿದೆ. ಇವು ಬ್ರಿಟಿಷ್‌ ಸರ್ಕಾರದ ಕಾನೂನುಗಳಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ಇರಲಿಲ್ಲ. ಹೀಗಾಗಿ ರದ್ದು ಮಾಡಲಾಗಿದೆ. ಈ ಕ್ರಮವು ಜನರ ಜೀವನ ಮತ್ತು ವ್ಯವಹಾರಗಳನ್ನು ಸುಲಭಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಸರ್ಕಾರ ಹೇಳಿದೆ.

ಈವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈವರೆಗೆ 1,486 ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿತ್ತು. ಈಗ 76 ಕಾನೂನಿನೊಂದಿಗೆ, ಇವುಗಳ ಸಂಖ್ಯೆ 1,,562ಕ್ಕೆ ಏರಿಕೆಯಾಗಲಿದೆ. ಕಳೆದ ಡಿಸೆಂಬರ್‌ನಲ್ಲಿ 65 ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಮತ್ತು ತಿದ್ದುಪಡಿ ಮಾಡುವ ಮಸೂದೆ ಬಗ್ಗೆ ಸರ್ಕಾರ ತಿಳಿಸಿತ್ತಾದರೂ ಅಧಿವೇಶನದಲ್ಲಿ ಮಸೂದೆ ಚರ್ಚೆಗೆ ಬಂದಿರಲಿಲ್ಲ. ಇದೀಗ ಅದಕ್ಕೆ ಮತ್ತೆ 11 ಕಾನೂನುಗಳನ್ನು ಸೇರಿಸಿ 76ಕ್ಕೆ ಏರಿಸಲಾಗಿದೆ.

ಇವುಗಳು ಬ್ರಿಟಿಷ್‌ ಕಾಲದ ಕಾನೂನುಗಳಾಗಿವೆ ಎಂದು ಸಂಸದೀಯ ಖಾತೆ ರಾಜ್ಯ ಸಚಿವ ಅರ್ಜುನ್‌ರಾಮ್‌ ಮೆಘ್ವಾಲ್‌ ತಿಳಿಸಿದ್ದಾರೆ. ಇದೇ ವೇಳೆ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿಲ್ಲದ ಒಂದೇ ಒಂದು ಕಾನೂನನ್ನು ಯುಪಿಎ ಸರ್ಕಾರ ರದ್ದುಗೊಳಿಸಿರಲಿಲ್ಲ ಎಂದಿದ್ದಾರೆ.

ಬ್ರಿಟಿಷರ ಕಾಲದ ಭಾರತೀಯ ಪಾಸ್‌ಪೋರ್ಟ್‌ ಶೇರ್‌ ಮಾಡಿದ ವ್ಯಕ್ತಿ: ನೆಟ್ಟಿಗರಿಂದ ಅಚ್ಚರಿ

Republic Day: ಬ್ರಿಟಿಷರ ಕಾಲದ ಹಾಡಿಗೆ ಕೊಕ್‌, 2 ಹೊಸ ಹಾಡಿಗೆ ಮಣೆ!

ಬ್ರಿಟಿಷರ ಕಾಲದ ಐತಿಹಾಸಿಕ .303 ರೈಫಲ್‌ಗೆ ಗುಡ್ ಬೈ ಹೇಳಿದ ಪೊಲೀಸ್ ಇಲಾಖೆ!