Asianet Suvarna News Asianet Suvarna News

ರಾಮಜನ್ಮ ಭೂಮಿ ಆಯೋಧ್ಯೆಯಲ್ಲೇ ಬಿಜೆಪಿಗೆ ಹಿನ್ನಡೆ, ಇಂಡಿಯಾ ಮೈತ್ರಿಗೆ ಅಭೂತಪೂರ್ವ ಮುನ್ನಡೆ!

ಉತ್ತರ ಪ್ರದೇಶದಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಇಂಡಿಯಾ ಒಕ್ಕೂಟ ಭಾರಿ ಮುನ್ನಡೆ ಪಡೆದುಕೊಂಡಿದೆ. ಪ್ರಮುಖವಾಗಿ ಆಯೋಧ್ಯೆ ರಾಮಮಂದಿರ ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನತ್ತ ಮುಖಮಾಡಿದೆ.
 

Lok Sabha Election Result Big Shocker for bjp SP candidate leads Faizabad where Ram Mandir is located ckm
Author
First Published Jun 4, 2024, 3:15 PM IST

ಆಯೋಧ್ಯೆ(ಜೂನ್ 04) ಲೋಕಸಭಾ ಚುನಾವಣೆ ಫಲಿತಾಂಶ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಪ್ರಮುಖವಾಗಿ ಬಿಜೆಪಿ 370  ಹಾಗೂ ಎನ್‌ಡಿಎ 400 ಗುರಿ ಇಟ್ಟುಕೊಂಡು ಅಖಾಡಕ್ಕಿಳಿದಿತ್ತು. ಇದೀಗ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ. ಎನ್‌ಡಿಎ ಬಹುಮಹತ ಮುನ್ನಡೆ ಕಾಯ್ದುಕೊಂಡರೂ, ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ ನೀಡುತ್ತಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಮಹತ್ತರ ಬದಲಾವಣೆಯಾದರೂ ಅಚ್ಚರಿಯಿಲ್ಲ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಅದರಲ್ಲೂ ಶ್ರೀರಾಮ ಮಂದಿರ ಒಳಗೊಂಡ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿನತ್ತ ಮುಖಮಾಡಿದೆ. ಈ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿ ಅಭ್ಯರ್ಥಿ ಸಮಾಜವಾದಿ ಪಾರ್ಟಿಯ ಅವದೇಶ್ ಪ್ರಸಾದ್ ಭಾರಿ ಮುನ್ನಡೆ ಕಾಯ್ದುಕೊಂಡು ಗೆಲುವಿನ ಸನಿಹದಲ್ಲಿದ್ದಾರೆ.

ಫೈಜಾಬಾದ್ ಕ್ಷೇತ್ರದಲ್ಲಿ ಅವದೇಶ್ ಪ್ರಸಾದ್ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ ಅವದೇಶ್ ಪ್ರಸಾದ್ 320488 ಮತಗಳನ್ನು ಪಡೆದಿದ್ದಾರೆ. ಇನ್ನು ಕೆಲ ಸುತ್ತಿನ ಮತ ಎಣಿಕೆ ಬಾಕಿ ಇದೆ. ಇತ್ತ ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್ 305528 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಬಹುಜನ ಸಮಾಜವಾದಿ ಪಾರ್ಟಿಯ ಸಚ್ಚಿದಾನಂದ ಪಾಂಡೆ 22731 ಮತಗಳನ್ನು ಪಡೆದಿದ್ದಾರೆ.

Live Blog: ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ 

ಬಿಜೆಪಿಯ ಲಲ್ಲೂ ಸಿಂಗ್ ಫೈಜಾಬಾದ್‌ನ ಹಾಲಿ ಸಂಸದರಾಗಿದ್ದರೆ. ಆದರೆ ಶ್ರೀರಾಮ ಮಂದಿರ, ಆಯೋಧ್ಯೆ ಹೋರಾಟ, ಹಿಂದುತ್ವ ಯಾವುದೂ ಬಿಜೆಪಿ ಪರ ಕೆಲಸ ಮಾಡಿಲ್ಲ. ಆದರೆ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಎತ್ತಿದ ಪ್ರಮುಖ ಪ್ರಶ್ನೆಗಳು ಹಾಗೂ ಹೋರಾಟಕ್ಕೆ ಫಲ ಸಿಕ್ಕಿದೆ. ಉತ್ತರ ಪ್ರದೇಶದ ಯುವ ಸಮೂಹಕ್ಕೆ ಉದ್ಯೋಗ, ಅಗ್ನಿವೀರ್ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಹೋರಾಟ ಮಾಡಿತ್ತು. ಇದು ವರ್ಕೌಟ್ ಆಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಮೊದಲ ಹಂತದ ಮತದಾನದ ಬಳಿಕ ತನ್ನ ಮೂಲ ಹಿಂದುತ್ವದ ಮತಗಳನ್ನು ಕ್ರೋಢಿಕರಿಸಲು ಮುಂದಾಗಿತ್ತು. ಆದರೆ ಬಿಜೆಪಿ ನಾಯಕರ ಮಾತುಗಳು ಭಾಷಣಕ್ಕೆ ಮಾತ್ರ ಸೀಮಿತಗೊಂಡಿತ್ತು. ಇತ್ತ ಹಿಂದುತ್ವದ ಮತಗಳು ಕ್ರೋಢಿಕರಣಗೊಳ್ಳಲಿಲ್ಲ.

Live Blog: ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು 
 

Latest Videos
Follow Us:
Download App:
  • android
  • ios