05:28 PM (IST) Jun 04

ಲೋಕಸಭೆ ಫಲಿತಾಂಶ: ಮಲ್ಲಿಕಾರ್ಜುನ ಖರ್ಗೆಗೆ ಲಕ್, ಡಿ.ಕೆ. ಬ್ರದರ್ಸ್‌ಗೆ ಪವರ್ ಬ್ರೇಕ್; ಸಿದ್ದು ಗದ್ದುಗೆ ಡೋಂಟ್ ಶೇಕ್

ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕಲ್ಲಿ 5 ಕ್ಷೇತ್ರ ಗೆಲ್ಲಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೈಸೂರು ಸೋತರೂ ಚಾಮರಾಜನಗರ ಗೆಲ್ಲಿಸಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಬೆಂಗಳೂರಿನ ಜುಟ್ಟು ಹಿಡಿದುಕೊಂಡರೂ ತಮ್ಮನನ್ನು ಮೇಲೆತ್ತಿಕೊಳ್ಳದೇ ಸೋಲಪ್ಪಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

05:06 PM (IST) Jun 04

ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಗೋಲ್ಲ: ಕಾರಜೋಳ

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ನೂತನ ಸಂಸದ ಗೋವಿಂದ ಕಾರಜೋಳ ಅವರು, ಮಂತ್ರಿ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದ ನೂತನ ಸಂಸದ ಗೋವಿಂದ ಕಾರಜೋಳ.

ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಗೋಲ್ಲ: ಗೋವಿಂದ ಕಾರಜೋಳ

05:00 PM (IST) Jun 04

ಅಹಂಕಾರ ಪಂಕ್ಚರ್ ಮಾಡಿದ್ದಕ್ಕೆ ಧನ್ಯವಾದಗಳು; ಪ್ರಕಾಶ್ ರೈ ಮೊದಲ ಪ್ರತಿಕ್ರಿಯೆ

ಸದಾ ಮೋದಿಯನ್ನು ವಿರೋಧಿಸಿ ಟ್ವೀಟ್ ಮಾಡುವ ನಟ ಪ್ರಕಾಶ್ ರೈ ಇದೀಗ ಬಿಜೆಪಿ ಸರಕಾರ ರಚಿಸಲು ಬಹುಮತ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಇದೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

04:38 PM (IST) Jun 04

ಬೆಂ.ಗ್ರಾಮಾಂತರದ ಪೊಲಿಟಿಕ್ಸ್ ಫೈಟ್ ಚನ್ನಪಟ್ಟಣಕ್ಕೆ ಶಿಫ್ಟ್, ಡಿಕೆ ಸುರೇಶ್ ಬಗ್ಗೆ ಹೊಸ ಅಪ್ಡೇಟ್‌!

ಪ್ರತಿಷ್ಠೆಯ ಕಣ ಎನಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಹೀನಾಯ ಸೋಲು ಕಂಡಿದ್ದಾರೆ. ಆದ್ರೆ ಈಗ ಡಿಕೆ ಶಿವಕುಮಾರ್‌ ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿದ್ದಾರೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

02:13 PM (IST) Jun 04

ಡಿಸಿಎಂ ಡಿಕೆಶಿ ತಮ್ಮನಿಗೆ ಸೋಲು, ಸಿಎಂ ತವರಲ್ಲೂ ಕೈಗೆ ಸಿಗದ ಜಯ

ಕರ್ನಾಟಕ ಗೆಲುವಿನ ಲೆಕ್ಕಾಚಾರ ಹೀಗಿದೆ, 1 ರಿಂದ 10ಕ್ಕೆ ಏರಿದ ಕಾಂಗ್ರೆಸ್ ಸಾಧನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲಿ ಕಾಂಗ್ರೆಸ್ ಸೋಲು. ಆಪ್ತನನ್ನು ಗೆಲ್ಲಿಸಲು ವಿಫಲವಾದ ಸಿಎಂ ಸಿದ್ದರಾಮಯ್ಯ. ಸಿಎಂ ನಾಯಕತ್ವದ ಬಗ್ಗೆ ಮೂಡಿದ ಸಹಜ ಪ್ರಶ್ನೆ. 

ಸಹೋದರನ ಸೋಲಿನಿಂದ ಕಂಗೆಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆಶಿ. ತವರು ಕ್ಷೇತ್ರದಲ್ಲಿ ಮುಖಭಂಗ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖರ್ಗೆ ಕಮಾಲ್. ಆಪ್ತರ ಪಡೆ ಗೆಲ್ಲಿಸಿಕೊಂಡ ಎಐಸಿಸಿ ಅಧ್ಯಕ್ಷ..
ಕಾಂಗ್ರೆಸ್ ನಾಯಕನಿಗೆ ಒಲಿದ ಅದೃಷ್ಟ. 


ಮಗಳನ್ನು ಗೆಲ್ಲಿಸಿಕೊಂಡ ಸತೀಶ್ ಜಾರಕಿಹೊಳಿ.. ಡಿಸಿಎಂ ಹುದ್ದೆಗೆ ಕಣ್ಣಿಟ್ಟ ಬೆಳಗಾವಿ ಸಾಹುಕಾರ. ಅಧ್ಯಕ್ಷರಾದ ಬಳಿಕ ಎದುರಿಸಿದ ಮೊದಲ ಚುನಾವಣೆಯಲ್ಲಿ ವಿಜಯೇಂದ್ರಗೆ ಮಿಶ್ರ ಫಲ. ದೋಸ್ತಿ ಕೈಹಿಡಿದ ಕಾರಣಕ್ಕೆ ನಂಬರ್ ಉಳಿಸಿಕೊಂಡ ಬಿಜೆಪಿ ನಂಬರ್.

02:01 PM (IST) Jun 04

ಕಲಬುರಗಿಯಲ್ಲಿ ಖರ್ಗೆ ಅಳಿಯನಿಗೆ ಗೆಲವು, ಉಮೇಶ್ ಜಾದವ್‌ಗೆ ಸೋಲು

ತೀರ್ವ ಕುತೂಹಲ ಕೆರಳಿಸಿದ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿಯಲ್ಲಿ ಬಿಜೆಪಿಯ ಹಾಲಿ ಸಸಂದ ಉಮೇಶ್ ಜಾದವ್ ವಿರುದ್ಧ ಎಐಸಿಸಿ ಅಧ್ಯಕ್ಷ ಡಾ.ರಾಧಕೃಷ್ಣ ದೊಡ್ಡಮನಿ ಸ್ಪರ್ಧಿಸಿದ್ದು, ಗೆಲವು ಸಾಧಿಸಿದ್ದಾರೆ. 


01:48 PM (IST) Jun 04

ದಾವಣಗೆರೆಗೆ ಇದೇ ಮೊದಲ ಮಹಿಳಾ ಎಂಪಿ

ದಾವಣಗೆರೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಗೆದ್ದು ಬೀಗಿದೆ. ಆ ಮೂಲಕ ಜಿಲ್ಲಗೆ ಇದೇ ಮೊದಲ ಬಾರಿಗೆ ಮೊದಲ ಮಹಿಳಾ ಸಂಸದೆ ಸಿಕ್ಕಂತಾಗಿದೆ. 

01:15 PM (IST) Jun 04

ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆ: ಕುಮಾರಸ್ವಾಮಿ

ನಮ್ಮ ಕೆಲವು ತಪ್ಪುಗಳಿಂದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಸಿಕ್ಕಿವೆ. ಗ್ಯಾರಂಟಿ ಯೋಜನೆಯಿಂದ ಎಂದು ಹೇಳುವುದಿಲ್ಲ. ಮೋದಿಯೊಂದಿಗೆ ಚರ್ಚಿಸಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕರ್ನಾಟಕದ ಜನರು ನೀಡಿರುವ ಆಶೀರ್ವಾದವಿದು. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಸಲ್ಲಿಸಿದ ವೈದ್ಯಕೀಯ ಸೇವೆ ಸೇರಿ ಹಲವು ಕಾರಣಗಳಿಂದ ಬಿಜೆಪಿ ಗೆದ್ದಿದೆ, ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. 

01:12 PM (IST) Jun 04

ಜೈಲಿನಿಂದಲೇ ಸ್ಪರ್ಧಿಸಿರೋ ಖಲಿಸ್ತಾನಿ ಅಮೃತ್‌ಪಾಲ್‌ ಸಿಂಗ್ 40 ಸಾವಿರ ಮತಗಳ ಮುನ್ನಡೆ

ಖಾದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಆರಂಭಿಕ ಟ್ರೆಂಡ್‌ಗಳಲ್ಲಿ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ



01:00 PM (IST) Jun 04

ಓವೈಸಿ-ಮಾಧವಿ ಲತಾ ನಡುವೆ ಹಾವು-ಏಣಿ ಆಟ; ಯಾರಿಗೆ ಮುನ್ನಡೆ ?

 Assaduddin Owaisi vs madhavi lathaL ಅಸಾದುದ್ದೀನ್ ಓವೈಸಿ 57,810 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಓವೈಸಿ 2,28,577 ಮತ್ತು ಮಾಧವಿ ಲತಾ 1,70,787 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮೊಹಮ್ಮದ್ ವಲಿಲುಲ್ಹಾ ಸಮೀರ್ 24,515 ಮತಗಳನ್ನು ಪಡೆದುಕೊಂಡಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:59 PM (IST) Jun 04

ಪೆನ್ ಡ್ರೈವ್ ಹಗರಣದಲ್ಲಿ ಜೈಲು ಪಾಲಾದ ಪ್ರಜ್ವಲ್ ರೇವಣ್ಣ ಸೋಲು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ ಬರೋಬ್ಬರಿ 42 ಸಾವಿರ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ



ಇಲ್ಲಿ ಸುದ್ದಿಗಾಗಿ ಕ್ಲಿಕ್ಕಿಸಿ

12:52 PM (IST) Jun 04

ಗೆಲ್ಲುವ ಮುನ್ನವೇ ಸಂಸದ ಯದುವೀರ್ ಒಡೆಯರ್ ನಾಮಫಲಕಕ್ಕೆ ಪೂಜೆ ಸಲ್ಲಿಕೆ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲುವಿಗೆ ಮುನ್ನವೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸಂಸದರ ನಾಮಫಲಕ ಸಿದ್ಧಪಡಿಸಿ ಚಾಮುಂಡೇಶ್ವರಿ ದೇವಿ ಮುಂದಿಟ್ಟು ಪೂಜೆ ಸಲ್ಲಿಸಲಾಗಿದೆ. 



ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:32 PM (IST) Jun 04

ಎರಡು ದಶಕಗಳ ನಂತರ ಹಾಸನದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

ಹಾಸನ ಛ ಹಾಸನದಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ. ಅಧಿಕೃತ ಘೋಷಣೆ ಒಂದೇ ಬಾಕಿ. ಎರಡು ದಶಕಗಳ ಬಳಿಕ ಸಂಸತ್ ಸ್ಥಾನ ಗೆದ್ದ ಕಾಂಗ್ರೆಸ್. ಮೈತ್ರಿ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ ಕೈ ಪಡೆ. ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್. 

11:59 AM (IST) Jun 04

ಹಾಸನದಲ್ಲಿ ಪ್ರಜ್ವಲ್‌ಗೆ ಹಿನ್ನಡೆ, ಶೋಭಾಗೆ ಗೆಲವು

ಪೆನ್ ಡ್ರೈವ್ ಹಗರಣದಲ್ಲಿ ಸಿಕ್ಕಾಕಿಕೊಂಡ ಎಂಪಿ ಪ್ರಜ್ವಲ್ ರೇವಣ್ಣಗೆ ಹಾಸನದಲ್ಲಿ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲೋದು ಬಹುತೇಕ ಖಚಿತವಾಗಿದೆ. ತುಮಕೂರು, ಉಡುಪು ಚಿಕ್ಕಮಗಳೂ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲೋದು ಬಹುತೇಕ ಖಚಿತವಾಗಿದೆ. ಮಂಡ್ಯ ಹಾಗೂ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಲಕ್ಷಾಂತರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಅಧಿಕೃತವಾಗಿ ಗೆಲವು ಘೋಷಿಸುವುದಷ್ಟೇ ಬಾಕಿ ಇದೆ. ಬೀದರ್‌ನಲ್ಲಿ ಸಾಗರ್ ಖಂಡ್ರೆ ಗೆಲುವಿನತ್ತ ಮುಖ ಮಾಡಿದ್ದು, ರಾಜ್ಯದಿಂದ ಆಯ್ಕೆಯಾಗುವ ಅತ್ಯಂತ ಕಿರಿಯ ಎಂಪಿ ಆಗೋದರಲ್ಲಿ ಅನುಮಾನವೇ ಇಲ್ಲ. 

11:54 AM (IST) Jun 04

ಬೆಳಗಾವಿಯಲ್ಲಿ ಶೆಟ್ಟರ್ ಗೆಲವು ಬಹುತೇಕ ಖಚಿತ

ಬೆಳಗಾವಿ 

ಬೆಳಗಾವಿ
ಹನ್ನೊಂದನೇ ಸುತ್ತಿನ ಮತ ಎಣಿಕೆ ಮುಕ್ತಾಯ.
ಭಾರಿ ಅಂತರ ಕಾಯ್ದುಕೊಂಡ ಬಿಜೆಪಿ ಜಗದೀಶ್ ಶೆಟ್ಟರ್.
95241ಮತಗಳ ಮುನ್ನಡೆ.

ಬಿಜೆಪಿ ಜಗದೀಶ್ ಶೆಟ್ಟರ್ 456588

ಕಾಂಗ್ರೆಸ್ ಮೃಣಾಲ್‌ 361347

843137 ಮತಗಳ ಎಣಿಕೆ ಮುಕ್ತಾಯ.

11:45 AM (IST) Jun 04

ಮುನ್ನಡೆ ಕಾಯ್ದುಕೊಂಡ ಡಾ.ಮಂಜುನಾಥ್, ಕಳೆಗಟ್ಟಿದ ಸಂಭ್ರಮ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆ ಭಾರೀ‌ ಮುನ್ನಡೆ ಹಿನ್ನಲೆಯಲ್ಲಿ ಡಾ.ಮಂಜುನಾಥ್ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ. ಡಾ.ಮಂಜುನಾಥ್‌ಗೆ ತಿರುಪತಿ ಪ್ರಸಾದ್ ತಿನಿಸಿದ ಕುಟುಂಬಸ್ಥರು. ಪದ್ಮನಾಭ ನಗರದಲ್ಲಿರೋ ಡಾ.ಮಂಜುನಾಥ್ ನಿವಾಸಕ್ಕೆ ಶುಭ ಕೋರಲು ಬರುತ್ತಿರೋ ಬೆಂಬಲಿಗರು, ಅಭಿಮಾನಿಗಳು. ಮೊದಲಿನಿಂದಲೂ ಹಿನ್ನಡೆ ಕಾಯ್ದಕೊಂಡು ಹಾಲಿ ಎಂಪಿ ಡಿ.ಕೆ.ಸುರೇಶ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 

11:42 AM (IST) Jun 04

ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲುವು ಬಹುತೇಕ ಖಚಿತ

ಬೀದರ್: ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಗೆಲುವು ಬಹುತೇಕ ಖಚಿತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಮನೆ ಮಾಡಿದ ಸಂಭ್ರಮ. ನಗರದ ಸಂಬಂಧಿಕರ ಮನೆಯಲ್ಲಿ ಕುಳಿತು ಫಲಿತಾಂಶ ವೀಕ್ಷಿತ್ತಿರುವ ಸಾಗರ್ ಖಂಡ್ರೆ. ಸಾಗರ್ ಖಂಡ್ರೆಗೆ ಕಾರ್ಯಕರ್ತರು, ಅಭಿಮಾನಿಗಳಿಂದ ಶುಭಾಶಯ. ಭರ್ಜರಿ ವಿಜಯೋತ್ಸವ ತಯಾರಿ ಮಾಡಿಕೊಳ್ಳುತ್ತಿರುವ ಸಾಗರ್ ಖಂಡ್ರೆ ಅಭಿಮಾನಿಗಳು.ಮೊದಲ ಕೆಲವು ಸುತ್ತುಗಳನ್ನು ಹೊರತು ಪಡಿಸಿ, ನಿರಂತರ ಮುನ್ನಡೆ ಕಾಯ್ದಕೊಂಡು ಸಾಗರ್. 

11:40 AM (IST) Jun 04

ತುಮಕೂರಿನಲ್ಲಿ ಸೋಮಣ್ಣಂಗೆ ಗೆಲವು, ಚಾಮರಾಜನಗರ, ಮಂಡ್ಯ, ಶಿವಮೊಗ್ಗದಲ್ಲಿ, ತೇಜಸ್ವಿ ಸೂರ್ಯಂಗೆ ಲಕ್ಷ ಮತಗಳ ಮುನ್ನಡೆ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 1 ಲಕ್ಷಕ್ಕೂ ಅಧಿಕ ಮತಗಳ ಭಾರೀ ಮುನ್ನಡೆ. ಸುನೀಲ್ ‌ಬೋಸ್ ‌ಗೆ 4,62,127 . ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 3,59,490. 1,02,637 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ.

ಕಾರವಾರ, ಉತ್ತರಕನ್ನಡ: ಉತ್ತರಕನ್ನಡದಲ್ಲಿ 1,78,462 ಮತಗಳಿಂದ ಬಿಜೆಪಿ ಮುನ್ನಡೆ. 8ನೇ ಸುತ್ತಿನ ಮತ ಎಣಿಕೆ ಪ್ರಗತಿ. ವಿಶ್ವೇಶ್ವರ ಹೆಗಡೆ ಕಾಗೇರಿ 3,98,078. ಡಾ.ಅಂಜಲಿ ನಿಂಬಾಳ್ಕರ್ 2,19616. 5232 ಮತಗಳು ನೋಟಾ.

ಮಂಡ್ಯ: ಕುಮಾರಸ್ವಾಮಿ 1,82,637 ಮತಗಳ ಮುನ್ನಡೆ. ಕುಮಾರಸ್ವಾಮಿ- 4,82,887 ಮತಗಳು. ಸ್ಟಾರ್ ಚಂದ್ರು- 300250 ಮತಗಳು.

11:36 AM (IST) Jun 04

ಗೆಲುವಿನತ್ತ ಯದುವೀರ್. 80 ಸಾವಿರ ಲೀಡ್

ಗೆಲುವಿನತ್ತ ಯದುವೀರ್. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನೂತನ ಸಂಸದರ ನಾಮಫಲಕ.
80 ಸಾವಿರ ಲೀಡ್ ಬರುತ್ತಿದ್ದಂತೆ ನಾಮಫಲಕ ಮಾಡಿಸಿರುವ ಯದುವೀರ್ ಅಭಿಮಾನಿಗಳು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಯದುವೀರ್ ನಾಮಫಲಕ.
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಾಮಫಲಕಕ್ಕೆ ಕುಂಕುಮ ಇಟ್ಟು ಪೂಜೆ ಮಾಡಿಸಿರುವ ಅಭಿಮಾನಿಗಳು.

11:35 AM (IST) Jun 04

ಶಿವಮೊಗ್ಗ: ರಾಘವೇಂದ್ರಗೆ ಮುನ್ನಡೆ, ಎಂಪಿ ಮನೆ ಮುಂದೆ ಜನ ಸಾಗರ

ಶಿವಮೊಗ್ಗದ ಬಿವೈಆರ್ ನಿವಾಸದ ಮುಂದೆ ಜನಸಾಗರ.
ಶಿವಮೊಗ್ಗದ ವಿನೋಬನಗರದಲ್ಲಿರುವ ಸಂಸದ ಬಿ ವೈ ರಾಘವೇಂದ್ರ.
ರಾಘವೇಂದ್ರ1 ಲಕ್ಷ ಮತಗಳ ಮುನ್ನಡೆ ಪಡೆಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ.
ಕೊಬ್ಬರಿ ಹಾರ ಹಾಕಿ ಹೆಗಲ ಮೇಲೆತ್ತಿ ಜೈಕಾರ ಹಾಕಿದ ಕಾರ್ಯಕರ್ತರು.