Asianet Suvarna News Asianet Suvarna News

ಮೈತ್ರಿ ನೆರವು ನಿರೀಕ್ಷಿಸುತ್ತಾ ಲೋಕಸಭೆಗೆ 3 ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್, ಗೊಂದಲ ಡಬಲ್!

ಪಂಜಾಬ್‌ನಲ್ಲಿ ಇಂಡಿಯಾ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಆಪ್ ಇದೀಗ ಇದೇ ಮೈತ್ರಿ ಬೆಂಬಲ ನಿರೀಕ್ಷಿಸುತ್ತಾ ಅಸ್ಸಾಂನಲ್ಲಿ ಮೂವರು ಲೋಕಸಭಾ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಅರವಿಂದ್ ಕೇಜ್ರಿವಾಲ್ ನಡೆಗೆ ಕಾಂಗ್ರೆಸ್ ಗೊಂದಲಕ್ಕೀಡಾಗಿದೆ.
 

AAP announces 3 candidate name for assam lok sabha constituency hope India Alliance support ckm
Author
First Published Feb 8, 2024, 5:29 PM IST

ನವದೆಹಲಿ(ಫೆ.08) ಇಂಡಿಯಾ ಮೈತ್ರಿಯ ಸೀಟು ಹಂಚಿಕೆ ಗೊಂದಲ ಬಗೆಹರಿದಿಲ್ಲ. ಇತ್ತ ಆಪ್, ತೃಣಮೂಲ ಕಾಂಗ್ರೆಸ್ ಏಕಾಂಗಿ ಹೋರಾಟದ ಘೋಷಣೆ ಮಾಡಿದೆ. ಬಾಕಿ ಉಳಿದಿರುವ ಪಾರ್ಟಿಗಳ ಜೊತೆ ಕಾಂಗ್ರೆಸ್ ಮಾತುಕತೆ ನಡೆಸುತ್ತಿದೆ. ಇದರ ನಡುವೆ ಅಸ್ಸಾಂನಲ್ಲಿ ಆಮ್ ಆದ್ಮಿ ಪಾರ್ಟಿ ಲೋಕಸಭಾ ಚುನಾವಣೆಯ ಮೂವರು ಅಭ್ಯರ್ಥಿಗಳ ಹೆಸರುು ಘೋಷಿಸಿದೆ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿ ಕೂಟದ ಜೊತೆ ಯಾವುದೇ ಚರ್ಚೆ ನಡೆಸಿದ ಮೂವರು ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಆಮ್ ಆದ್ಮಿ ಪಾರ್ಟಿ ನಡೆಯಿಂದ ಕಾಂಗ್ರೆಸ್ ಹೈರಾಣಿಗಿದೆ. ಇತ್ತ ಇಂಡಿಯಾ ಮೈತ್ರಿ ಕಗ್ಗಂಟಾಗಿದೆ.

ಅಸ್ಸಾಂನ ದಿರುಬಾಗ್ ಲೋಕಸಭಾ ಕ್ಷೇತ್ರದಿಂದ  ಮನೋಜ್ ಧನೋಹರ್, ಗುವ್ಹಾಟಿ ಕ್ಷೇತ್ರದಿಂದ ಭಾವೆನ್ ಚೌಧರಿ ಹಾಗೂ ಸೋನಿತಪುರ ಕ್ಷೇತ್ರರಿಂದ ರಿಶಿ ರಾಜ್‌ಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಿಸಿದೆ. ಆಮ್ ಆದ್ಮಿ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅಸ್ಸಾ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಹೆಸರು ಘೋಷಿಸಿದ್ದಾರೆ. ಇದೇ ವೇಳೆ ಅಸ್ಸಾಂನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟ ಆಪ್ ಅಭ್ಯರ್ಥಿಗಳನ್ನು ಬೆಂಬಲಿಸುವ ನಿರೀಕ್ಷೆ ಇದೆ ಎಂದಿದ್ದಾರೆ.

ಆಪ್‌ ಶಾಸಕರ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌: ಸಿಎಂ ಕೇಜ್ರಿವಾಲ್ ಆರೋಪ

ಆಪ್ ಮೂವರು ಅಭ್ಯರ್ಥಿಗಳ ಘೋಷಣೆಗೂ ಮೊದಲು ಇಂಡಿಯಾ ಮೈತ್ರಿ ಕೂಟವನ್ನು ಸಂಪರ್ಕಿಸಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಆಪ್ ಏಕಾಂಗಿ ನಿರ್ಧಾರ ಇದೀಗ ಇಂಡಿಯಾ ಮೈತ್ರಿಗೆ ತೀವ್ರ ಹಿನ್ನಡೆ ತಂದಿದೆ. ಈಗಾಗಲೇ ಪಂಜಾಬ್‌ನಲ್ಲಿ ಏಕಾಂಗಿ ಸ್ಪರ್ಧಿ ಘೋಷಿಸಿರುವ ಆಮ್ ಆದ್ಮಿ ಪಾರ್ಟಿ ಇದೀಗ ಅಸ್ಸಾಂನಲ್ಲಿ ಏಕಾಂಗಿ ನಿರ್ಧಾರ ಘೋಷಿಸಿದೆ. 

ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಮಾತುಕತೆಯಲ್ಲಿದೆ. ಚುನಾವಣೆಯಲ್ಲಿ ಗೆಲುವು ಮುಖ್ಯ. ಪ್ರಚಾರಕ್ಕಾಗಿ ಅಭ್ಯರ್ಥಿಗಳಿಗೆ ಸಮಯ ಬೇಕಿದೆ. ಹೀಗಾಗಿ ಆಪ್ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಇಂಡಿಯಾ ಮೈತ್ರಿ ಒಕ್ಕೂಟದ ಪಕ್ಷಗಳು, ಕಾರ್ಯಕರ್ತರು ಆಫ್ ಅಭ್ಯರ್ಥಿಗಳೆಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಪಾಠಕ್ ಹೇಳಿದ್ದಾರೆ.

ಇಂಡಿಯಾ ಮೈತ್ರಿ ಚೂರು ಚೂರು, ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಏಕಾಂಗಿ ಹೋರಾಟ ಘೋಷಿಸಿದ ಆಪ್!

ಇಂಡಿಯಾ ಮೈತ್ರಿ ಒಕ್ಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಪ್ರಾಬಲ್ಯದ ರಾಜ್ಯಗಳಲ್ಲಿ ಏಕಾಂಗಿ ಸ್ಪರ್ಧೆಗೆ ಮನಸ್ಸು ಮಾಡುತ್ತಿದೆ. ಹೀಗಾಗಿ ಸೀಟು ಹಂಚಿಕೆ ವಿಳಂಬವಾಗುತ್ತಿದೆ. ಇತ್ತ ಕಾಂಗ್ರೆಸ್ ಅತೀ ಹೆಚ್ಚಿನ ಸೀಟು ಕೇಳುತ್ತಿದೆ ಅನ್ನೋ ಆರೋಪಗಳು ಬಲವಾಗುತ್ತಿದೆ. ಹೀಗಾಗಿ ಲೋಕಸಭೆ ಕೆಲ ತಿಂಗಳು ಬಾಕಿ ಇರುವಾಗಲೇ ತಿಕ್ಕಾಟ ಜೋರಾಗುತ್ತಿದೆ.

Follow Us:
Download App:
  • android
  • ios