Asianet Suvarna News Asianet Suvarna News

ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 24 ಸ್ಥಾನ, ಇಂಡಿಯಾ ಒಕ್ಕೂಟ 4; MOTN ಚುನಾವಣಾ ಸಮೀಕ್ಷೆ ಬಹಿರಂಗ!

ಲೋಕಸಭಾ ಚುನಾವಣೆಗೆ ತಿಂಗಳು ಮಾತ್ರ ಬಾಕಿ. ಇದೀಗ ಮೂಡ್ ಆಫ್ ದಿ ನೇಶನ್ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿ 24 ಸ್ಥಾನ ಗೆಲ್ಲಲಿದೆ ಎಂದಿದ್ದರೆ, ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿ 4 ಸ್ಥಾನ ಗೆಲ್ಲಲಿದೆ ಎಂದಿದೆ. ಈ ಸಮೀಕ್ಷೆ ವಿವರ ಇಲ್ಲಿದೆ.
 

Lok sabha Election Survey Mod of nation says NDA to win 24 of 28 seats in Karnataka ckm
Author
First Published Feb 8, 2024, 6:08 PM IST

ನವದೆಹಲಿ(ಫೆ.08) ಲೋಕಸಭಾ ಚುನಾವಣೆಗೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ವಾಕ್ಸಮರ ಜೋರಾಗಿದೆ. ಇದರ ನಡುವೆ ದೇಶದ ಜನ ಯಾರಿಗೆ ಅಧಿಕಾರ ನೀಡಲು ಬಯಸಿದ್ದಾರೆ? ಈ ಕುರಿತು ಇಂಡಿಯಾ ಟುಡೆ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆ ಬಹಿರಂಗವಾಗಿದೆ. ಈ ಪೈಕಿ ಕರ್ನಾಟಕದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೆಲ ಸ್ಥಾನಗಳು ನಷ್ಟವಾಗುತ್ತಿದೆ. ಇತ್ತ ಇಂಡಿಯಾ ಮೈತ್ರಿ ಒಕ್ಕೂಟ ಕರ್ನಾಟಕದಲ್ಲಿ ಹೊಸ ಭರವಸೆ ಮೂಡಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಇಂಡಿಯಾ ಟುಡೆ ಮೂಡ್ ಆಫ್ ನೇಶನ್ ಸಮೀಕ್ಷೆ ಪ್ರಕಾರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಗೆ 24 ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಏಕಾಂಗಿಯಾಗಿ 27 ಸ್ಥಾನ ಗೆದ್ದುಕೊಂಡಿದೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಅದರೂ 3 ಸ್ಥಾನ ಕಡಿಮೆ ಬರಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿತ್ತು. ಈ ವೇಳೆ ಕೇವಲ 1 ಸ್ಥಾನ ಗೆದ್ದುಕೊಂಡಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ಕಾಂಗ್ರೆಸ್ 4 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಮೈತ್ರಿ ನೆರವು ನಿರೀಕ್ಷಿಸುತ್ತಾ ಲೋಕಸಭೆಗೆ 3 ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್, ಗೊಂದಲ ಡಬಲ್!

2019 ಹಾಗೂ 2024ರಲ್ಲಿ ಬಿಜೆಪಿಯ ವೋಟ್ ಶೇರಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇಕಡಾ 53 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದು ಮೂಡ್ ಆಫ್ ನೇಶನ್ ಹೇಳಿದೆ. ಇನ್ನು 2019ರಲ್ಲಿ ಕಾಂಗ್ರೆಸ್ ವೋಟ್ ಶೇರ್ ಹಾಗೂ ಇದೀಗ 2024ರಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ವೋಟ್ ಶೇರ್‌ನಲ್ಲೂ ಬದಲಾವಣೆ ಇಲ್ಲ. ಶೇಕಡಾ 42 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದಿದೆ.

2019ರ ಚುನಾವಣೆಯಲ್ಲಿ ಎನ್‌ಡಿಎ 27 ಸ್ಥಾನ ಗೆದ್ದುಕೊಂಡಿತ್ತು. ಇದರಲ್ಲಿ ಬಿಜೆಪಿ ಏಕಾಂಗಿ 25 ಸ್ಥಾನ ಗೆದ್ದುಕೊಂಡಿತ್ತು. ಈ ಬಾರಿ ಮೈತ್ರಿ ಪಕ್ಷವಾಗಿ ಎನ್‌ಡಿಎ 24 ಸ್ಥಾನ ಗೆಲ್ಲಲಿದೆ ಎಂದಿದೆ. 2019ರಲ್ಲಿ ಕಾಂಗ್ರೆಸ್ 1 ಸ್ಥಾನ ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಮಾಜಿ ಸಚಿವ, ಲೋಕಸಭಾ ಚುನಾವಣೆಗೂ ಮೊದಲೇ ತಳಮಳ!

Follow Us:
Download App:
  • android
  • ios