ಒವೈಸಿ ವಿರುದ್ಧ ಕಣಕ್ಕಿಳಿದ ಬಿಜೆಪಿ ಮಾಧವಿ ಲತಾಗೆ ಕೇಂದ್ರದಿಂದ ವೈ ಪ್ಲಸ್ ಭದ್ರತೆ!

ಮುಸ್ಲಿಂ ಪ್ರಾಬಲ್ಯದ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಫೈರ್ ಬ್ರ್ಯಾಂಡ್ ಮಾಧವಿ ಲತಾಗೆ ಟಿಕೆಟ್ ನೀಡಿದೆ. ಬಹಿರಂಗವಾಗಿಯೇ ಎದುರಾಳಿ ಅಸಾದುದ್ದೀನ್ ಒವೈಸಿಗೆ ಸವಾಲು ಹಾಕಿರುವ ಮಾಧವಿ ಲತಾಗೆ ಇದೀಗ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿದೆ.
 

Lok sabha Election 2024 Centre provides Y plus security to Hyderabad BJP Candidate Madhavi latha ckm

ನವದೆಹಲಿ(ಏ.08) ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಇದೀಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಹೈದರಾಬಾದ್, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಮಾಧವಿ ಲತಾ, ಇತ್ತೀಚೆಗೆ ಖಾಸಗಿ ಮಾಧ್ಯಮದ ಸಂದರ್ಶನದ ಬಳಿಕ ದೇಶಾದ್ಯಂತ ಜನಪ್ರಯತೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿಯ ಶಹಬ್ಬಾಶ್ ಗಿರಿ ಮಾಧವಿ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ನೇರವಾಗಿ ಎದುರಾಳಿ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿಗೆ ಸವಾಲು ಎಸೆದಿರುವ ಮಾಧವಿ ಲತಾಗೆ ಬೆದರಿಕೆಗಳೂ ಹೆಚ್ಚಾಗುತ್ತಿದೆ. ಮುಸ್ಲಿಂ ಪ್ರಾಬಲ್ಯದ ಹೈದರಾಬಾದ್ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಾಧವಿ ಲತಾಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿದೆ.

ಮಾಧವಿ ಲತಾಗೆ ಸಿಆರ್‌ಪಿಎಫ್ ಪಡೆಯ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಈ ಭದ್ರತೆ ತೆಲಂಗಾಣಕ್ಕೆ ಮಾತ್ರ ಸೀಮಿತವಾಗಿದೆ. ತೆಲಂಗಾಣದಲ್ಲಿ ಮಾಧವಿ ಲತಾ ಯಾವುದೇ ಕ್ಷೇತ್ರ, ಎಲ್ಲೇ ಹೋದರು ವೈ ಪ್ಲಸ್ ಭದ್ರತೆ ಇರಲಿದೆ. ಮುನ್ನಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ಒದಗಿಸಿದೆ.

ಒವೈಸಿ ವಿರುದ್ಧ ಕಣಕ್ಕಿಳಿದಿರುವ ಮಾಧವಿ ಲತಾ ಹಾಡಿ ಹೊಗಳಿದ ಮೋದಿ: ಅಪ್ ಕಾ ಅದಾಲತ್ ವೀಕ್ಷಿಸುವಂತೆ ಮೋದಿ ಮನವಿ

18ನೇ ಲೋಕಸಭಾ ಚುನಾವಣೆಯಲ್ಲಿ ಕೆಲ ರಾಜ್ಯಗಳನ್ನು ಬಿಜೆಪಿ ಟಾರ್ಗೆಟ್ ಮಾಡಿ ಗೆಲ್ಲಲೇಬೇಕೆಂಬ ಪಣತೊಟ್ಟಿದೆ. ಇದಕ್ಕಾಗಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಈ ಪೈಕಿ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಮಾಧವಿ ಲತಾಗೆ ಟಿಕೆಟ್ ನೀಡಿದೆ. ಸಾಮಾಜಿಕ ಕಾರ್ಯಕರ್ತೆಯಾಗಿ, ಗಾಯಕಿಯಾಗಿ, ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಾಧವಿ ಲತಾ ಬಿಜೆಪಿಯ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಾರೆ.

ಮುಸ್ಲಿಮ್ ಸಮುದಾಯದ ಹೆಣ್ಣುಮಕ್ಕಳಿಗೆ ನೆರವು ನೀಡುತ್ತಾ, ಸಮಾಜದಲ್ಲಿನ ಸೋಶಿತ ಹೆಣ್ಣುಮಕ್ಕಳ ಪರವಾಗಿ ನಿಂತಿರುವ ಮಾಧವಿ ಲತಾ ಈ ಬಾರಿ ಹೊಸ ಇತಿಹಾಸ ಬರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕಳೆದ 40 ವರ್ಷಗಳಿಂದ ಹೈದರಾಬಾದ್ ಲೋಕಸಭಾ ಕ್ಷೇತ್ರ ಒವೈಸಿ ಕುಟುಂಬದ ಕೈಯಲ್ಲಿದೆ. ಹಾಲಿ ಸಂಸದ ಅಸಾದುದ್ದೀನ್ ಒವೈಸಿ ವಿರುದ್ಧವೇ ಮಾಧವಿ ಲತಾ ಕಣಕ್ಕಿಳಿದಿದ್ದಾರೆ. 

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ ಬೆಂಕಿ ಚೆಂಡು, ಯಾರಿವರು ಮಾಧವಿ ಲತಾ ಕೊಂಪೆಲ್ಲಾ?

ಇತ್ತೀಚೆಗೆ ಖಾಸಗಿ ಮಾಧ್ಯಮದಲ್ಲಿ ಮಾಧವಿ ಲತಾ ಸಂದರ್ಶನ ಭಾರಿ ವೈರಲ್ ಆಗಿದೆ. ಪ್ರಖರ ಮಾತು, ಬಹಿರಂಗ ಸವಾಲು, ಜೊತೆಗೆ ಸಾಕ್ಷಿ ಸಮೇತ ನೀಡಿದ ಉತ್ತರಗಳಿಂದ ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಮೋದಿ, ಮಾಧವಿ ಲತಾ ಸಂದರ್ಶನ ವೀಕ್ಷಿಸುಂತೆ ಜನರಿಗೆ ಮನವಿ ಮಾಡಿದ್ದರು.
 

Latest Videos
Follow Us:
Download App:
  • android
  • ios