ಅಗ್ನಿಪಥ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಉತ್ತರ ಭಾರತದಲ್ಲಿ ರಾಜ್ಯಗಳಲ್ಲಿ ಹೋರಾಟ ಕಡಿಮೆಯಾಗುವಂತೆ ಭಾಸವಾಗುತ್ತಿಲ್ಲ. ಸೋಮವಾರವೂ ಪ್ರತಿಭಟನೆ ಮುಂದುವರೆದಿದ್ದು, 572 ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಜನ ಸಮಸ್ಯೆಗೊಳಗಾಗಿದ್ದಾರೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.
Bharat Bandh LIVE Updates: ದೇಶಾದ್ಯಂತ 529 ರೈಲುಗಳು ಸ್ಥಗಿತ

Protest against Agnipath defence recruitment scheme: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ವರ್ಷಗಳ Tour of Duty (ToD) ವಿರೋಧಿಸಿ ಕಳೆದ ವಾರ ಎಂಟು ರಾಜ್ಯಗಳಲ್ಲಿ ಉಗ್ರಸ್ವರೂಪಿ ಪ್ರತಿಭಟನೆ ಆರಂಭವಾಗಿತ್ತು. ಇದೀಗ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಪ್ರತಿಭಟನೆ ಕಾವು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ಆಂದ್ರ ಪ್ರದೇಶ ರಾಜ್ಯಗಳಲ್ಲಿ ಅಗ್ನಿಪಥ ವಿರೋಧಿಸಿ ಯುವಕರು ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಸಣ್ಣಮಟ್ಟದ ಪ್ರತಿಭಟನೆ ಕಂಡು ಬಂದಿದ್ದರೂ, ದೊಡ್ಡಮಟ್ಟದ ಪ್ರತಿಭಟನೆಗೆ ರಾಜ್ಯ ಸಾಕ್ಷಿಯಾಗಿಲ್ಲ. ಕಳೆದ ವಾರ ಉತ್ತರ ಭಾರತದಲ್ಲಿ ನಡೆದ ಪ್ರತಿಭಟನೆಲ್ಲಿ ಹತ್ತಕ್ಕೂ ಹೆಚ್ಚು ರೈಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರತಿಭಟನೆಯಲ್ಲಿ ಒಟ್ಟೂ ಇಬ್ಬರು ಮೃತಪಟ್ಟಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ರೈಲು ಸೇವೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಅಶ್ರುವಾಯು, ಟಿಯರ್ ಗ್ಯಾಸ್ ಪ್ರಯೋಗ ಕೂಡ ಮಾಡಲಾಗಿತ್ತು. ಜೂ.20ರಂದು ನಡೆಯಲಿರುವ ಅಗ್ನಿಪಥ ವಿರೋಧಿ ಪ್ರತಿಭಟನೆಯ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
ರೈಲು ಸೇವೆಯಲ್ಲಿ ವ್ಯತ್ಯಯ, ಮುಗಿಯದ ಜನರ ಪರದಾಟ, ಯುವಕರ ಹೋರಾಟ
ದೇಶಾದ್ಯಂತ ಅಗ್ನಿಪಥ ವಿರೋಧಿ ಹೋರಾಟ, 742 ರೈಲು ಸ್ಥಗಿತ
ಕೇಂದ್ರ ಸರ್ಕಾರದ ಅಗ್ನಿಪಥ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಹಲವು ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದೆ. ಹೀಗಾಗಿ ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರತ್ ಬಂದ್ ಪ್ರತಿಭಟನೆಗಳು ನಡೆಯುತ್ತಿದೆ. ಇದರಿಂದ ಸುಮಾರು 742ಕ್ಕೂ ಹೆಚ್ಚು ರೈಲು ಸಂಚಾರ ರದ್ದಾಗಿದೆ. ಇತ್ತ ಪ್ರಯಾಣಿಕರು ಪರದಾಡುವಂತಾಗಿದೆ.
Agnipath Protest ಭಾರತ್ ಬಂದ್‌ನಿಂದ 742 ರೈಲು ಸಂಚಾರ ರದ್ದು, ಟಿಕೆಟ್ ಹಣ ಹಿಂಪಡೆಯುವುದು ಹೇಗೆ?
ವಿಜಯಪುರ: ಅಗ್ನಿಪಥ ವಿರುದ್ದ ಯುವಕರ ಆಕ್ರೋಶ
ವಿಜಯಪುರ: ಅಗ್ನಿಪಥ ವಿಷಯದಲ್ಲಿ ಸ್ವಲ್ಪ ಆತುರವಾಗಿದೆ. ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹೇಳಿಕೆ. ಜಿಲ್ಲೆ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ಯುವಕರಿಗೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. 60 ಲಕ್ಷ ಉದ್ಯೋಗಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಎಂದು
ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಈ ರೀತಿಯ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದರೆ ಕಷ್ಟ. ಅಗ್ನಿಪಥ ಉದ್ಯೋಗ ಭದ್ರತೆ ನೀಡಲ್ಲ. 20 ರಿಂದ 25 ವರ್ಷವಾದರೂ ಸರ್ಕಾರಿ ಸೇವೆ ಮಾಡಲು ಅವಕಾಶ ನೀಡಿದರೆ ಅನುಕೂಲ. ಉದ್ಯೋಗ ಭದ್ರತೆಯ ವಿಚಾರದಿಂದ ಅಗ್ನಿಪಥ್‌ಗೆ ಯುವಕರು ವಿರೋಧಿಸುತ್ತಿದ್ದಾರೆ. ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣ ಮಾಡುತ್ತಿರುವ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಸರ್ಕಾರವಿರಲಿ ಸಾಲ ಪಡೆದು ಸರ್ಕಾರ ನಡೆಸುವುದು ಸಾಧನೆಯಲ್ಲ
ರಾಜ್ಯ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿದೆ. ಕೇಂದ್ರ ಸರ್ಕಾರ ಕೂಡ 50ರಿಂದ 60 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇದರಿಂದ ಮುಂದಿನ ಭವಿಷ್ಯ ಕಗ್ಗತ್ತಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಶಾಸಕ.
ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಧಾರವಾಡದಲ್ಲಿ ಕಟ್ಟೆಚ್ರ
ಧಾರವಾಡ : ಅಗ್ನಿಪಥ್ ಯೋಜನೆ ಮೂಲಕ ಸೈನ್ಯವನ್ನು ಕೇಸರಿಕರಣ ಮಾಡಬೇಡಿ. ಅಗ್ನಿಪಥ್ ಹೆಸರಿನಲ್ಲಿ ಯುವಕರ ದಾರಿ ತಪ್ಪಿಸುತ್ತಿರುವ ಬಿಜೆಪಿ. -ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆರೋಪ. ಪ್ರಧಾನಿ ನರೇಂದ್ರ ಮೋದಿ ಬಂದಿದ್ದು ರಾಜ್ಯಕ್ಕೆ ಏನು ಕೊಡುಗೆ? ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ನೀಡುತ್ತೇನೆಂದು ಘೋಷಿಸಲು ಆಗ್ರಹ.
ಅಗ್ನಿಪಥ್ ಯೋಜನೆಗೆ ವಿರೋಧ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೊಲೀಸರ ಕಟ್ಟೆಚ್ಚರ. ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳದಲ್ಲಿ ಪೊಲೀಸರ ಪಹರೆ.-ಎಲ್ಲೂ ಗಲಾಟೆ ಆಗದಂತೆ ಎಚ್ಚರ ವಹಿಸಿರುವ ಪೊಲೀಸರು
ಬೆಳಗಾವಿಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ
'ಅಗ್ನಿಪಥ್' ಯೋಜನೆ ವಿರೋಧಿಸಿ 'ಬೆಳಗಾವಿ ಚಲೋ' 'ಬೆಳಗಾವಿ ಬಂದ್' ಕರೆ ವಿಚಾರ
ಕುಂದಾನಗರಿ ಬೆಳಗಾವಿಗೆ ತಟ್ಟದ ಬಂದ್, ಪ್ರತಿಭಟನೆ ಬಿಸಿ
ಬೆಳಗಾವಿ ನಗರದಾದ್ಯಂತ ಎಂದಿನಂತೆ ಜನಜೀವನ
'ಬೆಳಗಾವಿ ಚಲೋ'ಗೆ ತಡೆಯೊಡ್ಡಿದ ಬೆಳಗಾವಿ ಪೊಲೀಸರು
ಬೇರೆ ಊರುಗಳಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಸೇನಾ ಆಕಾಂಕ್ಷಿಗಳಿಗೆ ತಡೆ
ಟೋಲ್‌ಗೇಟ್ ಬಳಿಯೇ ತಡೆ ಹಿಡಿದ ಬೆಳಗಾವಿ ಪೊಲೀಸರು
ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಪೊಲೀಸ್ ಸರ್ಪಗಾವಲು
ಪ್ರತಿಭಟನೆಗೆ ಅವಕಾಶ ನೀಡದ್ದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ
ಅಗ್ನಿಪಥ್ ವಿರೋಧಿಸಿ ಸೇನಾಕಾಂಕ್ಷಿಗಳ 'ಬೆಳಗಾವಿ ಚಲೋ'ಗೆ ತಡೆ ವಿಚಾರ
ಯುವಕರನ್ನು ಬೆಳಗಾವಿ ಬರದಂತೆ ತಡೆಹಿಡಿದಿದ್ದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ಎಲ್ಲರ ಅಧಿಕಾರ
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಡೆ ವಿಚಾರ
ಆ ಹೋರಾಟದ ರೂಪ ಬೆಂಕಿ ಹಚ್ಚಿ, ಕಲ್ಲು ತೂರಾಟ ಉದ್ವಿಗ್ನವಾಗಬಾರದು
ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲ ಬದ್ಧ
ಕಾಂಗ್ರೆಸ್ ನವರು ಅದನ್ನೇ ಬಯಸುತ್ತೇವೆ
ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ
ಅವರಿಗೆ ಗೊತ್ತಾಗಿರೋದ್ರಿಂದ ಪಥ ಸಂಚಲನ ಮಾಡಿ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ
ಪ್ರತಿಯೊಂದು ಟೋಲ್ ನಾಕಾನಲ್ಲಿ ಜನರನ್ನು ತಡೆಯುತ್ತಿದ್ದಾರೆ
ಆದರೆ ಈ ರೀತಿ ಎಷ್ಟು ದಿನ ಮಾಡ್ತಾರೆ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ
ಎಷ್ಟು ದಿನ ಹೋರಾಟ ತಡೆಯಕ್ಕಾಗುತ್ತೆ
ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ
ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರ
ಯುವಕರನ್ನು ಜನರನ್ನು ಎತ್ತಿ ಕಟ್ಟಿ ರೂಢಿ ಇದೇ ಬಿಜೆಪಿಯವರಿಗೆ
ಬೀಸೋ ಗಾಳಿಯನ್ನು ಯಾರೂ ತಡೆಯಕ್ಕಾಗಲ್ಲ, ಉರಿಯೋ ಸೂರ್ಯವನ್ನ ನಂದಿಸೋಕ್ಕಾಗಲ್ಲ
ನಾನು ಯೋಜನೆ ವಿರುದ್ಧ ಅಂತಾ ಹೇಳಲ್ಲ, ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ
ಎಂಟು ವರ್ಷದಲ್ಲಿ 16 ಕೋಟಿ ಕೆಲಸ ಕೊಡ್ತೀನಿ ಅಂತಾ ಪ್ರಧಾನಿ ವಾಗ್ದಾನ ಮಾಡಿದ್ರು
ಪಕೋಡ ಮಾರಿ ಅಂತಾ ಹೇಳಿದ್ರು
ಈಗ ಅಗ್ನಿಪಥ್‌ದಲ್ಲಿ ಅಗ್ನಿ ವೀರರು ಅಂತಿದ್ದಾರೆ
ಅಗ್ನಿವೀರ ಆಗಿ ನಾಲ್ಕು ವರ್ಷ ಆದಮೇಲೆ ಅವರ ಭವಿಷ್ಯ ಏನು?
75 ವರ್ಷದ ರಕ್ಷಣಾ ಸಚಿವರು,71 ವರ್ಷದ ಪ್ರಧಾನಿಗೆ ರಿಟೈರ್‌ಮೆಂಟ್ ಇಲ್ಲ
ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್‌ಸಿ ಆಗಿದ್ದಾರೆ
21 ಅಥವಾ 25 ವರ್ಷಕ್ಕೆ ರಿಟೈರ್‌ಮೆಂಟ್ ಯಾರಾದರೂ ಸಹಿಸಿಕೊಳ್ತಾ
ಯಾರಾದರೂ ಯುವಕರ ತಂದೆ ತಾಯಿ ಸಹಿಸಿಕೊಳ್ತಾರಾ?
ಅವರ ಜಾಬ್ ಸೆಕ್ಯೂರಿಟಿ ಇರಲಿ ಅನ್ನೋದು ನನ್ನ ಅಭಿಪ್ರಾಯ
ಯಾವುದೇ ಯೋಜನೆ ಇರಲಿ ಪರ ವಿರೋಧ ಇರುತ್ತೆ
ಅದನ್ನ ಸುಧಾರಿಸಿಕೊಂಡು ಮಾಡಲಿ ಅನ್ನೋದು ನನ್ನ ಅಭಿಪ್ರಾಯ
ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ
529 ರೈಲುಗಳ ಸೇವೆ ಸ್ಥಗಿತ
ಭಾರತ ಬಂದ್ ಕಾವಿಗೆ ಹೆದರಿ 529 ರೈಲುಗಳನ್ನು ರೈಲ್ವೇ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರತಿಭಟನಾಕಾರರು ರೈಲುಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಲವು ರಾಜ್ಯಗಳಲ್ಲಿ ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಭಯಕ್ಕೆ ರೈಲು ಸೇವೆ ಸ್ಥಗಿತ
ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಕಾವು ಏರುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಐದು ಗಂಟೆಗಳಿಂದ ರೈಲ್ವೇ ಸಂಚಾರ ತಡೆಹಿಡಿಯಲಾಗಿದೆ.
ಅಗ್ನಿಪಥ ಹಿಂಪಡೆಯಲ್ಲ: ಸೇನೆ
ಯುವಕ, ಯುವತಿಯರಿಗೆ ಸೇನೆಯಲ್ಲಿ 4 ವರ್ಷಗಳ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ‘ಅಗ್ನಿಪಥ’ ಯೋಜನೆ ಕುರಿತು ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹೊರತಾಗಿಯೂ, ‘ಯಾವುದೇ ಕಾರಣಕ್ಕೂ ಯೋಜನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಕೇಂದ್ರ ಸರ್ಕಾರ ಮತ್ತು ಸೇನೆ ಸ್ಪಷ್ಟಪಡಿಸಿವೆ. ಜೊತೆಗೆ ಸೇನಾಪಡೆ, ವಾಯುಪಡೆ ಮತ್ತು ನೌಕಪಡೆಗಳು, ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯ ಅಧಿಕೃತ ದಿನಾಂಕಗಳನ್ನು ಪ್ರಕಟಿಸಿದ್ದು, ಸೋಮವಾರವೇ ಸೇನೆಯ ಕರಡು ಅಧಿಸೂಚನೆ ಹೊರಬೀಳಲಿದೆ. ಈ ಮೂಲಕ, ಯೋಜನೆ ಜಾರಿಗೆ ಸರ್ಕಾರ ಕಟಿಬದ್ಧವಾಗಿದೆ ಎಂಬುದರ ಬಗ್ಗೆ ಸ್ಪಷ್ಟಸಂದೇಶ ರವಾನಿಸಿವೆ.
ಅಗ್ನಿಪಥ ಹಿಂಪಡೆಯಲ್ಲ, ಪೊಲೀಸ್ ಪರಿಶೀಲನೆಯಲ್ಲಿ ಪಾಸಾಗದಿದ್ದರೆ ಅಗ್ನಿವೀರರ ನೇಮಕ ಇಲ್ಲ: ಸೇನೆ
ಅಗ್ನಿವೀರರಿಗೆ ಬಿಜೆಪಿ ಸೆಕ್ಯುರಿಟಿ ಕೆಲಸ: ನಾಯಕನ ವಿವಾದಾತ್ಮಕ ಹೇಳಿಕೆ
ಅಗ್ನಿಪಥ ಯೋಜನೆಯಲ್ಲಿ ಆಯ್ಕೆಯಾಗಿ 4 ವರ್ಷ ಅವಧಿ ಪೂರೈಸಿ ಸೇವೆಯಿಂದ ನಿರ್ಗಮಿಸುವ ಅಗ್ನಿವೀರರಿಗೆ ಬಿಜೆಪಿ ಕಚೇರಿಯ ಸೆಕ್ಯೂರಿಟಿ ಗಾರ್ಡ್ ಆಗಲು ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿ ಸೆಕ್ಯೂರಿಟಿ ಗಾರ್ಡ್ ನೇಮಕದಲ್ಲಿ ಅಗ್ನಿವೀರರಿಗೆ ಆದ್ಯತೆ: ಬಿಜೆಪಿ ಮುಖಂಡನ ಹೇಳಿಕೆ!
ಅಗ್ನಿಪಥ ದಂಗೆಯಲ್ಲಿ ಕೋಚಿಂಗ್ ಸೆಂಟರ್ ಕೈವಾಡ? ಶಾಕಿಂಗ್ ಮಾಹಿತಿ ಬಯಲು!
ಅಗ್ನಿಪಥ ಯೋಜನೆ ವಿರುದ್ಧ ಭಾರೀ ಹಿಂಸಾಚಾರದ ತಾಣಗಳಾಗಿರುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿನ ದುಷ್ಕೃತ್ಯದಲ್ಲಿ ಸ್ಥಳೀಯ ಕೋಚಿಂಗ್ ಸೆಂಟರ್‌ಗಳ ಕೈವಾಡವಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇದೇ ಆರೋಪದ ಹಿನ್ನೆಲೆಯಲ್ಲಿ ಓರ್ವನ ಸಾವಿಗೆ ಕಾರಣವಾದ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣ ಹಿಂಸಾಚಾರದ ಪ್ರಮುಖ ರೂವಾರಿ ಅವಲು ಸುಬ್ಬರಾವ್ ಎಂಬಾತನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಅಗ್ನಿಪಥ ದಂಗೆಯಲ್ಲಿ ಕೋಚಿಂಗ್ ಸೆಂಟರ್ ಕೈವಾಡ? ಶಾಕಿಂಗ್ ಮಾಹಿತಿ ಬಯಲು!
ದೇಶಾದ್ಯಂತ ಪ್ರತಿಭಟನೆಗೆ ಕರೆಕೊಟ್ಟ ಕಾಂಗ್ರೆಸ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ದೇಶದ ಎಂಟು ರಾಜ್ಯಗಳಲ್ಲಿ ಕಳೆದ ವಾರದಿಂದಲೇ ಉಗ್ರ ಸ್ವರೂಪದ ಪ್ರತಿಭಟನೆ ನಡೆಯುತ್ತಿದೆ. ಇದೀಗ ಇಂದು ದೇಶಾದ್ಯಂತ ಬಂದ್‌ಗೆ ಕಾಂಗ್ರೆಸ್ ಪಕ್ಷ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಇನ್ನಷ್ಟು ರಾಜ್ಯಗಳಿಗೆ ಹರಡುವ ಸಾಧ್ಯತೆಯಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅವರ ಭೇಟಿ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದ್ದು, ಬಿಗಿ ಬಂದೋಬಸ್ತು ಒದಗಿಸಲಾಗಿದೆ.