ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಿಂದ ಬಿಜೆಪಿ ಸಂಭ್ರಮಾಚರಣೆ ನಡೆಸುತ್ತಿದ್ದರೆ ಇತ್ತ, ಭಾರಿ ಅಧಿಪತ್ಯ ಹೊಂದಿದ್ದ ಸೂರ್ಯವಂಶಿ ಕುಟುಂಬದ 6 ಸದಸ್ಯರು ಸೋಲುಂಡಿದ್ದಾರೆ.

ಮುಂಬೈ (ಡಿ.21) ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 214 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಗೆಲುವು ಕಂಡಿದೆ. ಇತ್ತ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 49 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ವಿಶೇಷ ಅಂದರೆ ಬಿಜೆಪಿ 118 ಸ್ಥಾನ ಗೆಲ್ಲುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮಹಾರಾಷ್ಟ್ರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆದರೆ ಸೂರ್ಯವಂಶಿ ಕುಟುಂಬ ಮಾತ್ರ ಸೋಲಿನ ನೋವಿನಲ್ಲಿ ಕುಳಿತಿದೆ. ಕಾರಣ ಬಿಜೆಪಿಯ ಸೂರ್ಯವಂಶಿ ಕುಟುಂಬದ 6 ಸದಸ್ಯರು ಈ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿದ್ದರು. ಸ್ಪರ್ಧಿಸಿದ 6 ಮಂದಿ ಸೋಲು ಕಂಡ ಘಟನೆ ನಾಂದೇಡ್ ಜಿಲ್ಲೆಯ ಲೋಹಾ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ನಡೆದಿದೆ.

ಲೋಹದಲ್ಲಿ ಭಾರಿ ಜನಪ್ರಿಯ ನಾಯಕ ಗಜಾನನ್ ಸೂರ್ಯವಂಶಿ

ಲೋಹ ಮುನ್ಸಿಪಲ್ ಕೌನ್ಸಿಲ್ ವ್ಯಾಪ್ತಿಯ್ಲಿ ಗಜಾನನ್ ಸೂರ್ಯವಂಶಿ ಕುಟುಂಬ ಜನಪ್ರಿಯತೆ ಹೊಂದಿದೆ. ಇಡೀ ಕುಟುಂಬ ರಾಜಕಾರಣದಲ್ಲಿದೆ. ಬಿಜೆಪಿ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದಿರುವ ಪಾರ್ಟಿ. ಹೀಗಾಗಿ ಅಪ್ಪನಿಂದ ಮಗನಿಗೆ ಟಿಕೆಟ್ ನೀಡುವುದು ಅತೀ ವಿರಳ. ಆದರೆ ಕೆಲವು ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದ ಉದಾಹರಣೆಗಳು ಇವೆ. ಆದರೆ ಈ ಬಾರಿ ಈ ರೀತಿ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಟ್ಟ ಕೈಸುಟ್ಟುಕೊಂಡಿದೆ. ಲೋಹಗ ಗಜಾನನ್ ಸೂರ್ಯವಂಶಿ ಕುಟುಂಬದ ಆರು ಮಂದಿ ಸೋಲು ಕಂಡಿದ್ದಾರೆ.

ಕುಟುಂಬ ರಾಜಕಾರಣ ವಿರೋಧಿಸಿದ ಜನ

ಗಜಾನನ್ ಸೂರ್ಯವಂಶಿ, ಪತ್ನಿ ಗೋದಾವರಿ ಸೂರ್ಯವಂಶಿ, ಸಹೋದರ ಸಚಿನ್ ಸೂರ್ಯವಂಶಿ, ಸಹೋದನ ಪತ್ನಿ ಸುಪ್ರಿಯಾ ಸೂರ್ಯವಂಶಿ, ಸಹೋದರಿಯ ಪತಿ ಯುವರಾಜ್ ವಾಘಮಾರೆ, ಸಂಬಂಧಿ ರೀನಾ ವ್ಯಾಹರೆ ಸೇರಿ ಒಟ್ಟು 6 ಮಂದಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪಾರ್ಟಿಯಲ್ಲಿ ಗುರುತುಸಿಕೊಂಡಿದ್ದ ಗಜಾನನ್ ಸೂರ್ಯವಂಶಿ ಹಾಗೂ ಕುಟುಂಬ ಟಿಕೆಟ್ ಗಿಟ್ಟಿಸಿಕೊಂಡಿದ್ದೇ ಹಲವರಿಗೆ ಅಚ್ಚರಿ ತಂದಿತ್ತು. ಕುಟುಂಬ ರಾಜಕಾರಣ ವಿರೋಧಿಸುವ ಬಿಜೆಪಿ ಇಡೀ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆ ಎಂಬ ಆರೋಪವೂ ಕೇಳಿಬಂದಿತ್ತು. ಬಿಜೆಪಿ ಈ ಕುಟುಂಬ ರಾಜಕಾರಣವನ್ನು ಜನರು ವಿರೋಧಿಸಿದ್ದಾರೆ. ಆರಕ್ಕೆ ಆರು ಮಂದಿ ಸೋಲು ಕಂಡಿದ್ದಾರೆ.

ಲೋಹ ಮುನ್ಸಿಪಲ್ ಅಧ್ಯಕ್ಷನಾದ ಶರದ್ ಪವಾರ್

ಬಿಜೆಪಿ ಕುಟುಂಬ ರಾಜಕಾರಣದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮ್ಯಾಜಿಕ್ ಮಾಡಿದೆ. ಲೋಹ ಮುನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಪವಾರ್ ಬಣದ ಎನ್‌ಸಿಪಿ ತನ್ನ ಎದುರಾಳಿ ಶರದ್ ಪವಾರ್ ಎನ್‌ಸಿಪಿ ವಿರುದ್ದ ಬಾರಿ ರಣತಂತ್ರ ಹೂಡಿತ್ತು. ಹೀಗಾಗಿ ಇಲ್ಲಿ ಅಜಿತ್ ಪವಾರ್ ಕಣಕ್ಕಿಳಿಸಿದ್ದು ಶರದ್ ಪವಾರ್ ಅನ್ನೋ ಹೆಸರಿನ ಅಭ್ಯರ್ಥಿಯನ್ನು. ಇಷ್ಟೇ ಅಲ್ಲ ಈ ಶರದ್ ಪವಾರ್ ಲೋಹ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಸ್ಥಾನ ಗೆದ್ದುಕೊಂಡಿದ್ದಾರೆ.