ಕಾಗೆಯೊಂದು ನೆಟ್ಟೆಡ್ ಬೇಲಿಗೆ ಸಿಲುಕಿ ಒದ್ದಾಡಿದೆ. ಇದನ್ನು ನೋಡಿದ ಪುಟ್ಟ ಬಾಲಕನೋರ್ವ ಆ ಬಲೆಯಿಂದ ಕಾಗೆಯನ್ನು ಹೊರ ತೆಗೆದಿದ್ದು, ಈ ರಕ್ಷಣಾ ಕಾರ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಮಾನವ ನಿರ್ಮಿತ ಅವಾಂತರದಿಂದ ಪ್ರಾಣಿ ಪಕ್ಷಿಗಳ ಪ್ರಾಣ ಆಗಾಗ ಸಂಕಟಕ್ಕೆ ಸಿಲುಕುತ್ತದೆ. ಉರುಳಿಗೆ ಸಿಲುಕಿ ಚಿರತೆ ಹುಲಿಗಳು ಸಾಯುವುದು ಕರೆಂಟ್ ವೈರ್‌ಗೆ ಸಿಲುಕಿ ಬಾವಲ ಹಕ್ಕಿಗಳು ಪ್ರಾಣ ಬಿಡುವುದು, ರೈಲಿಗೆ ಸಿಲುಕಿ ಆನೆಗಳು ಸಾಯುವುದು ಹೀಗೆ ಅಭಿವೃದ್ಧಿ ಹೆಸರಲ್ಲಿ ಮಾನವ ಮಾಡಿದ ಅವಾಂತರಕ್ಕೆ ಅನೇಕ ಪ್ರಾಣಿ ಪಕ್ಷಿಗಳು ಆಗಾಗ ಅಪಾಯಕ್ಕೆ ಸಿಲುಕುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಕಾಗೆಯೊಂದು ನೆಟ್ಟೆಡ್ ಬೇಲಿಗೆ ಸಿಲುಕಿ ಒದ್ದಾಡಿದೆ. ಇದನ್ನು ನೋಡಿದ ಪುಟ್ಟ ಬಾಲಕನೋರ್ವ ಆ ಬಲೆಯಿಂದ ಕಾಗೆಯನ್ನು ಹೊರ ತೆಗೆದಿದ್ದು, ಈ ರಕ್ಷಣಾ ಕಾರ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಬಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸಬಿತಾ ಚಂದ್ ಎಂಬುವವರು ಪೋಸ್ಟ್ ಮಾಡಿದ್ದು, ಒಂದು ಕರುಣೆ ಭರಿತ ಕಾರ್ಯವೂ ಅಸಂಖ್ಯ ಜೀವಗಳನ್ನು ತಟ್ಟಬಲ್ಲದು ಎಂದು ಬರೆದುಕೊಂಡಿದ್ದಾರೆ. 36 ನಿಮಿಷಗಳ ಈ ವಿಡಿಯೋದಲ್ಲಿ ಈ ವಿಡಿಯೋದಲ್ಲಿ ಸಮವಸ್ತ್ರ ಧರಿಸಿದ್ದ ಪುಟ್ಟ ಬಾಲಕ ನೆಟ್ ಬೇಲಿಯ ಬಲೆಗೆ ಸಿಲುಕಿದ ಕಾಗೆಯನ್ನು ಬಾಲಕ ಬಲೆಯಿಂದ ಬಿಡಿಸುತ್ತಾನೆ. ಇದನ್ನು ನೋಡಿದ ಜೊತೆಯಲ್ಲಿದ್ದ ಬಾಲಕರೆಲ್ಲರೂ ಆತನ ಸಮೀಪ ಬಂದು ಕಾಗೆಯನ್ನು (Crow) ಮುಟ್ಟಲು ಪ್ರಯತ್ನಿಸುತ್ತಾರೆ. ಈ ವೇಳೆ ಬಾಲಕ ಹಿಡಿತ ಸಡಿಲಗೊಳಿಸಿದ್ದು, ಕಾಗೆ ಅಲ್ಲಿಂದ ಹಾರಿ ಹೋಗುತ್ತದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.
ಪುಟ್ಟ ಮಕ್ಕಳು ಬಾಲ್ಯದಲ್ಲಿ ಎಲ್ಲರಿಗೂ ಎಲ್ಲದರ ಬಗ್ಗೆಯೂ ಕಾಳಜಿ ತೋರುತ್ತಾರೆ, ದೊಡ್ಡವರಾಗುತ್ತಾ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಕಾಮೆಂಟ್‌ನಲ್ಲಿ ತಮ್ಮ ಬಾಲ್ಯದ ಅನುಭವಗಳ ಮೆಲುಕು ಹಾಕಿದ್ದಾರೆ. ಈ ಘಟನೆ ನನಗೆ ನನನ ಕಿರಿಯ ಸಹೋದರನ ನೆನಪು ಮಾಡಿದೆ. ಆತ ಅಸ್ವಸ್ಥಗೊಂಡ ಪರಿವಾಳಗಳ ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿದ್ದ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದೊಂದು ಅದ್ಭುತ ವಿಡಿಯೋ, ಸೂಕ್ಷ್ಮ ಮನಸ್ಸಿನ ಬಾಲಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಈ ಹಿಂದೆ ಕಾಗೆಗಳಿಗೆ ಆಹಾರ ನೀಡಿದ್ದಲ್ಲದೇ ರಕ್ಷಣೆ ಕಾರ್ಯ ಮಾಡಿದ್ದೆ. ಇದು ಸಲುಭದ ಕೆಲಸವಲ್ಲ. ಈ ಬಾಲಕ ಯಾವುದೇ ಭಯವಿಲ್ಲದೇ ಕಾಗೆಯ ರಕ್ಷಿಸುವ ಕಾರ್ಯ ಮಾಡಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕರುಣಾಮಯಿ ಹೃದಯಗಳಿಗೆ ಸೆಲ್ಯೂಟ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Chamarajanagara: ತೋಟದ ಶೆಡ್‌ಗೆ ನುಗ್ಗಿ ಕಾಡಾನೆಗಳ ದಾಳಿ, ಹಸು ಬಲಿ
ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು
ಕಾಫಿ ತೋಟದ ಬೇಲಿಗೆ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸುಮಾರು ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಸಾವಪ್ಪಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಮೂಡಿಗೆರೆ (Mudigere) ವಲಯದ, ಬೀಳುಗುಳ ಸಮೀಪದ, ಮೂಡಿಗೆರೆ ಟೌನ್ ಸೆಕ್ಷನ್, ಟೌನ್ ಬೀಟ್ ನ ಲಕ್ಷ್ಮಣ ಗೌಡ ಮತ್ತು ವೆಂಕಟ್ ಗೌಡ ಅವರ ಕಾಫಿ ಎಸ್ಟೇಟ್‌ನ ಬೇಲಿಗೆ ಅಕ್ರಮವಾಗಿ ಉರುಳು ಹಾಕಲಾಗಿತ್ತು.
ಮೂಡಿಗೆರೆ ಸಮೀಪದ ಬಿಳಗುಳ ಕೊಲ್ಲಿಬ್ಯೆಲ್ (Bilagula Kollibiel) ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10 ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ಉರುಳು ಹಾಕಿದ್ದರು. ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಲವೇ ಅಡಿ ದೂರದ ಅಂತರದಲ್ಲಿ ಚಿರತೆಯು ಉರುಳಿಗೆ ಬಿದ್ದಿದ್ದು ಈ ವೇಳೆ ಚಿರತೆ ಕೂಗಾಟವನ್ನು ಕೇಳಿ ದಾರಿಯಲ್ಲಿ ಹೋಗುವ ಪ್ರಯಾಣಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
Ramanagara: ಕಾಡು ಪ್ರಾಣಿಗಳ ಭೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ನರಳಿ ಪ್ರಾಣಬಿಟ್ಟ ಚಿರತೆ
ರಾತ್ರಿಯೇ ತೆರಳಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟಿದ್ದು ಉರುಳು ಕುತ್ತಿಗೆಗೆ ಬಲವಾಗಿ ಸಿಲುಕಿದ್ದ ಕಾರಣ ಮೃತಪಡುವ ಹಂತಕ್ಕೆ ತಲುಪಿದ್ದು. ರಕ್ಷಣೆ ಮಾಡುವ ವೇಳೆಗೆ ಮೃತಪಟ್ಟಿದೆ. ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾಫಿ ತೋಟದ ಮಾಲೀಕರು ಹಾಗೂ ಉರುಳು ಹಾಕಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
