Chamarajanagara: ತೋಟದ ಶೆಡ್‌ಗೆ ನುಗ್ಗಿ ಕಾಡಾನೆಗಳ ದಾಳಿ, ಹಸು ಬಲಿ
ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ, ಎಲಚೆಟ್ಟಿ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಿನ್ನೆ ರಾತ್ರಿ ತೋಟದ ಮನೆಗಳಿಗೆ ಎಂಟ್ರಿ ಕೊಟ್ಟ ಗಜಪಡೆ ತಂತಿ ಬೇಲಿ ಉರುಳಿಸಿ,ಜಮೀನುಗಳಲ್ಲಿದ್ದ ಬೆಳೆಯನ್ನು ನಾಶಪಡಿಸಿದ್ದಲ್ಲದೇ ಹಸುವನ್ನು ಕೂಡ ಸಾಯಿಸಿವೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಜ.14): ಇದು ರಾಜ್ಯದಲ್ಲಿ ಅತಿ ಹೆಚ್ಚು ಆನೆ ಹೊಂದಿರುವ ಜಿಲ್ಲೆ. ಆದರೆ ಇತ್ತಿಚ್ಚಿಗೆ ಹಾಸನ ಸೇರಿದಂತೆ ಇತರೆ ಜಿಲ್ಲೆಗಳಂತೆ ಇಲ್ಲೂ ಕೂಡ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ನಿನ್ನೆ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಒಂದು ಹಸುವನ್ನು ಸಾಯಿಸಿದ್ರೆ ಜನರನ್ನು ಕೂಡ ಕಿರುಚಾಡುವಂತೆ ಮಾಡಿದ್ವು. ಸದ್ಯ ಕಾಡಾನೆಗಳಿಂದ ಬಚಾವ್ ಆದ್ವಿ ಅಂತಾ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇದೆಲ್ಲಾ ಕಂಡು ಬಂದಿದ್ದು ಗಡಿ ಜಿಲ್ಲೆ ಚಾಮರಾಜನಗರದಲ್ಲಿ. ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ, ಎಲಚೆಟ್ಟಿ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಿನ್ನೆ ರಾತ್ರಿ ತೋಟದ ಮನೆಗಳಿಗೆ ಎಂಟ್ರಿ ಕೊಟ್ಟ ಗಜಪಡೆ ತಂತಿ ಬೇಲಿ ಉರುಳಿಸಿ,ಜಮೀನುಗಳಲ್ಲಿದ್ದ ಬೆಳೆಯನ್ನು ನಾಶಪಡಿಸಿದ್ದಲ್ಲದೇ ಹಸುವನ್ನು ಕೂಡ ಸಾಯಿಸಿವೆ. ರೈತರು ಬೆಳೆದಿದ್ದ ಈರುಳ್ಳಿ, ಬಾಳೆ ಹಾಗು ಟಮೊಟೊ ಬೆಳೆಗಳನ್ನು ಹಾಳು ಮಾಡಿದ್ದು ಇದರಿಂದ ರೈತರು ಹೈರಣಾಗಿ ಹೋಗಿದ್ದರೆ. ಭಯದಿಂದಲೇ ರಾತ್ರಿ ಹೊತ್ತು ಓಡಾಡುವ ಪರಿಸ್ಥಿತಿಯಿದೆ.
ರಾತ್ರಿ ಮೂರು ಗಂಟೆ ಜಾವದಲ್ಲಿ ಅಗಮಿಸಿದ ಕಾಡಾನೆ ಗುಂಪು ನಮ್ಮ ಹಸುವನ್ನು ಕೊಂದು ಹಾಕಿತ್ತು. ನಮ್ಮ ಮೇಲೂ ಕೂಡ ದಾಳಿ ನಡೆಸಲು ಪ್ರಯತ್ನ ಮಾಡಿತು. ಎಲ್ಲರೂ ಕೂಡ ಮನೆಯೊಳಗೆ ಹೋಗಿ ಸೇರಿಕೊಂಡ್ವಿ.ಮನೆಯ ಸುತ್ತ ಓಡಾಡಿದವು,ಸದ್ಯ ಬದುಕುಳಿದ್ದೆ ಹೆಚ್ಚು. ಕಾಡಾನೆ ಕಾಟ ತಪ್ಪಿಸುವಂತೆ ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿಗೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಶಾಸಕ ವೈಯಕ್ತಿಕ ಪರಿಹಾರ ಕೊಟ್ಟಿದ್ದಲ್ಲದೇ ಅರಣ್ಯ ಇಲಾಖೆಯಿಂದಲೂ ಪರಿಹಾರ ಕೊಡುವಂತೆ ಸೂಚಿಸಿದರು. ಮೂರು ಜಿಲ್ಲೆಗಳಲ್ಲಿ ಆನೆ ತಡೆಗೆ ರಚಿಸಿರುವ ಟಾಸ್ಕ್ ಫೋರ್ಸ ನ್ನು ಚಾಮರಾಜನಗರಕ್ಕು ವಿಸ್ತರಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು ಹಾಗು ಕಾಡಾನೆ ಕಾಟ ತಪ್ಪಿಸಲು ಸೋಲಾರ್ ಫೆನ್ಸ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಮಗಳೂರು: ಮಲೆನಾಡಲ್ಲಿ ಮನೆ ಸಮೀಪವೇ ಬರುತ್ತಿರುವ ಕಾಡಾನೆಗಳು, ಆತಂಕದಲ್ಲಿ ಜನತೆ..!
ಇನ್ನೂ ಗುಂಪು ಗುಂಪಾಗಿ ಕಾಡಾನೆ ಹಿಂಡು ಗ್ರಾಮದ ಜಮೀನುಗಳಿಗೆ ಲಗ್ಗೆ ಇಡ್ತಿವೆ. ಹೀಗೆ ಲಗ್ಗೆ ಇಟ್ಟ ಕಾಡಾನೆಗಳನ್ನು ಮತ್ತೇ ಕಾಡಿನತ್ತ ಓಡಿಸಲು ಅರಣ್ಯಾಧಿಕಾರಿ, ಸಿಬ್ಬಂದಿ ಮಾತ್ರ ಹರ ಸಾಹಸಪಟ್ಟರು. ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತಾರಣ್ಯದ ಎಸಿಎಫ್ ಸುರೇಶ್ ಸೇರಿದಂತೆ ಸಿಬ್ಬಂದಿ ಪಟಾಕಿ,ಸಿಡಿ ಮದ್ದು ಸಿಡಿಸಿ ಕಾಡಾನೆಗಳನ್ನು ತಮಿಳುನಾಡಿನತ್ತ ಡ್ರೈವ್ ಮಾಡಿದರು. 50 ಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ಬೀಡು ಬಿಟ್ಟಿದ್ದವು.ಎಲ್ಲವನ್ನೂ ಕೂಡ ಬೇರೆಡೆ ಡ್ರೈವ್ ಮಾಡ್ತೇವೆ.ಶೀಘ್ರದಲ್ಲೇ ಈ ಭಾಗದಲ್ಲಿ ಹ್ಯಾಂಗಿಂಗ್ ಸೋಲಾರ್ ಅಳವಡಿಸುವ ಯೋಜನೆ ಹಾಕಿಕೊಂಡಿದ್ದೇವೆ. ಇದರಿಂದ ಆನೆ ಮತ್ತು ಮಾನವ ಸಂಘರ್ಷ ಕಡಿಮೆ ಆಗುತ್ತೆ ಅಂತಾ ತಿಳಿಸಿದರು.
Bison Attacks: ಕಾಫಿನಾಡಲ್ಲಿ ಕಾಡುಕೋಣ ಹಾವಳಿ: 15 ದಿನದಲ್ಲಿ ಮೂರನೇ ದಾಳಿ!
ರಾಜ್ಯದ ಹಲವು ಜಿಲ್ಲೆಗಳಂತೆ ಚಾಮರಾಜನಗರದಲ್ಲೂ ಕೂಡ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ತಮಿಳುನಾಡಿನಿಂದ ಎಂಟ್ರಿ ಕೊಟ್ಟಿದ್ದ ಕಾಡಾನೆ ಹಿಂಡಿನಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.ಆದ್ರೆ ಸದ್ಯ ಅರಣ್ಯ ಇಲಾಖೆ ಕಾಡಾನೆಗಳನ್ನು ಬೇರೆಡೆಗೆ ತಾತ್ಕಾಲಿಕವಾಗಿ ಡ್ರೈವ್ ಮಾಡಿವೆ.ಆದ್ರೆ ಮತ್ತೇ ಆನೆಗಳು ಎಂಟ್ರಿ ಕೊಟ್ರೆ ಬೆಳೆಯ ಜೊತೆಗೆ ಪ್ರಾಣ ಹಾನಿಯೂ ಉಂಟಾಗುವ ಸಾಧ್ಯತೆ ಹೆಚ್ಚಿದ್ದು,ಶಾಶ್ವತವಾಗಿ ಕಾಡಾನೆ ಉಪಟಳದಿಂದ ತಪ್ಪಿಸುವಂತೆ ರೈತರು ಮನವಿ ಮಾಡ್ತಿದ್ದಾರೆ.