Goa ಬೀಚ್‌ಗಳಲ್ಲಿ ಇನ್ನು ಭಿಕ್ಷೆ, ಮದ್ಯ ಸೇವನೆ ನಿಷಿದ್ಧ: ತಪ್ಪಿದರೆ 50 ಸಾವಿರದವರೆಗೂ ದಂಡ..!

ಈ ನಿಯಮ ಉಲ್ಲಂಘಿಸಿದರೆ ವ್ಯಕ್ತಿಯೊಬ್ಬನಿಗೆ 5,000 ರೂ.ನಿಂದ 50,000 ರೂ. ವರೆಗೂ ದಂಡ ವಿಧಿಸಲಾಗುವುದು ಅಥವಾ ಆತನ ವಿರುದ್ಧ ಸರ್ಕಾರಿ ಆಜ್ಞೆ ಉಲ್ಲಂಘಿಸಿದ್ದಕ್ಕೆ ಸೆಕ್ಷನ್‌ 188 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಯಾರೇ ಹಣ ಕೇಳುವುದು ಹಾಗೂ ಪ್ರವಾಸಿಗರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.

littering driving cooking on beach when partying in goa can now cost you rs 50000 ash

ಪಣಜಿ: ನೀವು ಗೋವಾದಲ್ಲಿ (Goa) ನಿಮ್ಮ ಸ್ನೇಹಿತರೊಂದಿಗೆ ಪಾರ್ಟಿ (Party) ಮಾಡಲು ಯೋಜಿಸುತ್ತಿದ್ದರೆ, ನೀವು ಹೊಸ ನಿಯಮಗಳ ಬಗ್ಗೆ ಗಮನ ಹರಿಸಬೇಕು. ಗೋವಾದಲ್ಲಿ ಪ್ರವಾಸೋದ್ಯಮದ (Tourism) ಇಮೇಜ್ ಅನ್ನು ಹೆಚ್ಚಿಸಲು, ಪ್ರವಾಸಿ ಸ್ಥಳಗಳನ್ನು (Tourist Places) ಸ್ವಚ್ಛವಾಗಿ ಮತ್ತು ಪ್ರವಾಸಿಗರಿಗೆ ಸುರಕ್ಷಿತವಾಗಿಡಲು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಭಾರಿ ದಂಡವನ್ನು (Fine) ಆಕರ್ಷಿಸುತ್ತದೆ. ಅಕ್ಟೋಬರ್ 31 ರಂದು ಗೋವಾ ಸರ್ಕಾರ ಹೊರಡಿಸಿದ ನೋಟಿಸ್ ಪ್ರಕಾರ, ಈಗ ತೆರೆದ ಜಾಗದಲ್ಲಿ ಅಡುಗೆ ಮಾಡುವುದು (Cooking) ಮತ್ತು ಬೀಚ್‌ಗಳಲ್ಲಿ ವಾಹನ ಚಲಾಯಿಸುವುದನ್ನು (Driving) ನಿಷೇಧಿಸಲಾಗಿದೆ. ಇದಲ್ಲದೆ, ಒಬ್ಬ ವ್ಯಕ್ತಿಯು ಕಡಲತೀರಗಳಲ್ಲಿ ಕಸ ಹಾಕುವುದು ಅಥವಾ ಬಾಟಲಿಗಳನ್ನು ಒಡೆಯುವುದು ಕಂಡುಬಂದರೆ (ಕುಡಿಯುವಾಗ), ಅವನು/ಅವನಿಗೆ ಭಾರಿ ದಂಡ ವಿಧಿಸಲಾಗುತ್ತದೆ.

ತನ್ನ ಆದಾಯದ ಪ್ರಮುಖ ಮೂಲವಾದ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿರುವ ಗೋವಾಸರ್ಕಾರ, ರಾಜ್ಯದಲ್ಲಿ ಬಹಿರಂಗವಾಗಿ ಮದ್ಯಪಾನ (Drinking) ಬೀಚ್‌ಗಳಲ್ಲಿ (Beach) ವಾಹನ ಸಂಚಾರ, ಭಿಕ್ಷೆ ಬೇಡುವುದಕ್ಕೆ (Begging) 5,000 ರೂ. ನಿಂದ 50,000 ರೂ. ವರೆಗೂ ದಂಡ ವಿಧಿಸಲು ನಿರ್ಧರಿಸಿದೆ. ಗೋವಾ ಪ್ರವಾಸೋದ್ಯಮ ಇಲಾಖೆಯ (Goa Tourism Department) ಹೊಸ ಆದೇಶದ ಅನ್ವಯ, ‘ಪ್ರವಾಸಿ ಸ್ಥಳಗಳಲ್ಲಿ ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಕಸ ಎಸೆಯುವುದು, ಮದ್ಯ ಸೇವಿಸುವುದು, ಭಿಕ್ಷೆ ಬೇಡುವುದು, ಅಕ್ರಮವಾಗಿ ಸರಕುಗಳ ಮಾರಾಟ, ಪ್ರವಾಸಿ ಸ್ಥಳಗಳಲ್ಲಿ ಪ್ರಚಾರ ನಡೆಸುವುದು, ಕಡಲ ತೀರದಲ್ಲಿ ವಾಹನ ಚಲಾಯಿಸುವುದು ಮೊದಲಾದವುಗಳನ್ನು ‘ಉಪದ್ರವಕಾರಿ’ ಚಟುವಟಿಕೆ ಎಂದು ಕರೆದಿದ್ದು, ಇವುಗಳ ಮೇಲೆ ನಿಷೇಧ ಹೇರಿದೆ. 

ಇದನ್ನು ಓದಿ: ಬಾಡಿಗೆ ಕಾರು ಪಡೆದು ಗೋವಾ ಬೀಚ್‌ನಲ್ಲಿ ಮುಳುಗಿಸಿದ ಪುಂಡರು!

ಸೇವಾ ಪೂರೈಕೆದಾರರು ಮತ್ತು ಸ್ಥಳೀಯ ವ್ಯವಹಾರಗಳಿಗೆ ಸಹ ಹೊಸ ನಿಯಮಗಳನ್ನು ಘೋಷಿಸಲಾಗಿದೆ. ಗುರುತಿಸಲಾದ ವಲಯಗಳಲ್ಲಿ ಮಾತ್ರ ಜಲ ಕ್ರೀಡೆಗಳಿಗೆ ಅವಕಾಶ ನೀಡಲಾಗುವುದು. ಅಧಿಕೃತ ಟಿಕೆಟ್‌ ಕೌಂಟರ್‌ ಹಾಗೂ ವ್ಯಾಪಾರಿಗಳನ್ನು ಹೊರತುಪಡಿಸಿ ಇನ್ನಿತರೆ ವ್ಯಕ್ತಿಗಳು ಜಲಕ್ರೀಡೆಗಾಗಿ ಟಿಕೆಟ್‌ ಮಾರುವುದು ಅಥವಾ ಯಾವುದೇ ವಸ್ತುಗಳನ್ನು ಮಾರುವುದನ್ನೂ ನಿಷೇಧಿಸಿದೆ. ಪ್ರವಾಸಿಗರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದರೆ ವ್ಯಾಪಾರಿಗಳು ಮತ್ತು ಚಲಿಸಬಲ್ಲ ಬಂಡಿ ಮಾಲೀಕರ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ನಿಯಮ ಉಲ್ಲಂಘಿಸಿದರೆ ವ್ಯಕ್ತಿಯೊಬ್ಬನಿಗೆ 5,000 ರೂ.ನಿಂದ 50,000 ರೂ. ವರೆಗೂ ದಂಡ ವಿಧಿಸಲಾಗುವುದು ಅಥವಾ ಆತನ ವಿರುದ್ಧ ಸರ್ಕಾರಿ ಆಜ್ಞೆ ಉಲ್ಲಂಘಿಸಿದ್ದಕ್ಕೆ ಸೆಕ್ಷನ್‌ 188 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಯಾರೇ ಹಣ ಕೇಳುವುದು ಹಾಗೂ ಪ್ರವಾಸಿಗರಿಗೆ ತೊಂದರೆ ಕೊಡುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ. ಹೊಸ ನಿಯಮಗಳನ್ನು ಗಮನಿಸಿ ಅದರಂತೆ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದೂ ಗೋವಾ ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಗೋವಾ ಬೀಚ್‌ನಲ್ಲಿ ಶೇಂಗಾ ಮಾರುತ್ತಿದ್ದ ಬಾಲಕ ಈಗ ಬ್ರಿಟನ್ ಯೋಧ

Latest Videos
Follow Us:
Download App:
  • android
  • ios