ಅಯೋಧ್ಯೆ(ನ.09): ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಬಾಬರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರ ದಿವಂಗತ ಹಶೀಮ್ ಅನ್ಸಾರಿ ಪುತ್ರ ಸ್ವಾಗತಿಸಿದ್ದಾರೆ.

ಸುಪ್ರೀಂ ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರುವುದಾಗಿ ತಿಳಿಸಿರುವ ಹಶೀಮ್ ಅನ್ಸಾರಿ ಪುತ್ರ ಇಕ್ಬಾಲ್ ಅನ್ಸಾರಿ, ತೀರ್ಪಿನಿಂದ ಎರಡೂ ಸಮುದಾಯಗಳು ಮತ್ತಷ್ಟು ಹತ್ತಿರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಅದನ್ನು ಸ್ವಾಗತಿಸುವುದಾಗಿ ನಾವು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವು ಎಂದು ಇಕ್ಬಾಲ್ ತಿಳಿಸಿದ್ದಾರೆ.

ಬಾಬರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದ ಹಶೀಮ್ ಅನ್ಸಾರಿ, 1959ರಿಂದಲೂ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!

ಪ್ರಕರಣಧ ರಾಜಕೀಯಕರಣವನ್ನು ಸದಾ ವಿರೋಧಿಸುತ್ತಿದ್ದ ಹಶೀಮ್, ಕಾನೂನು ಹೋರಾಟಕ್ಕೂ  ಹಾಗೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ರಾಮಭಕ್ತಿ - ರಹೀಂಭಕ್ತಿ, ರಾಷ್ಟ್ರ ಭಕ್ತಿಗೆ ಎರಡೂ ಶಕ್ತಿ: ಅಯೋಧ್ಯೆ ತೀರ್ಪಿಗೆ ಮೋದಿ ಯುಕ್ತಿ

ಹಶೀಮ್ ಅನ್ಸಾರಿ 2016ರಲ್ಲಿ ವಯೋಸಹಜ ಅನಾರೋಗ್ಯದಿಂದ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಹಶೀಮ್ ನಿಧನದ ಬಳಿಕ ಅವರ ಪುತ್ರ ಇಕ್ಬಾಲ್ ಅನ್ಸಾರಿ ಪ್ರಕರಣದ ದಾವೇದಾರರಾಗಿ ಮುಂದುವರೆದಿದ್ದರು.