ಸುಪ್ರೀಂ ಬೆನ್ನಲ್ಲೇ ಹೈಕೋರ್ಟ್‌ನಿಂದಲೂ ಆಪ್‌ಗೆ ಶಾಕ್, ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಣೆ!
ಮನೀಶ್ ಸಿಸೋಡಿಯಾಗೆ ಮತ್ತೆ ಜೈಲೈ ಗತಿಯಾಗಿದೆ. ದೆಹಲಿ ಅಭಕಾರಿ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನಿಗಾಗಿ ಸತತ ಪ್ರಯತ್ನಗಳು ವಿಫಲವಾಗಿದೆ. ಇದೀಗ ಮತ್ತೆ ಹೈಕೋರ್ಟ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದೆ.
ನವದೆಹಲಿ(ಜು.03) ಆಮ್ ಆದ್ಮಿ ಪಾರ್ಟಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರಕ್ಕೆ ರೈಲು ಯೋಜನೆಗೆ ಹಣ ಒದಗಿಸಿದ ಕಾರಣ ಚಾಟಿ ಬೀಸಿತ್ತು. ಇದೀಗ ಆಪ್ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಮನೀಶ್ ಸಿಸೋಡಿಯಾಗೆ ಮತ್ತೆ ಜೈಲೇ ಗತಿಯಾಗಿದೆ.ಜಸ್ಟೀಸ್ ದಿನೇಶ್ ಕುಮಾರ್ ಶರ್ಮಾ, ಸಿಸೋಡಿಯಾ ಸೇರಿದಂತೆ ಇದೇ ಪ್ರಕರಣದಲ್ಲಿ ಜೈಲು ಸೇರಿರುವ ಆಪ್ ನಾಯಕ ವಿಜಯ್ ನಾಯರ್, ಹೈದರಾಬಾದ್ ಉದ್ಯಮಿ ಅಭಿಷೇಕ್ ಬೊಯಿನ್‌ಪಲ್ಲಿ ಹಾಗೂ ಬೆನಾಯ್ ಬಾಬುಗೂ ಜಾಮೀನು ನಿರಾಕರಿಸಿದೆ.
ದೆಹಲಿ ಅಬಕಾರಿ ನೀತಿ ತನಿಖೆ ನಡೆಯುತ್ತಿದೆ. ಈ ಘಟ್ಟದಲ್ಲಿ ಮನೀಶ್ ಸಿಸೋಡಿಯಾಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇತ್ತೀಚೆಗೆ ದೆಹಲಿ ಹೈಕೋರ್ಚ್ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು. ಇದೇ ವೇಳೆ ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಯಾವುದಾದರೂ ಒಂದು ದಿನದ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಿತ್ತು. ‘ಸಿಸೋಡಿಯಾ ಮೇಲಿನ ಆರೋಪಗಳು ಗಂಭೀರವಾಗಿದ್ದು, ಅವರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ’ ಎಂದು ಕೋರ್ಚ್ ಹೇಳಿತ್ತು.
ಜಾಹೀರಾತಿಗೆ ಖರ್ಚು ಮಾಡಲು ದುಡ್ಡಿದೆ, ರೈಲು ಯೋಜನೆಗಿಲ್ಲವೇ? ದೆಹಲಿ ಸರ್ಕಾರಕ್ಕೆ ಸುಪ್ರೀಂ ಚಾಟಿ!
ಮನೀಶ್ ಸಿಸೋಡಿಯಾ ಹಲವು ಬಾರಿ ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಆದರೆ ಪ್ರತಿ ಬಾರಿ ಕೋರ್ಟ್ ಪ್ರಕರಣದ ಗಂಭೀರತೆ ಹಾಗೂ ಪ್ರಭಾವಿ ವ್ಯಕ್ತಿ ಕಾರಣ ಜಾಮೀನು ನೀಡಲು ನಿರಾಕರಿಸಿದೆ. ಇದೀಗ ಮತ್ತೆ ಜಾಮೀನು ಅರ್ಜಿ ನಿರಾಕರಿಸಿದೆ.
ಮೇ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯ ಮನೀಶ್ ಸಿಸೋಡಿಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಸಿಸೋಡಿಯಾ ಅವರನ್ನು ಹಗರಣದ ಪ್ರಮುಖ ಸೂತ್ರದಾರ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಇದರಿಂದಾಗಿ ಸಿಸೋಡಿಯಾ ಅವರ ಸಂಕಷ್ಟಮತ್ತಷ್ಟುಹೆಚ್ಚಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ದೋಷಾರೋಪ ಪಟ್ಟಿಸಲ್ಲಿಸುತ್ತಿರುವ ಇ.ಡಿ., ಈವರೆಗೆ 12 ಮಂದಿಯನ್ನು ಬಂಧಿಸಿದೆ. ಇದೇ ಪ್ರಕರಣದಲ್ಲಿ ನ್ಯಾಯಂಗ ಬಂಧನದಲ್ಲಿದ್ದ ಸಿಸೋಡಿಯಾ ಅವರನ್ನು ಮಾ.9ರಂದು ಇ.ಡಿ. ಬಂಧಿಸಿತ್ತು. ಇದಕ್ಕೂ ಮೊದಲು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿತ್ತು.
ದೆಹಲಿ ಸುಗ್ರೀವಾಜ್ಞೆಗೆ ಆಪ್ ಕೆಂಡಾಮಂಡಲ, ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ!
ದೆಹಲಿಯ ಆಮ್‌ಆದ್ಮಿ ಸರ್ಕಾರ ತನ್ನ 2021-22ರ ನೂತನ ಮದ್ಯ ಲೈಸೆನ್ಸ್ ಹಂಚಿಕೆ ನೀತಿಯನ್ನು ಕೆಲ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ರೀತಿಯಲ್ಲಿ ರೂಪಿಸಿತ್ತು. ಲೈಸೆನ್ಸ್ ಪಡೆದ ಕೆಲವರಿಗೆ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನೆರವು ನೀಡಿತ್ತು. ಇದಕ್ಕಾಗಿ ಸರ್ಕಾರದ ಪ್ರಭಾವಿಗಳು ಲಂಚ ಪಡೆದಿದ್ದರು ಎಂಬುದು ಆರೋಪ. ಈ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.