ಜನನಿಬಿಡ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಚಿರತೆಯೊಂದಕ್ಕೆ ಕಾರು ಡಿಕ್ಕಿ ಆಗಿದೆ. ಕಾರು (Car)  ಡಿಕ್ಕಿ ಹೊಡೆದ ರಭಸಕ್ಕೆ ಚಿರತೆ ಕಾರಿನ ಮುಂಭಾಗದ ಬೊನೆಟ್‌ಗೆ ಸಿಲುಕಿದೆ. ನಂತರ ಸವರಿಸಿಕೊಂಡು ವಾಹನದಿಂದ ಬಿಡಿಸಿಕೊಂಡು ಅಲ್ಲಿಂದ ಚಿರತೆ ಪರಾರಿಯಾಗಿದೆ.

ಇತ್ತೀಚೆಗೆ ಕಾಡಿನ ಪ್ರಾಣಿಗಳು (Wild Animal) ಆಹಾರ ಅರಸಿ ನಾಡಿನತ್ತ ಬಂದು ಅಪಾಯಕ್ಕೆ ಸಿಲುಕುವುದು ಸಾಮಾನ್ಯ ಎನಿಸಿದೆ. ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಆಹಾರ ಅರಸಿ ಬಂದಿದ್ದ ಚಿರತೆಯೊಂದು ತೆರೆದ ಬಾವಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿದ್ದರು. ಈಗ ಜನನಿಬಿಡ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಚಿರತೆಯೊಂದಕ್ಕೆ ಕಾರು ಡಿಕ್ಕಿ ಆಗಿದೆ. ಕಾರು (Car) ಡಿಕ್ಕಿ ಹೊಡೆದ ರಭಸಕ್ಕೆ ಚಿರತೆ ಕಾರಿನ ಮುಂಭಾಗದ ಬೊನೆಟ್‌ಗೆ ಸಿಲುಕಿದೆ. ನಂತರ ಸವರಿಸಿಕೊಂಡು ವಾಹನದಿಂದ ಬಿಡಿಸಿಕೊಂಡು ಅಲ್ಲಿಂದ ಚಿರತೆ ಪರಾರಿಯಾಗಿದೆ. ಅಪಘಾತದಿಂದ ಚಿರತೆ ಗಂಭೀರ ಗಾಯಗೊಂಡಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಡಿಕ್ಕಿ ಹೊಡೆದ ನಂತರ ಚಿರತೆಯೂ ಕಾರಿನ ಮುಂಭಾಗದ ಭಾಗದಲ್ಲಿ ಅಪಾಯಕಾರಿಯಾಗಿ ಸಿಲುಕಿಕೊಂಡಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ (Susanta Nanda) ಅವರು ಟ್ವಿಟ್ಟರ್‌ನಲ್ಲಿ (Twitter) ಈ ವೀಡಿಯೊವನ್ನು (Video) ಹಂಚಿಕೊಂಡಿದ್ದಾರೆ ಮತ್ತು ಚಿರತೆಯ ಸ್ಥಿತಿಯ ಬಗ್ಗೆ ಅವರು ಮತ್ತೆ ಅಪ್‌ಡೇಟ್ ನೀಡಿದ್ದಾರೆ. ಆದರೆ ಈ ವಿಡಿಯೋದ ಭಯಾನಕತೆ ನೆಟ್ಟಿಗರನ್ನು ಕೆರಳಿಸಿದೆ.

Scroll to load tweet…
Scroll to load tweet…
Scroll to load tweet…

ಅಪಘಾತದ ಬಳಿಕ ಚಿರತೆ ಕಾರಿಗೆ ಅಂಟಿಕೊಂಡಿದ್ದು, ಮುರಿದ ಭಾಗದಿಂದ ತನ್ನನ್ನು ಬಿಡಿಸಿಕೊಳ್ಳಲು ಶ್ರಮಿಸುತ್ತಿರುವ ಭೀಕರ ದೃಶ್ಯವನ್ನು ನಂದಾ ಪೋಸ್ಟ್ ಮಾಡಿದ್ದಾರೆ. ಬಡ ಪ್ರಾಣಿ ಗಾಯಗೊಂಡು ಭಯಗೊಂಡಿರುವುದು ವೀಡಿಯೊದಿಂದ ಸ್ಪಷ್ಟವಾಗಿದೆ.

ಧುತ್ತನೇ ಬಂದು ಸೈಕಲ್ ಸವಾರನ ಮೇಲೆರಗಿದ ಚೀತಾ: ವಿಡಿಯೋ ನೋಡಿ

ನಂತರದ ಅಪ್‌ಡೇಟ್‌ನಲ್ಲಿ ಅಧಿಕಾರಿ ಸುಶಾಂತ್ ನಂದಾ, ಚಿರತೆಯೂ ಕಾರಿನಿಂದ ತನ್ನನ್ನು ಮುಕ್ತಗೊಳಿಸಿಕೊಂಡಿತು. ಅಲ್ಲದೇ ಕೂಡಲೇ ಸ್ಥಳದಿಂದ ಪಲಾಯನ ಮಾಡಿತು. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಚಿರತೆಗಳ ಆವಾಸಸ್ಥಾನವಾಗಿರುವ ಅರಣ್ಯ ಪ್ರದೇಶದ ದೊಡ್ಡ ಭಾಗವನ್ನು ಹೆದ್ದಾರಿಗಳು ಹೇಗೆ ಆವರಿಸಿವೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕಾಡಿನ ಮೇಲಿನ ಆಕ್ರಮಣದಿಂದಾಗಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇಂತಹ ಅವಘಡಗಳನ್ನು ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದರು.

ತೆರೆದ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ: ಬೋನಿಳಿಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ