ವೀಕೆಂಡ್ ಪಿಕ್ನಿಕ್ ಅಂತ ಕಾಡಿಗೆ ಬಂದವರ ಮೇಲೆ ಚಿರತೆ ದಾಳಿ: ಮೂವರಿಗೆ ಗಂಭೀರ ಗಾಯ
ವಾರಾಂತ್ಯದಲ್ಲಿ ಸ್ನೇಹಿತರ ಜೊತೆಗೂಡಿ ಪಿಕ್ನಿಕ್ ಹೋದ ತಂಡವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು ಯುವಕ ಹಾಗೂ ಯುವತಿ ಸೇರಿ ಒಟ್ಟು ಮೂವರು ಈ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ವಾರಾಂತ್ಯಗಳಲ್ಲಿ ಪಿಕ್ನಿಕ್, ಔಟಿಂಗ್ ಅಂತ ಪಟ್ಟಣ ಬಿಟ್ಟು ಕಾಡು ಸೇರುವವರು ಆಘಾತಗೊಳ್ಳುವ ಘಟನೆಯೊಂದು ನಡೆದಿದೆ. ಹೀಗೆ ವಾರಾಂತ್ಯದಲ್ಲಿ ಸ್ನೇಹಿತರ ಜೊತೆಗೂಡಿ ಪಿಕ್ನಿಕ್ ಹೋದ ತಂಡವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು ಯುವಕ ಹಾಗೂ ಯುವತಿ ಸೇರಿ ಮೂವರು ಈ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶದೊಲ್ ಜಿಲ್ಲೆಯಲ್ಲಿ ಬುವ ಗೊಹಪಾರು ಹಾಗೂ ಜೈತ್‌ಪುರ ಪ್ರದೇಶದ ಅರಣ್ಯಕ್ಕೆ ಸ್ನೇಹಿತರ ಗುಂಪೊಂದು ಪಿಕ್ನಿಕ್ ಅಂತ ಬಂದಿದ್ದು, ಈ ವೇಳೆ ಈ ಸ್ನೇಹಿತರ ಮೇಲೆ ಚಿರತೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿದೆ. ಈ ದೃಶ್ಯ ಸ್ನೇಹಿತರ ಜೊತೆ ಇದ್ದ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಯಾಳುಗಳಲ್ಲಿ ಒಬ್ಬರು ಸಹಾಯ ಸಬ್‌ಇನ್ಸ್‌ಪೆಕ್ಟರ್ ಕೂಡ ಸೇರಿದ್ದಾರೆ. 23 ವರ್ಷದ ಯುವಕ, 35 ವರ್ಷದ ಯುವತಿ ಹಾಗೂ ಸಬ್‌ಇನ್ಸ್‌ಪೆಕ್ಟರ್ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಆಕ್ರಮಣಕಾರಿಯಾಗಿ ಇವರ ಮೇಲೆ ಮುಗಿಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.
ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ: ಭಕ್ತರಲ್ಲಿ ಹೆಚ್ಚಾಯ್ತು ಆತಂಕ, ಎಚ್ಚರಿಕೆ ಕೊಟ್ಟ ಟಿಟಿಡಿ!
ಗಾಯಾಳುಗಳನ್ನು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ನಿತೀನ್ ಸಮ್ದರಿಯಾ, 23 ವರ್ಷದ ಆಕಾಶ್ ಕುಶ್ವಾಹ್ ಹಾಗೂ 25 ವರ್ಷದ ನಂದಿನಿ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ವಾರಾಂತ್ಯದಲ್ಲಿ ಪಿಕ್ನಿಕ್‌ಗಾಗಿ ಗೊಹ್ಪಾರು ಹಾಗೂ ಜೈತ್‌ಪುರ ಅರಣ್ಯಕ್ಕೆ ಆಗಮಿಸಿದ್ದರು. ಈ ಮೂವರ ಜೊತೆ ಸುಮಾರು 50 ರಿಂದ 60 ಜನ ಪಿಕ್ನಿಕ್‌ಗೆ ಬಂದಿದ್ದರು. ಆದರೆ ಇವರ ಈ ಪಿಕ್ನಿಕ್ ಚಿರತೆ ದಾಳಿಯಿಂದಾಗಿ ಕೆಲ ಸಮಯದಲ್ಲೇ ದುರಂತಾಗಿ ಬದಲಾಗಿದೆ.
ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಓಡಿಸಿದ ಮಹಿಳೆ
ಚಿರತೆ ಮೊದಲು ಆಕಾಶ್ ಮೇಲೆ ದಾಳಿ ಮಾಡಿದ್ದು, ಆತನ ತೊಡೆಯನ್ನು ಕಚ್ಚಿ, ಇನ್ನೊಂದು ಕಾಲಿಗೆ ಉಗುರು ಹಾಕಿದೆ. ನಂತರ ನಂದಿನಿ ಮೇಲೆ ಮುಗಿಬಿದ್ದಿದ್ದು, ಆಕೆಯ ತಲೆಗೆ ತೀವ್ರ ಗಾಯಗಳಾಗಿದ್ದು, ಪರಿಣಾಮ ಆಕೆಯ ತಲೆಬುರುಡೆಗೂ ಹಾನಿಯಾಗಿದೆ. ಘಟನೆಯಲ್ಲಿ ನಂದಿನಿ ಅವರಿಗೆ ಹೆಚ್ಚಿನ ಗಾಯಗಳಾಗಿವೆ. ಘಟನೆಯ ನಂತರ ಚಿರತೆ ಸ್ಥಳದಿಂದ ಕಾಡಿನತ್ತ ಓಡಿದೆ. ಗಾಯಾಳುಗಳನ್ನು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.