Asianet Suvarna News Asianet Suvarna News

ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಓಡಿಸಿದ ಮಹಿಳೆ

ಹಾಸನದ ಜಾವಗಲ್‌ ಗ್ರಾಮದ ನಿನ್ನೆ ರಾತ್ರಿ ವೇಳೆ ಕಾಡಂಚಿನ ಮನೆ ಬಾಗಿಲಿಗೆ ಬಂದ ಚಿರತೆಯನ್ನು ಮಹಿಳೆ ಬೀದಿ ನಾಯಿ ರೀತಿಯಲ್ಲಿ ಬೊಬ್ಬೆ ಹೊಡೆದು ಓಡಿಸಿದ್ದಾರೆ.

Hassan Javagal village leopard came to house door then woman drove animal sat
Author
First Published Jul 8, 2024, 2:52 PM IST

ಹಾಸನ (ಜು.08): ರಾಜ್ಯದಲ್ಲಿ ಕಾಡಂಚಿನ ಮನೆಗಳ ಮುಂದೆ ಕಟ್ಟಿಹಾಕಿರುವ ದನ ಕರುಗಳು ಹಾಗೂ ಸಾಕು ನಾಯಿಗಳನ್ನು ಹೊತ್ತೊಯ್ಯಲು ಬರುವ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಹಾಸನದಲ್ಲಿ ನಿನ್ನೆ ರಾತ್ರಿ ವೇಳೆ ಬಾಗಿಲಿಗೆ ಬಂದ ಚಿರತೆಯನ್ನು ಮಹಿಳೆಯೊಬ್ಬರು ಬೀದಿ ನಾಯಿಯ ರೀತಿಯಲ್ಲಿ ಓಡಿಸಿದ್ದಾರೆ.

ಕಾಡಿನ ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ ಸೇರಿದಂತೆ ಆನೆಗಳು ಕಾಡಂಚಿನ ವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ಮಾಡುವುದು ಹೆಚ್ಚಾಗಿದೆ.  ಗ್ರಾಮಗಳು, ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳ ಸಂಖ್ಯೆಯೂ ಹೆಚ್ಚಾಗಿತ್ತಿದೆ. ರಾತ್ರಿ ವೇಳೆ ಮನೆ ಬಾಗಿಲಿಗೆ ಬರುವ ಚಿರತೆಗಳ ಹಲವು ಸಿಸಿಟಿವಿ ವಿಡಿಯೋಗಳು ಕೂಡ ವೈರಲ್ ಆಗಿವೆ. ಚಿರತೆಗಳು ಹೆಚ್ಚಾಗಿ ಮನೆಯ ಮುಂದೆ ಕಾವಲಿಗಾಗಿ ಸಾಕಿದ ನಾಯಿಗಳನ್ನು ಹೊತ್ತುಯ್ಯವುದೇ ಅಧಿಕವಾಗಿದೆ. ಗ್ರಾಮೀಣರು ಚಿರತೆಗಳಿಗೆ ನಾಯಿ ಸಿಕ್ಕರೆ ತುಪ್ಪದೂಟ ಸಿಕ್ಕಂತೆ ಎಂದೂ ಹೇಳುತ್ತಾರೆ. ಜೊತೆಗೆ, ಚಿರತೆಗಳು ಇತ್ತೀಚೆಗೆ ಮನುಷ್ಯರ ಮೇಲೆ ದಾಳಿ ಮಾಡುವ ಪ್ರಕರಣಗಳೂ ಕಂಡುಬರುತ್ತಿವೆ.

ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!

ಹಾಸನ ಜಿಲ್ಲೆ  ಅರಸೀಕೆರೆ ತಾಲ್ಲೂಕಿನ ಜಾವಗಲ್ ಗ್ರಾಮದಲ್ಲಿ ಆಹಾರ ಅರಸಿ ಕಾಡಿನಿಂದ ಮನೆಯ ಬಳಿ ಬಂದಿದ್ದ ಚಿರತೆಯನ್ನು ನೋಡಿದ ಮಹಿಳೆ ಮೊಬೈಲ್‌ ಫೋನಿನಲ್ಲಿ ವಿಡಿಯೋ ಮಾಡುತ್ತಾ ಅದನ್ನು ಓಡಿಸಲು ಜೋರಾಗಿ ಕೂಗಾಡಿದ್ದಾರೆ. ಸಾಮಾನ್ಯವಾಗಿ ದನ ಕರುಗಳನ್ನು ಓಡಿಸಲು, ಬೀದಿ ನಾಯಿಗಳು ದಾಳಿ ಮಾಡುವ ವೇಳೆ ತಪ್ಪಿಸಿಕೊಳ್ಳಲು ಜೋರಾಗಿ ಕೂಗಿಕೊಳ್ಳುವುದು, ಬೊಬ್ಬೆ ಹೊಡೆಯುವ ಮೂಲಕ ದಾಳಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇಲ್ಲೊಬ್ಬ ಮಹಿಳೆ ಜೀವಕ್ಕೆ  ಚಿರತೆ ಕಂಡು ಕೂಗಾಡಿದ್ದಾರೆ. ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಬೊಬ್ಬೆ ಹೊಡೆದು ಓಡಿಸಿದ್ದಾರೆ. 

ಬೆಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಇನ್ನು ಮಹಿಳೆ ಜೋರಾಗಿ ಬೊಬ್ಬೆ ಹೊಡೆಯುತ್ತಾ ಕೋಲಿನಿಂದ ಹೊಡೆಯುವ ರೀತಿಯಲ್ಲಿ ಶಬ್ದ ಮಾಡಿದ್ದರಿಂದ ಚಿರತೆ ಗಾಬರಿಗೊಂಡು ಅಲ್ಲಿಂದ ಓಡು ಹೋಗಿದೆ. ಜಾವಗಲ್ ಗ್ರಾಮದ ಇಂದ್ರೇಶ್ ಎಂಬುವವರ ತೋಟದ ಮನೆಯ ಬಳಿ ನಿನ್ನೆ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಜಾವಗಲ್ ಹೊರವಲಯದ ನೇರ್ಲಿಗೆ-ಕಡೂರು ರಸ್ತೆಯಲ್ಲಿರುವ ಮನೆ ಇದಾಗಿದ್ದು, ಚಿರತೆ ಬಂದು ಓಡಿಹೋದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಆದರೆ, ಚಿರತೆ ಕಾಣಿಸಿಕೊಂಡಿರುವುದರಿಂದ  ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ.

Latest Videos
Follow Us:
Download App:
  • android
  • ios