ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ಮುಂದೆ ಶೋಕಿ ಅಲ್ಲ ಜಮ್ಮುಕಾಶ್ಮೀರದ ಯುವಜನತೆಗೆ ಲೆ.ಜ. ಪಾಂಡೆ ಎಚ್ಚರಿಕೆ 2021ರ ಜನವರಿಯಿಂದ ಈ ಜನವರಿವರೆಗೆ 216 ಉಗ್ರರ ಹತ್ಯೆ
ಶ್ರೀನಗರ : ಭಯೋತ್ಪಾದನೆಯು ಶೋಕಿ ಎಂದು ಜಮ್ಮುಕಾಶ್ಮೀರದ ಯುವಜನತೆ ತಿಳಿದಿದ್ದರೆ ಅದು ಖಂಡಿತ ಸಾಧ್ಯವಿಲ್ಲ. ಕಳೆದ ವರ್ಷ ಜನವರಿಯಿಂದ ಪ್ರಸಕ್ತ ಜನವರಿಯವರೆಗೆ ಒಟ್ಟು 216 ಉಗ್ರರನ್ನು ಸೇನೆ ಹೊಡೆದುರುಳಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಸೇನಾ ಕಮಾಂಡರ್ ಲೆ.ಜನರಲ್ ಡಿ.ಪಿ. ಪಾಂಡೆ (Lt. Gen. D.P. Pandey) ಖಡಕ್ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಉಪಟಳ ಕಂಡುಬಂದತೆಲ್ಲಾ ಸೇನೆ ಅದನ್ನು ನಿಗ್ರಹಿಸುತ್ತಾ ಬಂದಿದೆ ಹಾಗೂ ಉಗ್ರರು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳಲಾರಂಭಿಸಿದ್ದಾರೆ. ದೇಶಕ್ಕೆ ಸತ್ೊ್ರಜೆ ಆಗದೆ ಭಯೋತ್ಪಾದನೆಗೆ ಸೇರುತ್ತಾ ಹೋದರೆ ಅಂತಹ ಉಗ್ರರನ್ನು ನಿರ್ನಾಮ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
‘20ರಿಂದ 25 ವಯೋಮಾನದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದನೆಗೆ ಸೇರುವವರಾಗಿದ್ದಾರೆ. ಆದರೆ ಈಗ ಅವರಿಗೂ ಭಯೋತ್ಪಾದನಾ ಶೋಕಿಯಿಂದ ಜೀವ ಕಳೆದುಕೊಳ್ಳಬೇಕಾಗಿದೆ ಎಂದು ಅರಿವಾಗಿದೆ. ಪರಿಣಾಮವಾಗಿ ಭಯೋತ್ಪಾದನೆಗೆ ಸೇರುವ ಯುವಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ಪಾಂಡೆ ತಿಳಿಸಿದ್ಧಾರೆ.
Jammu and Kashmir 370ನೇ ವಿಧಿ ರದ್ದು ಬಳಿಕ 34 ಜನರಿಂದ ಕಾಶ್ಮೀರದಲ್ಲಿ ಆಸ್ತಿ ಖರೀದಿ!
ಕಾಶ್ಮೀರ: ಸೇನೆಯಿಂದ ಇಬ್ಬರು ಉಗ್ರರ ಎನ್‌ಕೌಂಟರ್
ಶ್ರೀನಗರ: ಜಮ್ಮು-ಕಾಶ್ಮೀರದ (Jammu and Kashmir) ಬಿಶೆಂಬರ್‌ನಗರದಲ್ಲಿ (Bishemberg) ಭಾನುವಾರ ಭಾರತೀಯ ಸೇನೆ ಹಾಗೂ ಲಷ್ಕರ್ ಎ ತೊಯ್ಬಾದ (Lashkar-e-Taiba) ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಏ.4ರಂದು ನಡೆದ ಸಿಆರ್‌ಪಿಎಫ್ (CRPF) ಯೋಧರ ಹತ್ಯೆ ಮಾಡಿದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭಾರತೀಯ ಸೇನೆ (Indian Army) ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ.
ಬಿಶೆಂಬರ್‌ನಗರದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಉಗ್ರರು (militants) ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಪ್ರತಿ ದಾಳಿ ಆರಂಭಿಸಿದ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಕಾಶ್ಮೀರ ಐಜಿಪಿ (Kashmir IGP) ವಿಜಯ್‌ಕುಮಾರ್ (Vijaykumar) ಈ ಕುರಿತು ಮಾಹಿತಿ ನೀಡಿ, ಹತ್ಯೆಯಾದ ಉಗ್ರರು ಏ.4ರಂದು ಜಮ್ಮುವಿನ ಮೈಸುಮಾ (Mysuma) ಪ್ರದೇಶದಲ್ಲಿ ಯೋಧರ ಮೇಲೆ ದಾಳಿ ನಡೆಸಿದ್ದು ಈ ವೇಳೆ ಒಬ್ಬ ಯೋಧ ಹುತಾತ್ಮರಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಓಮರ್ ಅಬ್ದುಲ್ಲಾಗೆ 5 ತಾಸು ಇಡಿ ವಿಚಾರಣೆ ಬಿಸಿ!
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಚ್ಛೇದ 370 ಬಳಿಕ ಭಾರತದ ವಿವಿಧ ಭಾಗದ ಒಟ್ಟು 34 ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 2019ಕ್ಕೂ ಮೊದಲು ಬೇರೆ ರಾಜ್ಯದವರು ಆಸ್ತಿಯನ್ನು ಖರೀದಿಸುವುದಕ್ಕೆ ನಿರ್ಬಂಧಿಸಲಾಗಿತ್ತು.
ಆದರೆ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸಿದ ಬಳಿಕ ಕಾಯಂ ನಿವಾಸಿಗಳಿಗೆ ಅಥವಾ ಬೇರೆ ಜನರಿಗೆ ಜಮೀನನ್ನು ಮಾರಾಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ ಕೃಷಿಯೇತರ ಕೈಗಾರಿಕಾ ಪ್ರದೇಶಗಳಿದ್ದು, ಅದನ್ನು ಯಾರು ಬೇಕಾದರೂ ಖರೀದಿಸಬಹುದೆಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು ಎಂದು ಅವರು ಹೇಳಿದರು. ಜಮ್ಮು ಹಾಗೂ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹಿಂಸಾತ್ಮಕ ಕೃತ್ಯಗಳಲ್ಲಿ ಇಳಿಕೆ ಕಂಡು ಬಂದಿದ್ದು, ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
