Asianet Suvarna News Asianet Suvarna News

ಓಮರ್‌ ಅಬ್ದುಲ್ಲಾಗೆ 5 ತಾಸು ಇಡಿ ವಿಚಾರಣೆ ಬಿಸಿ!

* 2010ರ ಜಮ್ಮು-ಕಾಶ್ಮೀರ ಬ್ಯಾಂಕ್‌ ಹಗರಣ ಕೇಸಲ್ಲಿ ಪ್ರಶ್ನೆ

* ಓಮರ್‌ ಅಬ್ದುಲ್ಲಾಗೆ 5 ತಾಸು ಇಡಿ ವಿಚಾರಣೆ ಬಿಸಿ

* ಪ್ರಕರಣದ ಆರೋಪಿ ಅಲ್ಲ: ಓಮರ್‌ ಅಬ್ದುಲ್ಲಾ

* ವಿರೋಧ ಪಕ್ಷ ಹತ್ತಿಕ್ಕಲು ತನಿಖಾ ಸಂಸ್ಥೆ ಬಳಕೆ: ಎನ್‌ಸಿ

ED questions Omar Abdullah in J and K Bank case NC says targeting Opposition pod
Author
Bangalore, First Published Apr 8, 2022, 9:50 AM IST

ನವದೆಹಲಿ(ಏ.08):  ಜಮ್ಮು-ಕಾಶ್ಮೀರ ಬ್ಯಾಂಕ್‌ ಕಟ್ಟಡವೊಂದನ್ನು ಖರೀದಿಸಿದ್ದ ಪ್ರಕರಣ ಸಂಬಂಧ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ದೆಹಲಿಯಲ್ಲಿ ಸತತ 5 ತಾಸುಗಳ ಕಾಲ ವಿಚಾರಣೆ ನಡೆಸಿತು. 12 ವರ್ಷಗಳ ಹಿಂದೆ ಬ್ಯಾಂಕ್‌ ಕಟ್ಟಡವೊಂದನ್ನು ಖರೀದಿಸಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಮುಖ್ಯಕಚೇರಿಗೆ ಆಗಮಿಸಿ ಓಮರ್‌ ಅಬ್ದುಲ್ಲಾ ಹೇಳಿಕೆಯನ್ನು ದಾಖಲಿಸಿದರು.

ಬಳಿಕ ಮಾತನಾಡಿದ ಒಮರ್‌ ಅಬ್ದುಲ್ಲಾ, ‘ಪ್ರಕರಣದಲ್ಲಿ ನಾನು ಆರೋಪಿ ಅಲ್ಲ. ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿತ್ತು. ನನಗೆಷ್ಟುಗೊತ್ತು ಅಷ್ಟುಉತ್ತರಿಸಿದ್ದೇನೆ. ಅಗತ್ಯ ಬಿದ್ದರೆ, ವಿಚಾರಣೆಗೆ ಕರೆದರೆ ಮುಂದೆಯೂ ಸಹಕಾರ ನೀಡುತ್ತೇನೆ. ಅವರು ನನ್ನ ಮೇಲೆ ಯಾವುದೇ ಆರೋಪ ಹೊರಿಸಿಲ್ಲ’ ಎಂದು ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ನ್ಯಾಷನಲ್‌ ಕಾನ್ಫರೆನ್ಸ್‌, ‘ ತನಿಖಾ ಸಂಸ್ಥೆಗಳ ದುರ್ಬಳಕೆ ಕೇಂದ್ರ ಸರ್ಕಾರದ ರೂಢಿಯಾಗಿದ್ದು, ಈ ನಿಟ್ಟಿನ ಇನ್ನೊಂದು ಹೆಜ್ಜೆ ಇದಾಗಿದೆ. ಅರ್ಥಪೂರ್ಣ ವಿರೋಧ ಪಕ್ಷದ ಅಸ್ತಿತ್ವ ಬಿಜೆಪಿಗೆ ಬೇಕಾಗಿಲ್ಲ. ಹೀಗಾಗಿ ಇ.ಡಿ, ಸಿಬಿಐ, ಎನ್‌ಐಎ, ಎನ್‌ಸಿಬಿ ಎಲ್ಲವನ್ನೂ ರಾಜಕೀಯ ಉದ್ದೇಶದಿಂದ ಬಳಸಿಕೊಳ್ಳುತ್ತಿದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

The Kashmir Files ಚಿತ್ರ ಎಲ್ರೂ ನೋಡಿ: ಬಾಲಿವುಡ್‌ ನಟ ಅಮೀರ್‌ ಖಾನ್‌

ಏನಿದು ಪ್ರಕರಣ?

2010ರಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ಮುಂಬೈನ ಬಾಂದ್ರಾ ಕುರ್ಲಾದಲ್ಲಿ ಆಕೃತಿ ಗೋಲ್ಡ… ಬಿಲ್ಡರ್ಸ್‌ನಿಂದ 172 ಕೋಟಿ ರುಪಾಯಿಗೂ ಅಧಿಕ ದರದಲ್ಲಿ ಕಟ್ಟಡವೊಂದನ್ನು ಖರೀದಿಸಿತ್ತು. 42,000 ಚದರ ಅಡಿ ಆಸ್ತಿಯನ್ನು 109 ಕೋಟಿ ರು.ಗೆ ಖರೀದಿಸಲು ಬ್ಯಾಂಕ್‌ ಅನುಮೋದಿಸಿತ್ತು. ಆದರೆ ಬಳಿಕ 65,000 ಚದರ ಅಡಿ ಆಸ್ತಿಯನ್ನು 172 ಕೋಟಿ ರುಪಾಯಿಗೆ ಖರೀದಿಸಲು ಸಮಿತಿ ಮತ್ತು ಹಣಕಾಸು ಸಂಸ್ಥೆಯ ಆಡಳಿತ ಮಂಡಳಿ ಅನುಮೋದನೆ ನೀಡಿತ್ತು. ಈ ಸಂಬಂಧ 2021ರಲ್ಲಿ ಬ್ಯಾಂಕ್‌ ಆಡಳಿತ ಮಂಡಳಿ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿದೆ.

ಸತ್ಯ ಮರೆ ಮಾಚಿ ಸುಳ್ಳಿನ ವೈಭವೀಕರಣ, ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ಧ ಓಮರ್ ಅಬ್ದುಲ್ಲಾ ಆಕ್ರೋಶ!

 

ಕಾಶ್ಮೀರ ಪಂಡಿತರ ಮೇಲೆ ನಡೆದ ನರಮೇಧದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. 1990ರಲ್ಲಿ ನಡೆದ ಘನಘೋರ ಘಟನೆ ಕುರಿತು ಬೆಳಕು ಚೆಲ್ಲುವ ಈ ಚಿತ್ರ ಇದೀಗ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇದೀಗ ಕಾಶ್ಮೀರ ಮಾಜಿ ಸಿಎಂ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷದ ಅಧ್ಯಕ್ಷ ಓಮರ್ ಅಬ್ದುಲ್ಲಾ ಚಿತ್ರದಲ್ಲಿ ಸುಳ್ಳು ಹೇಳಲಾಗಿದೆ ಎಂದಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಓಮರ್ ಅಬ್ದುಲ್ಲಾ, ದಿ ಕಾಶ್ಮೀರ ಫೈಲ್ಸ್ ಚಿತ್ರ ಸಾಕ್ಷ್ಯ ಚಿತ್ರ ಅಲ್ಲ ಎಂದಿದ್ದಾರೆ. ಇದು ಸುಳ್ಳಿನ ಕಂತೆ ಎಂದಿದ್ದಾರೆ. ಕಾಶ್ಮೀರ ಪಂಡಿತರ ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಆಗಿರಲಿಲ್ಲ. ಈ ವೇಳೆ ರಾಜ್ಯಪಾಲರ ಆಡಳಿತವಿತ್ತು. ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರವಿತ್ತು. ಈ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲವಿತ್ತು. ಆದರೆ ಈ ವಿವರ ಚಿತ್ರದಲ್ಲಿ ಮರೆ ಮಾಚಲಾಗಿದೆ ಎಂದು ಅಬ್ದುಲ್ಲಾ ಹೇಳಿದ್ದರೆ.

ಪಂಡಿತರನ್ನು ಕಗ್ಗೊಲೆ ಮಾಡಿದವನಿಗೆ ಹಸ್ತಲಾಘವ ಮಾಡಿದ್ದರು ಅಂದಿನ ಪ್ರಧಾನಿ..!

1900ರಲ್ಲಿ ಕಾಶ್ಮೀರ ಪಂಡಿತರ ಮೇಲೆ ದಾಳಿಯಾಗಿದೆ ಅನ್ನುವುದು ಸತ್ಯವಾದರೆ ವಿಷಾಧಿಸುತ್ತೇನೆ. ಆದರೆ ಕಣಿವೆ ರಾಜ್ಯದಲ್ಲಿ ಮುಸ್ಲಿಂರು ಬಲಿಯಾಗಿದ್ದಾರೆ. ಅವರ ಕುರಿತ ಒಂದು ವಾಕ್ಯವೂ ಚಿತ್ರದಲ್ಲಿಲ್ಲ. ಹೀಗಾಗಿ ದಿ ಕಾಶ್ಮೀರ ಚಿತ್ರ ಸತ್ಯಕ್ಕೂ ದೂರವಾಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಓಮರ್ ಅಬ್ದುಲ್ಲಾಗೂ ಮೊದಲು ಚತ್ತೀಸಘಡ ಸಿಎಂ, ಕಾಂಗ್ರೆಸ್ ನಾಯಕ ಭೂಪೇಶ್ ಬಾಘೆಲ್ ದಿ ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ದ ಅಸಮಾಧನ ವ್ಯಕ್ತಪಡಿಸಿದ್ದರು. ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಅರ್ಧಸತ್ಯ ಹೇಳಲಾಗಿದೆ. ಇದು ಅತ್ಯಂತ ಗಂಭೀರ ತಪ್ಪು. ಕೋಮು ಸೌಹಾರ್ಧತೆ ಬದಲು ಎರಡು ಹಿಂದೂ ಹಾಗೂ ಮುಸ್ಲಿಂ ಸಮದಾಯದಲ್ಲಿ ದ್ವೇಷದ ಭಾವನೆ ಹುಟ್ಟು ಹಾಕುತ್ತಿದೆ ಎಂದು ಬಾಘೆಲ್ ಹೇಳಿದ್ದರು.

Follow Us:
Download App:
  • android
  • ios