2019ಕ್ಕೂ ಮೊದಲು ಬೇರೆ ರಾಜ್ಯದವರು ಆಸ್ತಿಯನ್ನು ಖರೀದಿಸುವುದಕ್ಕೆ ನಿರ್ಬಂಧ ಆರ್ಟಿಕಲ್ 370 ರದ್ದತಿ ಬಳಿಕ ಇತರ ರಾಜ್ಯದವರಿಗೂ ಆಸ್ತಿ ಖರೀದಿಗೆ ಅವಕಾಶ ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಣೆ
ನವದೆಹಲಿ(ಮಾ.30): ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಚ್ಛೇದ 370 ಬಳಿಕ ಭಾರತದ ವಿವಿಧ ಭಾಗದ ಒಟ್ಟು 34 ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 2019ಕ್ಕೂ ಮೊದಲು ಬೇರೆ ರಾಜ್ಯದವರು ಆಸ್ತಿಯನ್ನು ಖರೀದಿಸುವುದಕ್ಕೆ ನಿರ್ಬಂಧಿಸಲಾಗಿತ್ತು.
ಆದರೆ ವಿಶೇಷ ಸ್ಥಾನಮಾನಗಳನ್ನು ರದ್ದುಗೊಳಿಸಿದ ಬಳಿಕ ಕಾಯಂ ನಿವಾಸಿಗಳಿಗೆ ಅಥವಾ ಬೇರೆ ಜನರಿಗೆ ಜಮೀನನ್ನು ಮಾರಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರರಿಗೆ ಮಾರಾಟ ಮಾಡಲು ಅವಕಾಶವಿಲ್ಲ. ಆದರೆ ಕೃಷಿಯೇತರ ಕೈಗಾರಿಕಾ ಪ್ರದೇಶಗಳಿದ್ದು, ಅದನ್ನು ಯಾರು ಬೇಕಾದರೂ ಖರೀದಿಸಬಹುದೆಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು ಎಂದು ಅವರು ಹೇಳಿದರು.
Article 370 Abrogation: 1,678 ವಲಸಿಗರು ಜಮ್ಮು ಕಾಶ್ಮೀರಕ್ಕೆ ವಾಪಸ್!
ಕಾಶ್ಮೀರದಲ್ಲಿ ಹಿಂಸೆ ಇಳಿಕೆ,ಹೂಡಿಕೆ ಪರಿಸರ ನಿರ್ಮಾಣ
ಜಮ್ಮು ಹಾಗೂ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹಿಂಸಾತ್ಮಕ ಕೃತ್ಯಗಳಲ್ಲಿ ಇಳಿಕೆ ಕಂಡುಬಂದಿದ್ದು, ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಉಗ್ರ ಕೃತ್ಯ ಇಳಿಕೆ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದತಿಯ ನಂತರದ 841 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಇಳಿಕೆ ಕಂಡಿದೆ. ರದ್ದತಿಗೆ ಮೊದಲಿನ ಇದೇ ಅವಧಿಯಲ್ಲಿ 843 ಪ್ರಕರಣಗಳು ದಾಖಲಾಗಿದ್ದಾರೆ, ನಂತರ 496 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ನಿತ್ಯಾನಂದ ರಾಯ್ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
Farm Laws Repeal: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಆರ್ಟಿಕಲ್ 370 ಮರುಸ್ಥಾಪನೆಗೆ ಆಗ್ರಹ!
2017ರ ಏ.16ರಿಂದ 2019 ಆ.04ರ ಅವಧಿಯಲ್ಲಿ 843 ಭಯೋತ್ಪಾದಕ ಕೃತ್ಯಗಳು ದಾಖಲಾಗಿದ್ದು, 86 ನಾಗರಿಕರು ಮತ್ತು 78 ಸೈನಿಕರು ಸಾವನ್ನಪ್ಪಿದ್ದರು. ಆದರೆ 2019ರ ಆ.5ರಿಂದ 2021ರ ನ.22ರ ಅವಧಿಯಲ್ಲಿ 496 ಪ್ರಕರಣಗಳು ದಾಖಲಾಗಿದ್ದು, 79 ನಾಗರಿಕರು ಮತ್ತು 45 ಸೈನಿಕರು ಸಾವನ್ನಪ್ಪಿದ್ದಾರೆ. ಇದು ಕಾಶ್ಮೀರದಲ್ಲಿ ಉಗ್ರ ದಾಳಿಗಳು ಕಡಿಮೆಯಾಗಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ 14 ಉಗ್ರರನ್ನು ಬಂಧಿಸಿದ್ದು, 165 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಿಂದ ಈ ವರ್ಷದ ಅಕ್ಟೋಬರ್‌ವರೆಗೆ 32 ಸೈನಿಕರು ಹಾಗೂ 19 ಜಮ್ಮು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ. 2018ರಲ್ಲಿ 143 ಒಳನುಸುಳುವಿಕೆ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 141, 2020ರಲ್ಲಿ 51, 2021ರಲ್ಲಿ 28 ಪ್ರಕರಣಗಳು ದಾಖಲಾಗಿವೆ ಎಂದು ರಾಯ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
2022ರ ಮೇ-ಜೂನ್‌ಗೆ ಕಾಶ್ಮೀರ ಚುನಾವಣೆ ಸಾಧ್ಯತೆ
ಮುಂದಿನ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ 2019ರ ಆ.5(ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ) ಬಳಿಕ ಇದೇ ಮೊದಲ ಬಾರಿಗೆ ವಿವಿಧ ರಾಜಕೀಯ ಪಕ್ಷಗಳು ಬೀದಿಗಿಳಿದು ಪ್ರಚಾರಕ್ಕೆ ಮುಂದಾಗಿವೆ.ಜಮ್ಮು-ಕಾಶ್ಮೀರವನ್ನು ಕಾಶ್ಮೀರ ಮತ್ತು ಲಡಾಖ್ ಎಂದು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದ ಬಳಿಕ ಕ್ಷೇತ್ರಗಳ ಮರುವಿಂಗಡಣೆ ಕುರಿತ ಕರಡು ವರದಿಯು ಸಿದ್ಧವಾಗಿದೆ. ಈ ವರದಿಯನ್ನು ಮೂವರು ಸಂಸದರು, ಬಿಜೆಪಿಯ ಜಿತೇಂದ್ರ ಸಿಂಗ್ ಮತ್ತು ಜುಉಗಲ್ ಕಿಶೋರ್ ಶರ್ಮಾ ಅವರ ಗಮನಕ್ಕೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಎನ್‌ಸಿ, ಪಿಡಿಪಿ, ಬಿಜೆಪಿ, ಕಾಂಗ್ರೆಸ್, ಜೆಕೆಎನ್‌ಪಿಪಿ ಸೇರಿದಂತೆ ಇನ್ನಿತರ ಪಕ್ಷಗಳು ಸಣ್ಣ ಸಭೆ ಮತ್ತು ರಾರಯಲಿಗಳನ್ನು ನಡೆಸುವ ಮುಖಾಂತರ ಜನ ಸಂಪರ್ಕದ ಕಸರತ್ತು ನಡೆಸುತ್ತಿವೆ.
