ಸುಷ್ಮಾ ಸ್ವರಾಜ್ ಹುಟ್ಟುಹಬ್ಬ: ಹಳೆ ಫೋಟೋ ಪೋಸ್ಟ್ ಮಾಡಿ ಅಮ್ಮನ ನೆನೆದ ಅಪ್ಪ ಮಗಳು

ಇಂದು ದೇಶ ಕಂಡ ಮತ್ತೊಬ್ಬ ಧೀಮಂತ ಮಹಿಳಾ ನಾಯಕಿ ದಿವಂಗತ ಸುಷ್ಮಾ ಸ್ವರಾಜ್, ಅವರ 71ನೇ ಜನ್ಮ ದಿನವಾಗಿದ್ದು, ಅವರ ಮಗಳು ಬಾನ್ಸೂರಿ ಹಳೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಜೊತೆ ಭಾವುಕ ಬರಹದೊಂದಿಗೆ ಅಮ್ಮನನ್ನು ನೆನೆದಿದ್ದಾರೆ.

Late BJP Leader Sushma Swaraj 71st Birth Anniversary daughter and husband remember her with emotional write up akb

ನವದೆಹಲಿ: ಇಂದು ದೇಶ ಕಂಡ ಮತ್ತೊಬ್ಬ ಧೀಮಂತ ಮಹಿಳಾ ನಾಯಕಿ ದಿವಂಗತ ಸುಷ್ಮಾ ಸ್ವರಾಜ್, ಅವರ 71ನೇ ಜನ್ಮ ದಿನವಾಗಿದ್ದು, ಅವರ ಮಗಳು ಬಾನ್ಸೂರಿ ಹಳೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಜೊತೆ ಭಾವುಕ ಬರಹದೊಂದಿಗೆ ಅಮ್ಮನನ್ನು ನೆನೆದಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಮಾಜಿ  ಸಚಿವೆ ಹಾಗೂ ಬಿಜೆಪಿಯ ಪ್ರಶ್ನಾತೀತ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ (Sushma Swaraj) ಅವರು ಅಗಲಿ ಮೂರುವರೇ ವರ್ಷಗಳೇ ಕಳೆದಿದ್ದರೂ,  ಕೇವಲ ಭಾರತದಲ್ಲಿರುವವರೂ ಮಾತ್ರವಲ್ಲದೇ ಜಗತ್ತಿನೆಲ್ಲೆಡೆ ಹಲವು ಭಾರತೀಯರು ಅವರನ್ನು ಇಂದಿಗೂ ಸ್ಮರಿಸುತ್ತಿದ್ದಾರೆ. 2019ರ ಆಗಸ್ಟ್ 6 ರಂದು ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದ್ದರು. 

ಈಗ ಅವರ ಪುತ್ರಿ ಬಾನ್ಸೂರಿ ಸ್ವರಾಜ್ (Bansuri Swaraj) ಅವರು ತಮ್ಮ ತಾಯಿಯನ್ನು ಅವರ ಜನ್ಮದಿನದಂದು ನೆನೆದು ಟ್ವಿಟ್ಟರ್‌ನಲ್ಲಿ ಪೋಸ್ಟೊಂದನ್ನು ಹಾಕಿದ್ದಾರೆ. ಪ್ರೀತಿಯ ಅಮ್ಮನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ನಾನು ನಿಮ್ಮನ್ನೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ವರ್ಣಿಸಲು ಪದಗಳು ಸಾಲದು. ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ನೀವು ನೀಡಿದ ಶಿಕ್ಷಣ ಸಂಸ್ಕಾರ ಎಲ್ಲವೂ ಸದಾ ನನ್ನೊಂದಿಗಿದ್ದು, ನನ್ನ ಹಾದಿಯನ್ನು ಸುಗಮಗೊಳಿಸುತ್ತಿದೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮ ಎಂದು ಬರೆದುಕೊಂಡಿದ್ದಾರೆ ಮಗಳು ಬಾನ್ಸೂರಿ. 2.5 ಲಕ್ಷಕ್ಕೂ ಹೆಚ್ಚು ಜನರು ಈ ಟ್ವಿಟ್‌ಗೆ ಲೈಕ್ ಮಾಡಿದ್ದು, ಅಗಲಿದ ನಾಯಕಿಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. 

 

ಮಂಗಳ ಗ್ರಹದಲ್ಲಿ ಸಿಲುಕಿದ್ರೂ ಭಾರತ ನಿಮ್ಮನ್ನು ರಕ್ಷಿಸುತ್ತೆ: ಸುಷ್ಮಾ ಸ್ವರಾಜ್ ಮಾಡಿದ್ದ ಟ್ವೀಟ್ ವೈರಲ್!

ಹಾಗೆಯೇ ಸುಷ್ಮಾ ಸ್ವರಾಜ್ ಪತಿ, ಸ್ವರಾಜ್ ಕೂಡ ಪತ್ನಿಯ ಜನ್ಮದಿನದಂದು ನೆನೆದುಕೊಂಡು ಭಾವುಕವಾದ ಪೋಸ್ಟ್ ಮಾಡಿದ್ದಾರೆ. 'ತುಮ್ ನಾ ಜಾನೆ ಕಿಸ್ ಜಹಾನ್ ಮೇ ಖೋ ಗಯೇ ಹಮ್ ಭಾರಿ ದುನಿಯಾ ಮೇ ತನ್ಹಾ ಹೋ ಗಯೇ' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅಂದರೆ ನೀನು ಎಲ್ಲಿ ಕಳೆದು ಹೋದೆಯೇ ಗೊತ್ತಿಲ್ಲ, ಆದರೆ ನಾವು ಇಡೀ ಜಗತ್ತಿನಲ್ಲಿ ಒಂಟಿಯಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.  ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ಅನೇಕ  ಹಿರಿಯ ನಾಯಕರು ಸುಷ್ಮಾ ಸ್ವರಾಜ್ ಅವರನ್ನು ಅವರ ಜನ್ಮ ದಿನದಂದು ನೆನಪು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್  ಮಾಡಿದ್ದಾರೆ. 

ಸುಷ್ಮಾ ಸ್ವರಾಜ್ ಪುಣ್ಯತಿಥಿ, ವಿರೋಧಿಗಳೇ ತಲೆಬಾಗಿದ, ಭಾರತದ ಅತ್ಯಂತ ಪ್ರೀತಿಯ ರಾಜಕಾರಣಿಗೆ ಗೌರವ ನಮನ!

ಸುಷ್ಮಾ ಸ್ವರಾಜ್ ಅವರು 2014ರಿಂದ 2019ರವರೆಗೆ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಅಧಿಕಾರವಧಿಯ ಉದ್ದಕ್ಕೂ ಸುಷ್ಮಾಜೀ ಅವರು ಓರ್ವ ಪ್ರಬಲ ನಾಯಕಿಯಾಗಿ ದೇಶದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು.  ಅವರ ಬುದ್ಧಿವಂತಿಕೆ ಚಾಣಾಕ್ಷತನ ವಿದೇಶಾಂಗ ವ್ಯವಹಾರದಲ್ಲಿ ಭಾರತದ ಸ್ಥಾನಮಾನವನ್ನು ಸಧೃಡಗೊಳಿಸಿತ್ತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ಅವರ ವ್ಯವಹಾರಿಕ ಜ್ಞಾನ ದೇಶದ ಹಾಗೂ ಜಾಗತಿಕ ರಾಜಕಾರಣದಲ್ಲಿ ಅವರನ್ನು ಗುರುತಿಸುವಂತೆ ಮಾಡಿತು.  ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವ್ಯವಹರಿಸುವ ಮೂಲಕವೇ ವಿದೇಶದಲ್ಲಿ ಸಂಕಷ್ಟಕ್ಕೊಳಗಾದ ಅನೇಕರಿಗೆ ನೆರವು ನೀಡುವ ಮೂಲಕ ಅವರು ಮತ್ತಷ್ಟು ಜನ ಪ್ರೀತಿಗೆ ಪಾತ್ರರಾದರು. 

1952ರ ಫೆಬ್ರವರಿ 14 ರಂದು ಹರ್ಯಾಣದ (Haryana) ಅಂಬಾಲಾದಲ್ಲಿ ಮಾಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಷ್ಮಾ ಸ್ವರಾಜ್ , ನಂತರ ಚಂಢೀಗಡದ ಪಂಜಾಬ್ ವಿವಿಯಲ್ಲಿ (Punjab VV) ಶಿಕ್ಷಣ ಪೂರ್ಣಗೊಳಿಸಿ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವೃತ್ತಿ ಶುರು ಮಾಡಿದ್ದರು. ಎಬಿವಿಪಿ (ABVP) ಮೂಲಕ ರಾಜಕೀಯಕ್ಕೆ ಬಂದ ಅವರು ನಂತರ 1977ರಲ್ಲಿ ಬಿಜೆಪಿಯಿಂದ ಹರ್ಯಾಣದ ವಿಧಾನಸಭೆಗೆ ಸ್ಪರ್ಧಿಸಿ ತಮ್ಮ 25ರ ಹರೆಯದ್ಲಲಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ನಂತರ 2009ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಅವರು 2014ರಲ್ಲಿ ಮತ್ತೆ ಗೆದ್ದು ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.

 

ವಿದೇಶದಲ್ಲಿ ಮೃತರಾದ ಭಾರತೀಯರ ಶವ ತರುವುದರಿಂದ ಹಿಡಿದು ವಿದೇಶದಲ್ಲಿ ಅಥವಾ ಭಾರತದಲ್ಲಿ ಚಿಕಿತ್ಸೆ ಪಡೆಯಲು ವೀಸಾ ಪ್ರಕ್ರಿಯೆ ಸುಲಭಗೊಳಿಸುವವರೆಗೆ ಹಲವು ಕುಟುಂಬಗಳಿಗೆ ನೆರವಾಗುವ ಮೂಲಕ ಸುಷ್ಮಾ ಸ್ವರಾಜ್ ಭಾರತೀಯರ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. 

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ, 25 ವರ್ಷ ಹಿಂದಿನ ಘಟನೆಯನ್ನು ಟ್ವೀಟ್ ಮಾಡಿದ ಮೋದಿ, ಧನ್ಯವಾದ ಎಂದ ಮಗಳು!

Latest Videos
Follow Us:
Download App:
  • android
  • ios