Asianet Suvarna News Asianet Suvarna News

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ, 25 ವರ್ಷ ಹಿಂದಿನ ಘಟನೆಯನ್ನು ಟ್ವೀಟ್ ಮಾಡಿದ ಮೋದಿ, ಧನ್ಯವಾದ ಎಂದ ಮಗಳು!

* ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಜನ್ಮದಿನ

* 25 ವರ್ಷ ಹಳೇ ಘಟನೆ ನೆನಪಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

* ಮೋದಿ ಟ್ವೀಟ್ ನೋಡಿ ಧನ್ಯವಾದ ಎಂದ ಮಗಳು ಬಾನ್ಸುರಿ

PM Modi pays tribute to Sushma Swaraj on birth anniversary recalls how his mother named family member after her pod
Author
Bangalore, First Published Feb 15, 2022, 3:38 PM IST

ನವದೆಹಲಿ(ಫೆ.15): ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, 25 ವರ್ಷಗಳ ಹಿಂದಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ಸುಷ್ಮಾ ಜಿ ಅವರನ್ನು ಭೇಟಿಯಾದ ನಂತರ, ತನ್ನ ತಾಯಿ ಸುಮಾರು 25 ವರ್ಷಗಳ ಹಿಂದೆ ಕುಟುಂಬದಲ್ಲಿ ಜನಿಸಿದ ಮಗಳಿಗೆ ಅವರ ಹೆಸರನ್ನು ಇಡಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಈ ವಿಚಾರ ನೆನಪಿಟ್ಟು ದಿವಂಗತ ನಾಯಕಿಗೆಗೆ ಗೌರವ ಸಲ್ಲಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರೇ, ನನ್ನ ತಾಯಿ ಸುಷ್ಮಾ ಸ್ವರಾಜ್‌ ಜನ್ಮದಿನದಂದು ಅವರನ್ನು ನೆನಪಿಸಿಕೊಂಡು ಈ ವಿಚಾರ ಹಂಚಿಕೊಂಡಿದ್ದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞಳಾಗಿದ್ದೇನೆ ಎಂದು ಬರೆದಿದ್ದಾರೆ.

ಸುಷ್ಮಾ ಜೀ ಅವರನ್ನು ಭೇಟಿಯಾದ ನಂತರ ತಾಯಿ ತಿಳಿಸಿದ್ದ ನಿರ್ಧಾರ ಇಂದಿಗೂ ನೆನಪಿದೆ

ಮೋದಿ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಈ ಬಗ್ಗೆ ಬರೆದಿದ್ದು,  ಇದೀಗ ನಾನು ರ್ಯಾಲಿ ಮುಗಿಸಿ ಜಲಂಧರ್‌ನಿಂದ ಹಿಂತಿರುಗುತ್ತಿದ್ದೇನೆ. ಇಂದು ಸುಷ್ಮಾ ಅವರ ಜನ್ಮದಿನ. ಥಟ್ಟನೆ ಅವರಿಗೆ ಸಂಬಂಧಿಸಿದ ಒಂದು ಹಳೆಯ ಘಟನೆ ನೆನಪಾಯಿತು, ಹಾಗಾಗಿ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದುಕೊಂಡೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಬಿಜೆಪಿಯಲ್ಲಿ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದಾಗ ಮತ್ತು ಸುಷ್ಮಾ ಜಿ ಗುಜರಾತ್‌ನಲ್ಲಿ ಚುನಾವಣಾ ಪ್ರವಾಸದಲ್ಲಿದ್ದಾಗ. ನನ್ನ ಗ್ರಾಮವಾದ ವಡ್ನಗರ ಅಲ್ಲಿಗೆ ಹೋಗಿ ನನ್ನ ತಾಯಿಯನ್ನೂ ಭೇಟಿಯಾದರು. ಆ ಸಮಯದಲ್ಲಿ ನಮ್ಮ ಕುಟುಂಬದಲ್ಲಿ ನನ್ನ ಸೋದರಳಿಯನಿಗೆ ಮಗಳು ಜನಿಸಿದಳು. ಜ್ಯೋತಿಷಿಗಳು ನಕ್ಷತ್ರ ನೋಡಿದ ನಂತರ ಮಗುವಿಗೆ ಯಾವ ಹೆಸರು ಇಡಬೇಕೆಂದು ಸೂಚಿಸಿದ್ದರು. ಅವರ ಮಾತಿನಂತೆ ನಡೆಯೋಣ ಎಂದು ಕುಟುಂಬಸ್ಥರೂ ನಿರ್ಧರಿಸಿದ್ದರು. ಆದರೆ ಸುಷ್ಮಾ ಜಿ ಅವರನ್ನು ಭೇಟಿಯಾದ ನಂತರ, ನನ್ನ ತಾಯಿ ಮಗಳಿಗೆ ಸುಷ್ಮಾ ಎಂದು ಹೆಸರಿಸುವುದಾಗಿ ಹೇಳಿದರು. ನನ್ನ ತಾಯಿ ಹೆಚ್ಚು ವಿದ್ಯಾವಂತರಲ್ಲ ಆದರೆ ಅವರು ತುಂಬಾ ಆಧುನಿಕ ಆಲೋಚನೆಗಳನ್ನು ಹೊಂದಿದ್ದರು ಮತ್ತು ಆ ಸಮಯದಲ್ಲಿ ಅವರು ಎಲ್ಲರಿಗೂ ನಿರ್ಧಾರವನ್ನು ಉಚ್ಚರಿಸಿದ ರೀತಿ, ಅದು ನನಗೆ ಇಂದಿಗೂ ನೆನಪಿದೆ. ಇಂದು ಅವರ ಜನ್ಮದಿನದಂದು ಸುಷ್ಮಾ ಜಿ ಅವರಿಗೆ ನಮನಗಳು! ಎಂದಿದ್ದಾರೆ.

2019 ರಲ್ಲಿ ನಿಧನರಾದರು

ಸುಷ್ಮಾ ಸ್ವರಾಜ್ ಅವರು ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಅವರು 2019 ರಲ್ಲಿ 67 ನೇ ವಯಸ್ಸಿನಲ್ಲಿ ನಿಧನರಾದರು. ಸುಷ್ಮಾ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾಗ ಹೆಚ್ಚು ಸಹಾಯ ಮಾಡಿದ ಸಚಿವೆ ಎಂದು ಹೆಸರಾಗಿದ್ದಾರೆ. ಟ್ವೀಟರ್‌ ಮೂಲಕವೇ ಅವರು ವಿದೇಶದಲ್ಲಿ ಸಿಕ್ಕಿಬಿದ್ದ ಎಲ್ಲರಿಗೂ ಸಹಾಯ ಮಾಡಿದ್ದಾರೆ. ಅವರ ಈ ನಡೆ ಬಳಿಕವೇ ಮೋದಿ ಸರ್ಕಾರದ ಅನೇಕ ಮಂತ್ರಿಗಳು ಅವರಂತೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾದರು.

Follow Us:
Download App:
  • android
  • ios