Asianet Suvarna News Asianet Suvarna News

ಹೊಸ ಮೈಲಿಗಲ್ಲು; 40 ಕೋಟಿ ಗಡಿ ದಾಟಿದ ಭಾರತದ ಲಸಿಕಾ ಅಭಿಯಾನ!

  • ಕೊರೋನಾ ವಿರುದ್ಧ ಭಾರತದ ಹೋರಾಟ ಮತ್ತಷ್ಟು ಚುರುಕು
  • ಲಸಿಕಾ ಅಭಿಯಾನ ಮೂಲಕ 40 ಕೋಟಿ ಡೋಸ್ ನೀಡಿದ ಭಾರತ 
  • ಭಾರತದ ಕೋವಿಡ್ ಚೇತರಿಕೆ ಪ್ರಮಾಣ ಶೇ.97.31ಕ್ಕೆ ಏರಿಕೆ
     
Landmark achievement India cumulative corona Vaccination Coverage surpassed 40 crore ckm
Author
Bengaluru, First Published Jul 18, 2021, 7:18 PM IST

ನವದೆಹಲಿ(ಜು.18): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಪರಿಣಾಮ ಇದೀಗ ಭಾರತ ಬರೋಬ್ಬರಿ 40 ಕೋಟಿ ಡೋಸ್ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆ 40,49,31,715 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 51,01,567 ಡೋಸ್ ಲಸಿಕೆ ಹಾಕಲಾಗಿದೆ.

ಭಾರತದ ಕೋವಿಶೀಲ್ಡ್ ಲಸಿಕೆಗೆ 16 ದೇಶಗಳ ಮಾನ್ಯತೆ, ಪ್ರಯಾಣಕ್ಕಿಲ್ಲ ಸಮಸ್ಯೆ!

2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕಾ ಕಾರ್ಯಕ್ರಮದ ಹೊಸ ಹಂತ ಆರಂಭವಾಗಿದೆ. ಸಾಂಕ್ರಾಮಿಕ ಆರಂಭವಾದ ನಂತರ ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,02,69,796 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 42,004 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆಯ ಪ್ರಮಾಣ ಶೇ.97.31ಕ್ಕೆ ಏರಿಕೆಯಾಗಿದೆ. 

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,157 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸತತ 21 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ. 

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 4,22,660ರಲ್ಲಿದೆ ಮತ್ತು ಇದು ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.1.36ರಷ್ಟಾಗುತ್ತದೆ. ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,36,709 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 44.39 ಕೋಟಿ(44,39,58,663) ಪರೀಕ್ಷೆಗಳನ್ನು ನಡೆಸಲಾಗಿದೆ. 

ದೇಶದಲ್ಲಿ ಕೋವಿಡ್ ಕೇಸ್ ಇಳೀತಿಲ್ಲ : ಇದು ಎಚ್ಚರಿಕೆ ಗಂಟೆ

ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.2.08ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಇಂದು 2.13ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 27 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 41 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.

Follow Us:
Download App:
  • android
  • ios