ಭಾರತದ ಕೋವಿಶೀಲ್ಡ್ ಲಸಿಕೆಗೆ 16 ದೇಶಗಳ ಮಾನ್ಯತೆ, ಪ್ರಯಾಣಕ್ಕಿಲ್ಲ ಸಮಸ್ಯೆ!
- ಕೊರೋನಾ ಲಸಿಕೆಗೆ ಕೋವಿಶೀಲ್ಡ್‌ಗೆ 16 ದೇಶಗಳಿಂದ ಗ್ರೀನ್ ಸಿಗ್ನಿಲ್
- ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 16 ದೇಶಗಳ ಭೇಟಿ ಮುಕ್ತ ಅವಕಾಶ
- ಸಂತಸ ಹಂಚಿಕೊಂಡು ಸೀರಂ ಸಂಸ್ಥೆ CEO ಆದರ್ ಪೂನಾವಲ್ಲ
ಪುನಾ(ಜು.17): ಭಾರತದ ಸೀರಂ ಸಂಸ್ಥೆಯ ಕೋವಿಡ್ ಲಸಿಕೆ ಕೋವಿಶೀಲ್ಡ್‌ಗೆ ಇದೀಗ ಒಟ್ಟು 16 ಯೂರೋಪಿಯನ್ ರಾಷ್ಟ್ರಗಳು ಮಾನ್ಯತೆ ನೀಡದೆ. ಇದರಿಂದ ಪ್ರಯಾಣಕರಿಗೆ ಯಾವುದೇ ಸಮಸ್ಯೆ ಇಲ್ಲದೆ 16 ರಾಷ್ಟ್ರಗಳಿಗೆ ಪ್ರಯಾಣ ಮಾಡಬುಹುದಾಗಿದೆ. 16 ಯುರೋಪಿಯನ್ ರಾಷ್ಟ್ರಗಳು ಈಗ ಕೋವಿಶೀಲ್ಡ್ ಅನ್ನು ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರವೇಶಕ್ಕಾಗಿ ಗುರುತಿಸಿವೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.
ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್: ಭಾರತೀಯರ ಪ್ರಯಾಣಕ್ಕೆ ತೊಡಕಿಲ್ಲ!
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡನ್ನೂ ಗುರುತಿಸಲು ಭಾರತೀಯ ಸರ್ಕಾರವು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿತ್ತು. ಲಸಿಕೆ ಫಲಿತಾಂಶ ಆಧರಿಸಿ ಯುರೋಪಿಯನ್ ರಾಷ್ಟ್ರಗಳು ಭಾರತದ ಲಸಿಕೆಗೆ ಪಡೆದವರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಉಚಿತ ವಾಕ್ಸಿನ್ ಘೋಷಣೆ ಬೆನ್ನಲ್ಲೇ ಮಹತ್ವದ ಹೆಜ್ಜೆ; 44 ಕೋಟಿ ಲಸಿಕೆಗೆ ಆರ್ಡರ್!
ಜುಲೈ 1 ರಿಂದ ಯುರೋಪಿಯನ್ ಯೂನಿಯನ್ (EU) ಸದಸ್ಯ ರಾಷ್ಟ್ರಗಳು ಪ್ರಯಾಣಿಸಲು ಗ್ರೀನ್ ಪಾಸ್ ಪರಿಚಯಿಸಿತು. ಈ ಗ್ರೀನ್ ಪಾಸ್ ಪಡೆಯಲು ಫೈಜರ್, ಆಸ್ಟ್ರಜೆನಿಕಾ ಸೇರಿದಂತೆ ಕೆಲ ಲಸಿಕೆ ಪಡೆದವರಿಗೆ ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಕೇಂದ್ರ ಸರ್ಕಾರ EU ಮನವಿ ಮಾಡಿತ್ತು. ಬಳಿಕ ಭಾರತದ ಲಸಿೆ ಫಲಿತಾಂಶ ಆಧರಿಸಿ EU ರಾಷ್ಟ್ರಗಳು ತಮ್ಮ ನಿಲುವು ಬದಲಿಸಿತು.
ಕೋವಿಶೀಲ್ಡ್ ಗ್ರೀನ್ ಸಿಗ್ನಲ್ ನೀಡಿದ16 ದೇಶಗಳು
ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಫಿನ್‌ಲ್ಯಾಂಡ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್‌ಲ್ಯಾಂಡ್, ಐರ್ಲೆಂಡ್, ಲಾಟ್ವಿಯಾ, ನೆದರ್‌ಲ್ಯಾಂಡ್, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್ ಈಗ ಕೋವಿಶೀಲ್ಡ್ ಅನ್ನು ಗುರುತಿಸುವ 16 ದೇಶಗಳಾಗಿವೆ. ಈ ಪೈಕಿ 13 ರಾಷ್ಟ್ರಗಳು ಯುರೋಪಿಯನ್ ಯೂನಿಯನ್ ಸದಸ್ಯತ್ವ ರಾಷ್ಟ್ರಗಳಾಗಿವೆ.