ಜಾರ್ಖಂಡ್(ಮಾ.21): ನಿಲ್ದಾಣದಿಂದ ರೈಲು ಚಲಿಸುತ್ತಿದೆ. ಈ ವೇಳೆ ಇಬ್ಬರು ಪ್ರಯಾಣಿಕರು ನಿಲ್ದಾಣ ಹಾಗೂ ರೈಲು ಹತ್ತುವಾಗ ಇರುವ ಅಂತರದೊಳಗೆ ಬಿದ್ದಿದ್ದಾರೆ. ಆದರೆ RPF ಮಹಿಳಾ ಪೇದೆ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ಇಬ್ಬರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. 

ಅಬ್ಬಬ್ಬಾ! 35ಕಿ. ಮೀ. ನಷ್ಟು ಹಿಂದಕ್ಕೋಡಿದ ರೈಲು, ವೈರಲ್ ಆಯ್ತು ವಿಡಿಯೋ!

ಈ ಘಟನೆ ನಡೆದಿರುವುದು ಜಾರ್ಖಂಡ್‌ನ ಟಾಟಾನಗರ ರೈಲು ನಿಲ್ದಾಣದಲ್ಲಿ. ರೈಲು ಹಾಗು ನಿಲ್ದಾಣ ನಡುವಿನ ಅಂತರಕ್ಕೆ ಇಬ್ಬರು ಪ್ರಯಾಣಿಕರು ಕುಸಿದಿದ್ದಾರೆ. ಈ ವೇಳೆ ಇಬ್ಬರನ್ನು ಹಿಡಿದೆಳೆದ ಮಹಿಳಾ ಪೇದೆ ಪ್ರಾಣ ಉಳಿಸಿದ್ದಾರೆ. ಘಟನೆ ನೋಡಿದ ಮತ್ತೊರ್ವ ಮಹಿಳಾ ಪೇದೆ ಚಲಿಸುತ್ತಿರುವ ರೈಲಿನಿಂದ ಜಿಗಿದು ರಕ್ಷಣೆಗೆ ಧಾವಿಸಿದ್ದಾರೆ.

ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!.

ಘಟನೆ ವಿವರ:

ಟಾಟಾ ನಗರ ರೈಲು ನಿಲ್ದಾಣದಲ್ಲಿ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಇಳಿಯಲು ಪ್ರಯತ್ನಿದ ಮಹಿಳೆಗೆ ಕುಟಂಬಸ್ಥರು ಸಹಾಯ ಮಾಡಿದ್ದಾರೆ. ಆದರೆ ಇಬ್ಬರು ರೈಲು ಹಾಗೂ ನಿಲ್ದಾಣದ ಅಂತರದೊಳಕ್ಕೆ ಬಿದ್ದಿದ್ದಾರೆ. ಆದರೆ ಮಹಿಳಾ ಪೊಲೀಸ್ ಇಬ್ಬರನ್ನು ಹಿಡಿದೆಳೆದು ರಕ್ಷಿಸಿದ್ದಾರೆ.