ವಿಶ್ವದ ಅತೀ ಎತ್ತರದ ರೈಲು ಸೇತುವೆ ಕಮಾನು ಕಾಮಗಾರಿ ಪೂರ್ಣ; ಹೆಚ್ಚಾಯ್ತು ಕಾಶ್ಮೀರದ ಸೌಂದರ್ಯ!
ವಿಶ್ವದ ಅತೀ ಎತ್ತರದ ರೈಲು ಸೇತುವೆ ಅನ್ನೋ ದಾಖಲೆಯ ಬರೆಯಲು ಭಾರತ ಸಜ್ಜಾಗಿದೆ. ಕಾಶ್ಮೀರದ ಚೆನಾಬ್ ನದಿ ದಂಡೆ ಮೇಲೆ ನಿರ್ಮಿಸಲಾಗುತ್ತಿರುವ ಈ ಸೇತುವೆ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ ಎತ್ತರವಿದೆ. ಇದೀಗ ಈ ಸೇತುವೆಯ ಕಮಾನು ಕಾಮಗಾರಿ ಪೂರ್ಣಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಾಶ್ಮೀರ ಕಣಿವೆ ಸಂಪರ್ಕ ಕಲ್ಪಿಸಬಲ್ಲ ಭಾರತದ ಅತೀ ದೊಡ್ಡ ರೈಲು ಯೋಜನೆ ಕಾಮಾಗಾರಿ ಪ್ರಗತಿಯಲ್ಲಿದೆ. ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ರೈಲು ಸೇತುವೆ ವಿಶ್ವದ ಅತೀ ಎತ್ತರದ ರೈಲು ಸೇತುವೆಯಾಗಿದೆ. ಕಾರಣ ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ ಎತ್ತರವಿದೆ. ಇದೀಗ ಈ ಸೇತುವೆ ಕಮಾನು ಕಮಾಗಾರಿ ಪೂರ್ಣಗೊಂಡಿದೆ.
ಈ ಸೇತುವೆ 359 ಮೀಟರ್ ಎತ್ತರವಿದೆ. ಅಂದರೆ ಐಫೆಲ್ ಟವರ್‌ಗಿಂತ 50 ಮೀಟರ್ ಎತ್ತರವಿದೆ. ಇತ್ತೀಚೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟರ್ ಮೂಲಕ ರೈಲ್ವೇ ಸೇತುವೆ ಕಾಮಗಾರಿ ಕುರಿತ ವಿಡಿಯೋ ಹಂಚಿಕೊಂಡಿದ್ದರು. ಇಷ್ಚೇ ಅಲ್ಲ ಇದು ಎಂಜಿನಿಯರಿಂಗ್ ಮೈಲಿಗಲ್ಲು ಎಂದು ಬಣ್ಣಿಸಿದ್ದರು.
ಈ ಸೇತುವ ಕಬ್ಬಿಣದ ಕಮಾನು ಮಾಡಲಾಗಿದ್ದು, ಅದರ ಮೇಲ ಸೇತುವೆ ನಿರ್ಮಾಣವಾಗಲಿದೆ. ಇದೀಗ ಎರಡು ಬದಿಯನ್ನು ಸಂಪರ್ಕಿಸಬಲ್ಲ ಕಮಾನು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಇದರ ಮೇಲೆ ಸೇತುವೆ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿದೆ. ಕಮಾನು ನಿರ್ಮಾಣ ಅತ್ಯಂತ ಸವಾಲಿನಿಂದ ಕೂಡಿತ್ತು. ಇನ್ನೊಂದು ವರ್ಷದಲ್ಲಿ ಸೇತುವೆ ನಿರ್ಮಾಣ ಪೂರ್ಣಗಲೊಳ್ಳಲಿದೆ ಎಂದು ಭಾರತೀಯ ರೈಲ್ವೇ ಹೇಳಿದೆ.
ಪಿಯೂಷ್ ಗೋಯೆಲ್ ಹೇಳಿದಂತೆ ಇದು ಎಂಜಿನಿಯರಿಂಗ್ ಮೈಲಿಗಲ್ಲು. ಕಾರಣ ಅತ್ಯಂತ ದುರ್ಗಮ ಪ್ರದೇಶ ಕಣಿವೆಯಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಈ ಪ್ರದೇಶದಲ್ಲಿ ನೇರವಾಗಿ ನಿಲ್ಲಲು ಕೂಡ ಭಯವಾಗುವ ವಾತಾವರಣವಿದೆ. ಆದರೆ ಇದೇ ಕ್ಲಿಷ್ಟ ಪ್ರದೇಶದಲ್ಲಿ ವಿಶ್ವದ ಅತೀ ಎತ್ತರದ ರೈಲು ಸೇತುವೆ ನಿರ್ಮಾಣವಾಗುತ್ತಿದೆ.
ರಿಕ್ಟರ್ ಮಾಪಕದಲ್ಲಿ 8ರ ತೀವ್ರತೆಯ ಭೂಕಂಪನ ತಡೆಯಬಲ್ಲ ರೈಲು ಸೇತುವೆ ಇದಾಗಿದೆ. ಇಷ್ಟೇ ಅಲ್ಲ ಪ್ರಾಕೃತಿಕ ವಿಕೋಪ, ಪ್ರವಾಹಕ್ಕೂ ಜಗ್ಗದ ಸೇತುವೆಯಾಗಿದೆ. ಇನ್ನು 40ಕೆಜಿ ಸುಧಾರಿತ ಟಿಎನ್‌ಟಿ ಸ್ಪೋಟಕಕ್ಕೂ ಈ ಸೇತುವೆ ಜಗ್ಗುವುದಿಲ್ಲ.
ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಕಾಮಗಾರಿಗೆ ಚುರುಕಿನಿಂದ ಸಾಗಿದೆ. ಇಲಾಖೆ ಪ್ರಕಾರ 2022ರ ಡಿಸೆಂಬರ್ ವೇಳೆ ಈ ರೈಲು ಮಾರ್ಗದ ಅತ್ಯಂತ ಸವಾಲಿನ ಭಾಗಗಳು ಪೂರ್ಣಗೊಳ್ಳಲಿದೆ.
ಉದಂಪೂರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ 111 ಕಿಲೋಮೀಟರ್ ಉದ್ದದ ಅತ್ಯಂತ ಕಷ್ಟಕರವಾದ ಭಾಗ ಮುಂದಿನ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಒಟ್ಟು 272 ಕಿಲೋಮೀಟರ್ ಉದ್ದದ ರೈಲು ಯೋಜನೆ ಇದಾಗಿದೆ. ಇದರ ಯೋಜನಾ ವೆಚ್ಚ 28,000 ಕೋಟಿ ರೂಪಾಯಿ.
272 ಕಿಲೋಮೀಟರ್ ಉದ್ದದ ಈ ರೈಲು ಯೋಜನೆಯಲ್ಲಿ ಬರೋಬ್ಬರಿ 37 ಸೇತುವೆಗಳಿವೆ. ಇನ್ನು ಸುರಂಗ ಮಾರ್ಗಗಳ ಕಾಮಾಗಾರಿ ಕೂಡ ಬಹುತೇಕ ಪೂರ್ಣಗೊಂಡಿದೆ. 1997ರಲ್ಲಿ ಈ ಯೋಜನೆ ಶಂಕುಸ್ಥಾನಪೆಯಾಗಿತ್ತು. 2002ರಲ್ಲಿ ಅಟಲಿ ವಾಜಪೇಯಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದರು.
ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆ ಗೋಜಿಗೆ ಹೋಗಿರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಕೈಗೆತ್ತಿಕೊಂಡಿತ್ತು. ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಯಿತು. ಬಳಿಕ ಕಾಮಗಾರಿ ಆರಂಭಿಸಲಾಯಿತು.