ಜಾರ್ಖಂಡ್(ಜೂ.16): ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಚೀನಾ ಸೇನೆ ಗುಂಡಿನ ದಾಳಿ ನಡೆಸಿದ್ದು, ಸೇನಾ ಭಾರತೀಯ ಕಮಾಂಡರ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇಂದು(ಜೂ.16)ರಂದು ನಡೆದ ಬೆಳವಣಿಗೆ ಲಡಾಕ್ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ.  ಇದರ ನಡುವೆ ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಸರ್ಕಾರ, ಜಾರ್ಖಂಡ್‌ನಿಂದ 1600 ಕಾರ್ಮಿಕರನ್ನು ಲಡಾಖ್‌ಗೆ ಕರೆಯಿಸಿಕೊಂಡಿದೆ.

ದುರ್ಬಲ ಎಂದು ಭಾವಿಸಿ ಭಾರತವನ್ನು ಕೆಣಕಬೇಡಿ: ನೆರೆ ರಾಷ್ಟ್ರಗಳಿಗೆ ಸಿಂಗ್‌ ಎಚ್ಚರಿಕೆ.

ಬಾರ್ಡರ್ ರೋಡ್ ಆರ್ಗನೈಸೇಶನ್(BRO) ಜೊತೆ ಒಪ್ಪಂದ ಮಾಡಿಕೊಂಡಿರುವ ಜಾರ್ಖಂಡ್ ರಾಜ್ಯ, ಕಾರ್ಮಿಕರ ಸುರಕ್ಷತೆಗೂ ಅದ್ಯತೆ ನೀಡಿದೆ. 1600 ಕಾರ್ಮಿಕರನ್ನು ಹೊತ್ತ ರೈಲಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೋನ್ ಹಸಿರು ನಿಶಾನೆ ತೋರಿಸಿ ಬೀಳ್ಕೋಟ್ಟಿದ್ದರು. ಸೋಮವಾರ(ಜೂ.15) ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪಿದ್ದ ಕಾರ್ಮಿಕರು. ಅಲ್ಲಿಂದ ಲಡಾಖ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಭಾರತ ಗಡಿಯಲ್ಲಿ ಚೀನಾ ಸೇನೆ; ನರಿ ಬುದ್ದಿ ತೋರಿಸಿತಾ ಕುತಂತ್ರಿ ಚೀನಾ?

ಲಡಾಕ್‌ ತಲುಪುತ್ತಿದ್ದಂತೆ ಗಡಿಯಲ್ಲಿ ಗುಂಡಿನ ಶಬ್ಧಗಳು ಮೊಳಗಿದೆ. ಚೀನಾ ಸೇನೆ ಉದ್ಧಟತನಕ್ಕೆ ಭಾರತ ಕೂಡ ತಿರುಗೇಟು ನೀಡಿದೆ. ಇದೀಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. BRO ಈಗಾಗಲೇ ಜಾರ್ಖಂಡ್ ಜೊತೆ ಒಟ್ಟು 11,815 ಕಾರ್ಮಿಕರ ಒಪ್ಪಂದ ಮಾಡಿಕೊಂಡಿದೆ. ಆಪರೇಶನ್ ವಿಜಯಕ್ ಹಾಗೂ ಹಿಮಾಂಕ್ ಪ್ರಾಜೆಕ್ಟ್ ಸಲುವಾಗಿ ಒಟ್ಟು 11,815 ಕಾರ್ಮಿಕರ ಒಪ್ಪಂದ ಮಾಡಿಕೊಂಡಿದೆ.

ಮೊದಲ ಹಂತದಲ್ಲಿ ಚೀನಾ ಗಡಿ ಭಾಗ ಹಂಚಿಕೊಂಡಿರುವ ಲಡಾಖ್ ವಲಯದಲ್ಲಿ ರಸ್ತೆ ಕಾಮಗಾರಿ ಪುನರ್ ಆರಂಭಿಸಲು BRO ಮುಂದಾಗಿತ್ತು. ಹಲವು ಸುತ್ತಿನ ಮಾತುಕತೆಗಳ ಮೂಲಕ ಸಮಸ್ಯೆ ಹಗೆಹರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು ಇಷ್ಟೇ ಅಲ್ಲ BRO ಕಾಮಗಾರಿ ಆರಂಭಿಸಲು ಅಸ್ತು ಎಂದಿತ್ತು. ಆದರೆ ಕಾರ್ಮಿಕರು ಲಡಾಖ್ ತಲುಪುತ್ತಿದ್ದಂತೆ ಗುಂಡಿನ ಚಕಮಕಿ ನಡೆದಿರುವುದು ಮತ್ತಷ್ಟುು ಆತಂಕ ಸೃಷ್ಟಿಸಿದೆ.