ವಿವಾದಿತ ವಿದೂಷಕ ಕುನಾಲ್ ಕಾಮ್ರಾ, ಆರ್‌ಎಸ್‌ಎಸ್ ಎಂಬ ಬರವಣಿಗೆ ಪಕ್ಕದಲ್ಲಿ ನಾಯಿ ಮೂತ್ರ ಮಾಡುತ್ತಿರುವ ರೀತಿಯ ಟೀಶರ್ಟ್ ಫೋಟೋ ಒಂದನ್ನು ಹಾಕಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ.
ಮುಂಬೈ: ವಿವಾದಿತ ವಿದೂಷಕ ಕುನಾಲ್ ಕಾಮ್ರಾ, ಆರ್‌ಎಸ್‌ಎಸ್ ಎಂಬ ಬರವಣಿಗೆ ಪಕ್ಕದಲ್ಲಿ ನಾಯಿ ಮೂತ್ರ ಮಾಡುತ್ತಿರುವ ರೀತಿಯ ಟೀಶರ್ಟ್ ಫೋಟೋ ಒಂದನ್ನು ಹಾಕಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ.
ಕಾಮಿಡಿ ಶೋ ವೇಳೆ ತೆಗೆದಿದ್ದಲ್ಲ
ಜೊತೆಗೆ ಈ ಫೋಟೋ ಅನ್ನು ಯಾವುದೇ ಕಾಮಿಡಿ ಶೋ ವೇಳೆ ತೆಗೆದಿದ್ದಲ್ಲ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಅದರ ಬೆನ್ನಲ್ಲೇ ಪೋಸ್ಟ್ ಕುರಿತು ಬಿಜೆಪಿ, ಶಿವಸೇನೆಯ ಶಿಂಧೆ ಬಣದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಂತಹ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಸಿದೆ. ಈ ಹಿಂದೆ ಇಂಥದ್ದೇ ಒಂದು ಪೋಸ್ಟ್ ಹಾಕಿದ ವೇಳೆ ಶಿವಸೇನೆ ಕಾರ್ಯಕರ್ತರು ಕಾಮ್ರಾನ ಕಾರ್ಯಕ್ರಮದ ವೇದಿಕೆ ಧ್ವಂಸ ಮಾಡಿದ್ದರು.
ಜಾಗತಿಕ ಚುನಾವಣಾ ಸಮಿತಿ ಅಧ್ಯಕ್ಷರಾಗಿ ಜ್ಞಾನೇಶ್ ಕುಮಾರ್
ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಸಂಸ್ಥೆ ಮತ್ತು ಚುನಾವಣಾ ಸಲಹಾ ಸಮಿತಿಯ 2026ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿ.3ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು 1995ರಲ್ಲಿ ಸ್ಥಾಪನೆಯಾದ ಅಂತರ್ ಸರ್ಕಾರ ಮಟ್ಟದ ಸಂಸ್ಥೆಯಾಗಿದೆ. 35 ಸದಸ್ಯ ದೇಶಗಳನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತದೆ. ಜೊತೆಗೆ 142 ದೇಶಗಳ 3169 ಅಧಿಕಾರಿಗಳಿಗೆ ಚುನಾವನೆ ಸಂಬಂಧ ತರಬೇತಿ ನೀಡಿದೆ.


