ಪಶ್ಚಿಮ ಬಂಗಾಳದಲ್ಲಿ ಸುಮಾರು ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌)ಗಾಗಿ ವಿತರಿಸಲಾದ 14 ಲಕ್ಷ ಫಾರಂಗಳು ವಾಪಸ್‌ ಬರುವುದು ಅನುಮಾನ ಎಂದು ಚುನಾವಣಾ ಆಯೋಗ ಹೇಳಿದೆ. ಈ ಮೂಲಕ ಪಶ್ಟಿಮ ಬಂಗಾಳದ ಮತದಾರರ ಪಟ್ಟಿಯಲ್ಲೂ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಕಡಿತಗೊಳ್ಳುವ ಸುಳಿವನ್ನು ನೀಡಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸುಮಾರು ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌)ಗಾಗಿ ವಿತರಿಸಲಾದ 14 ಲಕ್ಷ ಫಾರಂಗಳು ವಾಪಸ್‌ ಬರುವುದು ಅನುಮಾನ ಎಂದು ಚುನಾವಣಾ ಆಯೋಗ ಹೇಳಿದೆ. ಈ ಮೂಲಕ ಪಶ್ಟಿಮ ಬಂಗಾಳದ ಮತದಾರರ ಪಟ್ಟಿಯಲ್ಲೂ ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಕಡಿತಗೊಳ್ಳುವ ಸುಳಿವನ್ನು ನೀಡಿದೆ.

14 ಲಕ್ಷ ಫಾರಂಗಳು ವಾಪಸ್‌ ಬರುವುದು ಅನುಮಾನ

ನಕಲಿ ವಿಳಾಸ, ನಿಧನ ಅಥ‍ವಾ ಮತದಾರರು ಶಾಶ್ವತವಾಗಿ ಬೇರೆಡೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ 14 ಲಕ್ಷ ಫಾರಂಗಳು ವಾಪಸ್‌ ಬರುವುದು ಅನುಮಾನ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

13.92 ಲಕ್ಷ ಇಂಥ ಫಾರಂಗಳನ್ನು ಗುರುತಿಸಲಾಗಿದೆ

ಮಂಗಳವಾರ ಮಧ್ಯಾಹ್ನವರೆಗೆ 13.92 ಲಕ್ಷ ಇಂಥ ಫಾರಂಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಸೋಮವಾರ ಈ ಸಂಖ್ಯೆ 10.33 ಲಕ್ಷ ಇತ್ತು. ಬೂತ್‌ ಮಟ್ಟದ ಅಧಿಕಾರಿಗಳು ಫಾರಂಗಳನ್ನು ವಿತರಿಸುತ್ತಿದ್ದು, ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 80,600ಕ್ಕೂ ಹೆಚ್ಚು ಬೂತ್‌ ಮಟ್ಟದ ಅಧಿಕಾರಿಗಳು, ಸುಮಾರು 8 ಸಾವಿರ ಸೂಪರ್‌ವೈಸ್‌ಗಳು, 3 ಸಾವಿರ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಮತ್ತು 294 ಚುನಾವಣಾ ನೋಂದಣಿ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ತೊಡಗಿಕೊಂಡಿದ್ದಾರೆ.