Asianet Suvarna News Asianet Suvarna News

ಇಂದೋರ್ ಏರ್‌ಪೋರ್ಟ್‌ನ ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ

ಇಂದೋರ್  ವಿಮಾನ ನಿಲ್ದಾಣದ ಕೊಳಚೆ ನೀರಿನ ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಸ್ಥಿಪಂಜರವನ್ನು ವಶಕ್ಕೆ ಪಡೆದಿದ್ದಾರೆ.

Madhya pradesh Human skeleton found in Indore Airport sewage pit akb
Author
First Published Jan 25, 2023, 9:39 PM IST

ಇಂದೋರ್: ಇಂದೋರ್  ವಿಮಾನ ನಿಲ್ದಾಣದ ಕೊಳಚೆ ನೀರಿನ ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಸ್ಥಿಪಂಜರವನ್ನು ವಶಕ್ಕೆ ಪಡೆದಿದ್ದು, ಈ ಅಸ್ಥಿಪಂಜರಕ್ಕೆ ಒಂದು ವರ್ಷ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಅಂದಾಜಿಸಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಲಿದೆ ಏಕೆಂದರೆ ಅತ್ಯಂತ ಹೆಚ್ಚು ಭದ್ರತೆ ಇರುವ ವಿಮಾನ ನಿಲ್ದಾಣದ ಒಳಗೆ ಯಾರೋ ನುಗ್ಗಿ ಗುಂಡಿ ತೋಡಿ ಯಾರಿಗೂ ತಿಳಿಯದಂತೆ ಶವವನ್ನು ಹೂತಿದ್ದು ಹೇಗೆ ಎಂಬುದು ಎಲ್ಲರ ಆತಂಕ ಅಚ್ಚರಿಗೆ ಕಾರಣವಾಗಿದೆ. 

ಇಂದೋರ್ ಏರ್‌ಪೋರ್ಟ್ (Indore Airport) ಪೊಲೀಸ್ ಠಾಣೆಯ ಮೇಲುಸ್ತುವಾರಿ ಸಂಜಯ್ ಶುಕ್ಲಾ (sanjay Shukla)ಪ್ರತಿಕ್ರಿಯಿಸಿದ್ದು, ನಮಗ 9.30ರ ಸುಮಾರಿಗೆ ವಿಮಾನ ನಿಲ್ದಾಣದ ಭದ್ರತಾ ಮೇಲುಸ್ತುವಾರಿ ವಿನೋದ್ ಸೋನಿಯವರಿಂದ (Vinod sony) ಕರೆಯೊಂದು ಬಂದಿದೆ,  ಇಲೆಕ್ಟ್ರಿಕ್‌ ವಯರಿಂಗ್‌ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದ ವೇಳೆ ಉದ್ಯೋಗಿಯೊಬ್ಬರಿಗೆ ಚರಂಡಿಯಲ್ಲಿ(sewage) ಮಾನವ ಅಸ್ಥಿಪಂಜರ ಇರುವುದು ಕಾಣಿಸಿದೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ವಿನೋದ್ ಸೋನಿಯವರ ದೂರನ್ನು ದಾಖಲಿಸಿಕೊಂಡು ಪೊಲೀಸ್ ತಂಡವೊಂದು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಜೊತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾಗಿ ಶುಕ್ಲಾ ಹೇಳಿದ್ದಾರೆ. 

ಬಿಎಸ್‌ವೈಗೆ ಬರ್ತ್‌ಡೇ ಗಿಫ್ಟ್, ಫೆ.27ಕ್ಕೆ ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ!

ಇಂದೋರ್‌ ಏರ್‌ಪೋರ್ಟ್‌ನ  ಹೊರ ವ್ಯಾಪ್ತಿಯ ಒಳಗೆ 4 ರಿಂದ 5 ಅಡಿ ಆಳದ ಹೊಂಡದಲ್ಲಿ ಕೊಳಚೆ ನೀರು ಹರಿಯಲು ಅಳವಡಿಸಿದ ಕಾಲುವೆಯಂತಹ ಪ್ರದೇಶದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಆ ಬಗ್ಗೆ ವರದಿ ಇನ್ನಷ್ಟೇ ಬರಬೇಕಿದೆ ಎಂದು ಶುಕ್ಲಾ ಹೇಳಿದ್ದಾರೆ. 

ಅಸ್ಥಿಪಂಜರದ ಎತ್ತರವನ್ನು ಗಮನಿಸಿದಾಗ ಇದೊಂದು ಸಣ್ಣ (ಯುವ) ವಯಸ್ಸಿನ ವ್ಯಕ್ತಿಯ ಶವ ಎಂದು ಕಾಣಿಸುತ್ತದೆ. ಈ  ಅಸ್ಥಿಪಂಜರಕ್ಕೆ ಕನಿಷ್ಠ ಒಂದು ವರ್ಷವಾದರೂ ಆಗಿರಬಹುದು. ಶವಕ್ಕೆ ಸಂಬಂಧಿಸಿದಂತೆ ಅದು ಸಿಕ್ಕ ಸ್ಥಳದಲ್ಲಿ ಬೇರೆ ಯಾವುದೇ ಸುಳಿವುಗಳಾಗಲಿ ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ  ಬಿ.ಎಲ್ ಮಂಡೋಲಿ ಹೇಳಿದ್ದಾರೆ. 

30 ಜನರ ಬಿಟ್ಟು 5 ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ

Follow Us:
Download App:
  • android
  • ios