ಕೋಲ್ಕತ್ತಾದ 24ರ ಹರೆಯದ ಮಹಾಶ್ವೇತ 6 ಬಾರಿ ವಿದ್ಯಾರ್ಥಿಗಳ ಕರೆತಂದ ಪೈಲಟ್ ಈಕೆ ಆಪರೇಷನ್ ಗಂಗಾ ಕಾರ್ಯಾಚರಣೆ ತಂಡದ ಸದಸ್ಯೆ

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆಯಡಿಯಲ್ಲಿ ಭಾರತ ಸರ್ಕಾರ ಸ್ಥಳಾಂತರ ಮಾಡಿತ್ತು. ಈ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಮಹಿಳಾ ಪೈಲಟ್ ಕೋಲ್ಕತ್ತಾದ ಮಹಾಶ್ವೇತಾ ಚಕ್ರವರ್ತಿ ಅವರು ಒಟ್ಟು ಆರು ಬಾರಿ ವಿದ್ಯಾರ್ಥಿಗಳನ್ನು ಹೊತ್ತ ವಿಮಾನವನ್ನು ಚಲಾಯಿಸಿದ್ದಾರೆ. ಪೋಲೆಂಡ್ ಮತ್ತು ಹಂಗೇರಿಯಿಂದ 800 ವಿದ್ಯಾರ್ಥಿಗಳನ್ನು ಇವರು ರಕ್ಷಣೆ ಮಾಡಿದ್ದಾರೆ. 

ಕೋಲ್ಕತ್ತಾದ ನ್ಯೂ ಟೌನ್ ನಿವಾಸಿಯಾಗಿರುವ 24 ವರ್ಷದ ಮಹಿಳಾ ಪೈಲಟ್‌ ಮಹಾಶ್ವೇತಾ ಪೋಲಿಷ್ ಮತ್ತು ಹಂಗೇರಿಯನ್ ಗಡಿಗಳಿಂದ 800 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆಪರೇಷನ್ ಗಂಗಾದ ಹೆಮ್ಮೆಯ ಸದಸ್ಯರಾದ ಮಹಾಶ್ವೇತಾ ಚಕ್ರವರ್ತಿ ಅವರು ಫೆಬ್ರವರಿ 27 ಮತ್ತು ಮಾರ್ಚ್ 7 ರ ನಡುವೆ ಆರು ಬಾರಿ ಸ್ಥಳಾಂತರಿಸುವ ವಿಮಾನಗಳನ್ನು ಹಾರಿಸಿದರು ಪೋಲೆಂಡ್‌ನಿಂದ ನಾಲ್ಕು ಮತ್ತು ಹಂಗೇರಿಯಿಂದ ಎರಡು ಬಾರಿ ಅವರು ಈ ವಿದ್ಯಾರ್ಥಿಗಳನ್ನು ಕರೆ ತಂದಿದ್ದಾರೆ. 

ರಷ್ಯಾ ಉಕ್ರೇನ್ ಯುದ್ಧ.. ರಾಶಿರಾಶಿ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ಈ ಬಗ್ಗೆ ಮಾತನಾಡಿದ ಅವರು ಇದು ಜೀವಮಾನದ ಅನುಭವವಾಗಿದೆ. ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳು ಹದಿಹರೆಯದ ಕೊನೆಯ ಮತ್ತು ಇಪ್ಪತ್ತರ ಆರಂಭದಲ್ಲಿ ಇದ್ದವರಾಗಿದ್ದರು. ಅವರಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಬದುಕುಳಿಯುವೆವೋ ಇಲ್ಲವೋ ಎಂಬ ಆಘಾತದಲ್ಲಿ ಇದ್ದರು ಎಂದು ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಭಾರತೀಯ ವಿಮಾನವನ್ನು ಹಾರಾಟ ನಡೆಸುತ್ತಿರುವ ಚಕ್ರವರ್ತಿ ಹೇಳಿದರು. ನಾನು ಅವರ ಹೋರಾಟದ ಮನೋಭಾವವನ್ನು ಅಭಿನಂದಿಸುತ್ತೇನೆ ಮತ್ತು ಅವರು ಮನೆಗೆ ಹಿಂದಿರುಗುವಲ್ಲಿ ನಾನು ಪಾತ್ರವಹಿಸಿದ್ದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರಕ್ಕೆ ಭಾರತವು ಒಟ್ಟು 77 ವಿಮಾನಗಳ ಹಾರಾಟ ನಡೆಸಿದೆ. ಇವುಗಳಲ್ಲಿ ಹೆಚ್ಚಿನ ವಿಮಾನಗಳನ್ನು ಏರ್ ಇಂಡಿಯಾ ನಿರ್ವಹಿಸುತ್ತಿದೆ. 

Russia-Ukraine War: ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ದಾಳಿ

ಈ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಇಂಡಿಗೋ (IndiGo) ಮತ್ತು ಸ್ಪೈಸ್‌ಜೆಟ್‌ನಂತಹ (SpiceJet) ಇತರ ವಿಮಾನಯಾನ ಸಂಸ್ಥೆಗಳು ಸಹ ಭಾರತೀಯ ಸೇನೆಯೊಂದಿಗೆ ತಮ್ಮ ಸೇವೆಗಳನ್ನು ನೀಡಿವೆ. ನನ್ನ ಏರ್‌ಲೈನ್‌ನಿಂದ ತಡರಾತ್ರಿಯಲ್ಲಿ ನನಗೆ ಕರೆ ಬಂದಿತು ಮತ್ತು ನನ್ನನ್ನು ರಕ್ಷಣಾ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಯಿತು ಎಂದು ಚಕ್ರವರ್ತಿ ಹೇಳುತ್ತಾರೆ. ನಂತರ ನಾನು ಎರಡು ಗಂಟೆಯಲ್ಲಿ ಪ್ಯಾಕ್ ಮಾಡಿ ಹೊರಟೆ. ನಾನು ಪೋಲೆಂಡ್‌ನಿಂದ ಇಸ್ತಾನ್‌ಬುಲ್‌ಗೆ ಎರಡೂವರೆ ಗಂಟೆಗಳಲ್ಲಿ ವಿಮಾನ ಹಾರಿಸಿದೆ. ಅಲ್ಲಿಂದ ನಮಗೆ ರಕ್ಷಣಾ ಕಾರ್ಯಾಚರಣೆಗೆ ಸೂಚಿಸಲಾಯಿತು ಎಂದರು. 

ಇಂದಿರಾ ಗಾಂಧಿ ರಾಷ್ಟ್ರೀಯ ಯುರಾನ್ ಅಕಾಡೆಮಿಯಿಂದ ಪದವಿ ಪಡೆದಿರುವ ಈ ಮಹಾಶ್ವೇತಾ ಏರ್‌ಬಸ್ A 320 ಅನ್ನು ದಿನಕ್ಕೆ 13-14 ಗಂಟೆಗಳ ಕಾಲ ಹಾರಿಸಿದ ನಂತರ ಆದ ದೈಹಿಕ ಬಳಲಿಕೆಯನ್ನು ಹೇಳಿಕೊಂಡರು. ಉಕ್ರೇನ್‌ನಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳು ತುಂಬಾ ಭಯಗೊಂಡಿದ್ದರು. ನಾವು ಅವರಿಗೆ ಆಹಾರ ಮತ್ತು ಪಾನೀಯಗಳನ್ನು ನೀಡಿದೆವು. ಆದರೆ ಅವರು ನೀರು ಕುಡಿಯಲು ಸಹ ಬಯಸಲಿಲ್ಲ ಎಂದರು.

ಈ ನಡುವೆ ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ತೀವ್ರವಾಗಿದೆ. ಬುಧವಾರ ಕದನವಿರಾಮದ (ceasefire) ಕಾರಣ ನೀಡಿ ಸುಮ್ಮನಿದ್ದ ರಷ್ಯಾ (Russia), ಗುರುವಾರ ಉಕ್ರೇನ್‌ನ ಮರಿಯುಪೋಲ್‌ (Mariupol) ಹಾಗೂ ಇತರ ಕೆಲವು ನಗರಗಳ 3 ಆಸ್ಪತ್ರೆಗಳ ಮೇಲೆ ವಾಯುದಾಳಿ (AirStrike) ನಡೆಸಿದೆ. ಈ ದಾಳಿಯಲ್ಲಿ ಅನೇಕ ಮಕ್ಕಳು, ರೋಗಿಗಳು ಹಾಗೂ ಬಾಣಂತಿಯರು ಸಾವನ್ನಪ್ಪಿದ ಶಂಕೆ ಇದೆ.