ಆಟೋವೊಂದು ರಸ್ತೆಯಲ್ಲೆ ಟರ್ನ್ ಆಗುತ್ತಿದ್ದ ವೇಳೆ ಪಕ್ಕದಲ್ಲೇ ಪಾಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಚಾಲಕ ರಿಕ್ಷಾದಿಂದ ಹೊರಕ್ಕೆ ಬಿದ್ದಿದ್ದಾನೆ. ಆದರೆ ಆಟೋ ಮಾತ್ರ ಸ್ವಯಂ ಚಾಲನೆಯಲ್ಲೇ ಇದ್ದು, ಚಾಲಕನಿಲ್ಲದೇ ಅಲ್ಲೇ ಒಂದು ಸುತ್ತು ಬಂದ ಆಟೋ ಬಳಿಕ ಎದುರಿಗೆ ಸಿಕ್ಕ ಇನ್ನಿಬ್ಬರಿಗೆ ಡಿಕ್ಕಿ ಹೊಡೆದಿದೆ. 

ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಆಟೋವೊಂದು ರಸ್ತೆಯಲ್ಲೆ ಟರ್ನ್ ಆಗುತ್ತಿದ್ದ ವೇಳೆ ಪಕ್ಕದಲ್ಲೇ ಪಾಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಚಾಲಕ ರಿಕ್ಷಾದಿಂದ ಹೊರಕ್ಕೆ ಬಿದ್ದಿದ್ದಾನೆ. ಆದರೆ ಆಟೋ ಮಾತ್ರ ಸ್ವಯಂ ಚಾಲನೆಯಲ್ಲೇ ಇದ್ದು, ಚಾಲಕನಿಲ್ಲದೇ ಅಲ್ಲೇ ಒಂದು ಸುತ್ತು ಬಂದ ಆಟೋ ಬಳಿಕ ಎದುರಿಗೆ ಸಿಕ್ಕ ಇನ್ನಿಬ್ಬರಿಗೆ ಡಿಕ್ಕಿ ಹೊಡೆದಿದೆ. ಈ ಭಯಾನಕ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೊಲ್ಹಾಪುರದ ಶಹುಪುರಿ ಬಳಿಯ ಪಟ್ಕಿ ಆಸ್ಪತ್ರೆ ಸಮೀಪವೇ ಈ ಅವಘಡ ಸಂಭವಿಸಿದೆ. ಆಟೋಚಾಲಕ ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಬೈಕೊಂದು ಬಂದು ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಚಾಲಕ ಆಟೋದಿಂದ ಹೊರಬಿದ್ದಿದ್ದಾನೆ. ಆದರೆ ಚಾಲಕನಿಲ್ಲದಿದ್ದರೂ ಆಟೋ ಅಲ್ಲೇ ಒಂದು ಸುತ್ತು ಬಂದಿದ್ದು, ಎದುರಿಗೆ ಸಿಕ್ಕ ಒಬ್ಬ ಪುರುಷ ಹಾಗೂ ಮಹಿಳೆಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಚಲಿಸಿದೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಜೀವಹಾನಿಯಾಗಿಲ್ಲ, 

ಕಾರು ಹಿಟ್ & ರನ್: ಎತ್ತರಕ್ಕೆ ಹಾರಿ ಕೆಳಗೆ ಬಿದ್ದರೂ ಯುವತಿ ಪವಾಡಸದೃಶ ಪಾರು: ವೀಡಿಯೋ ವೈರಲ್

ವಾರದ ಹಿಂದಷ್ಟೇ ಕೊಲ್ಹಾಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಪ್ರಾಣ ಬಿಟ್ಟಿದ್ದರು. ಈ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ಅಪಘಾತ ನಡೆದಿದೆ. ಜೂನ್ 3ರಂದು ಕೊಲ್ಹಾಪುರದಲ್ಲಿ ನಡೆದ ಅಪಘಾತದಲ್ಲಿ 72 ವರ್ಷದ ಕಾರು ಚಾಲಕರೊಬ್ಬರಿಗೆ ಕಾರು ಚಾಲನೆಯಲ್ಲಿರುವಾಗಲೇ ಹೃದಯಾಘಾತವಾಗಿತ್ತು. ಇದರಿಂದ ಸಿಗ್ನಲ್‌ನಲ್ಲಿ ವಿವಿಧಿ ವಾಹನಗಳಿಗೆ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ಜನ ಸಾವನ್ನಪ್ಪಿದ್ದರು. 

ಸಿಗ್ನಲ್ ಹಾರಲು ಹೋಗಿ ಅವಾಂತರ: ಕಾರಿಗೆ ಡಿಕ್ಕಿ ಹೊಡೆದ 4 ಪಲ್ಟಿ ಹೊಡೆದ ಕಾರು: ಸಿಸಿಟಿವಿ ದೃಶ್ಯ ವೈರಲ್‌

Scroll to load tweet…